Namma metro: ಸಂಪೂರ್ಣ ನೇರಳೆ ಮಾರ್ಗ ಉದ್ಘಾಟನೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದ BMRCL, ಕೆರಳಿದ IT ಉದ್ಯೋಗಿಗಳು

ಬೆಂಗಳೂರು, ಅಕ್ಟೋಬರ್‌, 06: ಬೆಂಗಳೂರಿನ ನೇರಳೆ ಮಾರ್ಗದ ಕೆಂಗೇರಿ ಚಲ್ಲಘಟ್ಟ ಹಾಗೂ ಗರುಡಾಚಾರ್ ಪಾಳ್ಯ ಮತ್ತು ವೈಟ್ ಫೀಲ್ಡ್ ನಡುವೆ ಇದೇ ಅಕ್ಟೋಬರ್‌ 6 ಅಥವಾ 7ರಂದು ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಬಿಎಂಆರ್‌ಸಿಎಲ್‌, ಉದ್ಘಾಟನೆ ದಿನಾಂಕ ಇನ್ನೂ ನಿಗದಿಯಾಗಿಲ್ಲ ಸುಳ್ಳು ಸುದ್ದಿಗೆ ತೆರೆ ಎಳೆದಿದೆ. ಹಾಗಾದರೆ ಈ ಬಗ್ಗೆ ಬಿಎಂಆರ್‌ಸಿಎಲ್‌ ಇನ್ನೇನು ಮಾಹಿತಿ ನೀಡಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಅಕ್ಟೋಬರ್‌ 6 ಅಥವಾ 7ರಂದು ನೇರಳೆ ಮೆಟ್ರೋ ಮಾರ್ಗ ಉದ್ಘಾಟನೆ ಆಗಲಿದೆ ಎನ್ನುವ ಸುದ್ದಿಯನ್ನು ತಿಳಿದಿದ್ದ ಐಟಿ ಉದ್ಯೋಗಿಗಳು ಸಂತಸಗೊಂಡಿದ್ದರು. ಆದರೆ ಇದೀಗ ಈ ಮಾರ್ಗದ ಉದ್ಘಾಟನೆ ವಿಳಂಬವಾಗಲಿದೆ ಎಂದು ಬಿಎಂಆರ್‌ಸಿಎಲ್‌ ನೀಡಿದ ಮಾಹಿತಿಯಿಂದ ಐಟಿ ಉದ್ಯೋಗಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ.

Namma metro: No date set for inauguration of entire purple line: BMRCL

ಬೆಂಗಳೂರಿನ ನೇರಳೆ ಮಾರ್ಗದಲ್ಲಿ ಕೆಂಗೇರಿ ಚಲ್ಲಘಟ್ಟ ಹಾಗೂ ಗರುಡಾಚಾರ್ ಪಾಳ್ಯ ಮತ್ತು ವೈಟ್ ಫೀಲ್ಡ್ ನಡುವಿನ ಮೆಟ್ರೋ ಮಾರ್ಗದ ಉದ್ಘಾಟನೆ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. ಆದರೆ ಅಕ್ಟೋಬರ್‌ 6 ಅಥವಾ 7 ರಂದು ಈ ಮಾರ್ಗಗಳನ್ನು ಉದ್ಘಾಟನೆ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿ ಹರದಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಎಂಡಿ ಮಾಹಿತಿ ರವಾನಿಸಿದ್ದಾರೆ.

ಮೆಟ್ರೋ ರೈಲು ಸಂಚಾರಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಇನ್ನು ಉದ್ಘಾಟನೆ ಮಾತ್ರ ಬಾಕಿಯಿದ್ದು, ಶೀಘ್ರವೇ ದಿನಾಂಕ ನಿಗದಿ ಮಾಡಿಕೊಂಡು ಉದ್ಘಾಟನೆ ನೆರವೇರಿಸಲಾಗುವುದು ಎಂದು ಬಿಎಂಆರ್‌ಸಿ ಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ ಎಂದು ಎಐಎನ್‌ ವರದಿ ಮಾಡಿದೆ.

ನಮ್ಮ ಮೆಟ್ರೋ ನೇರಳೆ ಮಾರ್ಗವು ಚಲ್ಲಘಟ್ಟದಿಂದ ಆಡುಗೋಡಿವರೆಗೆ ನಿರ್ಮಾಣ ಮಾಡಲಾಗಿದೆ. ಕೆಂಗೇರಿ-ಚಲ್ಲಘಟ್ಟ ವಿಸ್ತರಿಸಿದ ಮಾರ್ಗ ಮತ್ತು ಬೈಯಪ್ಪನಹಳ್ಳಿ- ಕೆ.ಆರ್.ಪುರಂ ಸಂಪರ್ಕ ಕೊಂಡಿ ಮಾರ್ಗದ ಕೆಲಸ ಪೂರ್ಣಗೊಂಡಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಕಳೆದ ವಾರವಷ್ಟೇ ಈ ಎರಡೂ ಮಾರ್ಗಗಳಲ್ಲಿ ಮೆಟ್ರೋ ಓಡಿಸಲು ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ-ಕೆಆರ್ ಪುರ ವರೆಗೆ 2.2 ಕಿಲೋ ಮೀಟರ್‌ ಉದ್ದದ ಮಾರ್ಗವು ಹಾಗೂ ಕೆಂಗೇರಿ- ಚಲ್ಲಘಟ್ಟ 1.3 ಕಿಮೀ ಮಾರ್ಗದಲ್ಲಿ ಶೀಘ್ರವೇ ಮೆಟ್ರೋ ಸಂಚಾರ ಮಾಡಲಿದೆ. ಆದರೆ ಗಣ್ಯರಿಂದ ಉದ್ಘಾಟನೆ ಮಾಡಿಸಲು ದಿನಾಂಕ ಹೊಂದಾಣಿಕೆ ಮಾಡಲಾಗುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಣ್ಯರಿಂದ ಉದ್ಘಾಟನೆ ನೆರವೇರಿದ ಬಳಿಕ ಅಕ್ಟೋಬರ್‌ ತಿಂಗಳೊಳಗೆ ಮೈಸೂರು ರಸ್ತೆಯ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ 42.53 ಕಿ.ಮೀ ಮಾಸಂಪೂರ್ಣವಾಗಿ ವಾಣಿಜ್ಯ ಬಳಕೆಗೆ ಮುಕ್ತಗೊಳ್ಳಲಿದೆ. ಇದರಿಂದಾಗಿ ಐಟಿ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರು ಮೈಸೂರು ರಸ್ತೆಯಿಂದ ಸುಲಭವಾಗಿ ವೈಟ್‌ಫಿಲ್ಡ್‌ಗೆ ತೆರಳಲು ಅನುಕೂಲವಾಗಲಿದೆ.

ಒಟ್ಟಿನಲ್ಲಿ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಟ್ರಾಫಿಕ್‌ ಸಮಸ್ಯೆಯಿಂದ ದಿನನಿತ್ಯ ಪರದಾಡುತ್ತಿರುವ ಐಟಿ ಉದ್ಯೋಗಿಗಳ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+