Namma metro: ಕೊರೊನಾ ಹೊಸ ರೂಪಾಂತರಿಯಿಂದ ರಕ್ಷಿಸಿಕೊಳ್ಳಲು ನಮ್ಮ ಮಟ್ರೋದಲ್ಲಿ ಪ್ರಯಾಣಿಕರು ಪಾಲಿಸಬೇಕಾದ ಅಂಶಗಳಿವು

ಬೆಂಗಳೂರು, ಡಿಸೆಂಬರ್‌, 20: ಈಗಾಗಲೇ ಈ ಹಿಂದೆ ದೇಶದಲ್ಲಿ ಮಹಾಮಾರಿ ಕೊರೊನಾ ಜನರನ್ನು ತಲ್ಲಣಗೊಳ್ಳುವಂತೆ ಮಾಡಿತ್ತು. ಇದೀಗ ಇದರ ಹೊಸ ರೂಪಾಂತರ jn1 ಮತ್ತೆ ಜನರನ್ನು ಬೆಚ್ಚಿ ಬಿಳುವಂತೆ ಮಾಡಿದೆ. ಆದ್ದರಿಂದ ಕರ್ನಾಟಕದಲ್ಲಿ ಸರ್ಕಾರ ಮುಂಜಾಗ್ರತೆಗಾಗಿ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಹಾಗೆಯೇ ಮಾಸ್ಕ್‌ ಕಡ್ಡಾಯವಲ್ಲದಿದ್ದರೂ ಕೋವಿಡ್‌ನಿಂದ ರಕ್ಷಸಿಕೊಳ್ಳಲು ಮೆಟ್ರೋದಲ್ಲಿ ಪ್ರಯಾಣಿಕರು ಈ ಅಂಶಗಳನ್ನು ಪಾಲಿಸಿದರೆ ಒಳ್ಳೆಯದು.

ದೇಶದಲ್ಲಿ ಮಹಮಾರಿ ಕೊರೊನಾ ಹೊಸ ರೂಪಾಂತರ jn1 ಹೆಚ್ಚಳವಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂಜಾಗ್ರತಾ ಕ್ರಮ ಕೈಗೊಂಡಿವೆ. ಆದರೆ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುವ ಬೆಂಗಳೂರಿನ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಗಳಲ್ಲಿ ಯಾವುದೇ ಕ್ರಮಕ್ಕೆ ಸರ್ಕಾರ ಮುಂದಾಗಿಲ್ಲ.

Namma metro: Important information for travelers to protect from new variant of Corona, know details

ಆದ್ದರಿಂದ ಬಿಎಂಆರ್‌ಸಿಎಲ್‌ ಸೇರಿದಂತೆ ಸಾರಿಗೆ ನಿಗಮಗಳು ಸದ್ಯಕ್ಕೆ ತನ್ನ ಪ್ರಯಾಣಿಕರಿಗೆ ಮಾಸ್ಕ್‌ ಕಡ್ಡಾಯ ಮಾಡಿಲ್ಲ. ಸರ್ಕಾರದ ನಿರ್ದೇಶನಕ್ಕೆ ಕಾಯುತ್ತಿವೆ. ಆದರೆ, ಮೆಟ್ರೋದಲ್ಲಿ ಸದಾ ಎಸಿ ಬಳಸುವುದರಿಂದ ಹಾಗೂ ಪ್ರಯಾಣಿಕರು ನಡುವೆ ಅಂತರ ಇಲ್ಲದೇ ಪ್ರಯಾಣ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸ್ವತಃ ಪ್ರಯಾಣಿಕರೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡು ಕೊರೊನಾ ಹೊಸ ವೈರಾಣುವಿನಿಂದ ರಕ್ಷಣೆ ಮಾಡಿಕೊಳ್ಳಬೇಕಿದೆ.

ಪ್ರಮುಖವಾಗಿ ಕೊರೊನಾ ಸೋಂಕಿಗೆ ಮುಂಜಾಗ್ರತೆಯೇ ಮೊದಲ ಮದ್ದು ಎಂದು ವಿಶ್ವಸಂಸ್ಥೆ ಹೇಳಿದೆ. ಅಂದರಂತೆ ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಬಳಸುವ ಸಂದರ್ಭದಲ್ಲಿ, ಜನದಟ್ಟಣೆ ಇರುವ ಕಡೆಗಳಲ್ಲಿ ಕಟ್ಟುನಿಟ್ಟಾಗಿ ಕೊರೊನಾ ತಗುಲದಂತೆ ಸ್ವಯಂ ರಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.

ಪ್ರಯಾಣಿಕರು ಇವುಗಳನ್ನು ಪಾಲಿಸಿದರೆ ಉತ್ತಮ

1. ಮೆಟ್ರೋ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಮಾಸ್ಕ್‌ ಕಡ್ಡಾಯವಾಗಿ ಧರಿಸಿ.

2. ಪ್ರಯಾಣಿಕರ ನಡುವೆ ಅಂತರ ಕನಿಷ್ಟ 3 ಅಡಿಯಷ್ಟು ಕಾಯ್ದುಕೊಳ್ಳಬೇಕು

3. ಪ್ರಯಾಣಿಕರ ಸಂಖ್ಯೆ ಅತೀ ಹೆಚ್ಚಿದ್ದಾಗ ಆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಬೇಡಿ.

4. ಟಿಕೆಟ್‌ ಪಡೆಯುವಾಗ, ರೈಲು ಹತ್ತುವಾಗ ಸರತಿಯಲ್ಲಿ ನಿಂತಿದ್ದರೆ ಅಲ್ಲಿಯೂ ಅಂತರ ಕಾಪಾಡಿಕೊಂರಡ ಒಳ್ಳೆಯದು.

5. ಅನಗತ್ಯವಾಗಿ ರೈಲಿನಲ್ಲಿ ಗಾಜು, ಕಿಟಕಿ ಮುಟ್ಟಬೇಡಿ.

5. ರೋಗ ನಿರೋಧಕ ಶಕ್ತಿ ಕಡಿಮೆ ಉಳ್ಳವರು, ಬಾಣಂತಿಯರು, ದೀರ್ಘ ಕಾಲದ ಅನಾರೋಗ್ಯ ಹೊಂದಿರುವವರು ಕೆಲ ದಿನ ಮೆಟ್ರೋ ಬಳಸದಿರುವುದೇ ಉತ್ತಮ.

6. ಸೋಂಕಿನ ಲಕ್ಷಣಗಳಿದ್ದರೆ ಮೆಟ್ರೋ ಬಳಸಬೇಡಿ. ಇನ್ನೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.

7. ಮೆಟ್ರೋ ಕಾಯಿನ್‌ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಆಗುತ್ತದೆ. ಸಾಧ್ಯ ಆದಷ್ಟು ಸ್ಮಾರ್ಟ್‌ ಕಾರ್ಡ್‌, ಮೊಬೈಲ್ ಕ್ಯುಆರ್‌ ಕೋಡ್‌ ಬಳಸಿ.

8. ಪ್ರಯಾಣ ಮುಗಿದ ಬಳಿಕ ಮನೆಗೆ ತೆರಳಿದ ಕೂಡಲೇ ಕೈ ತೊಳೆಯುವುದು, ಸ್ನಾನ ಮಾಡುವುದು ಉತ್ತಮವಾಗಿದೆ.

9 ಹಣ ವರ್ಗಾವಣೆಗಿಂತ ಡಿಜಿಟಲ್‌ ಪೇಮೆಂಟ್‌ ಬಳಸಿದರೆ ಉತ್ತಮ.

10. ಯಾವುದಕ್ಕೂ ಸುರಕ್ಷತೆಗಾಗಿ ಸ್ಯಾನಿಟೈಸರ್‌ ಅನ್ನು ಬ್ಯಾಗ್‌ಗಳಲ್ಲಿ ಇಟ್ಟುಕೊಂಡರೆ ಒಳ್ಳೆಯದು.

ಈಗಗಾಗಲೇ ಸರ್ಕಾರವು ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್‌ ಕಡ್ಡಾಯ ಮಾಡಿದೆ. ಇನ್ನು ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲಿ ಕೋವಿಡ್‌ ರೂಪಾಂತರ ತಳಿಯಾದ ಜೆಎನ್‌-1 ಪ್ರಕರಣ ಪತ್ತೆಯಾದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಸಾರ್ವಜನಿಕ ಸಲಹೆ ನೀಡಿದೆ.

ಪ್ರಸ್ತುತ ಚಳಿಗಾಲದ ಹವಾಮಾನ, ಕ್ರಿಸ್‌ಮಸ್‌ ಮತ್ತು ಹೊಸ ವರ್ಷಾಚರಣೆ ಜನದಟ್ಟಣೆಯಿಂದಾಗಿ ಸೋಂಕು ಹರಡುವ ಸಾಧ್ಯತೆಯಿದೆ. ಆದ್ದರಿಂದ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಆಧರಿಸಿ ಸೂಚನೆಗಳನ್ನು ಪಾಲಿಸುವಂತೆ ಇಲಾಖೆ ಆಯುಕ್ತ ಡಿ.ರಂದೀಪ್‌ ಸೂಚನೆ ನೀಡಿದ್ದಾರೆ.

ಇನ್ನು ಹಿರಿಯ ನಾಗರಿಕರು ಅಂದರೆ 60 ವರ್ಷ ಮೇಲ್ಪಟ್ಟವರು, ದೀರ್ಘಕಾಲೀನ ಆರೋಗ್ಯ ಸಮಸ್ಯೆ ಹೊಂದಿರುವವರು, ಗರ್ಭಿಣಿಯರು, ಬಾಣಂತಿಯರು ಮನೆಯಿಂದ ಹೊರ ಹೋಗುವಾಗ, ಸಾರ್ವಜನಿಕವಾಗಿ ಹೆಚ್ಚು ಜನಸಂದಣಿ ಇರುವ ಕಡೆಗಳಲ್ಲಿ ಮಾಸ್ಕ್‌ ಧರಿಸಬೇಕು.

ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸಮಸ್ಯೆ, ಶೀತ ಸಂಬಂಧಿ ತೊಂದರೆಗಳು ಹಾಗೂ ಸೋಂಕು ಲಕ್ಷಣಗಳನ್ನು ಹೊಂದಿರುವವರು ತಕ್ಷಣವೇ ವೈದ್ಯರ ಸಲಹೆ ಪಡೆಯುವುದು ಉತ್ತಮ. ಪೂರ್ಣ ಗುಣ ಹೊಂದುವವರೆಗೂ ಪ್ರತ್ಯೇಕ ವಾಸದಲ್ಲಿರಬೇಕು. ಮಾಸ್ಕ್‌ ಧರಿಸುವುದು, ಆಗಾಗ್ಗೆ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಅನಾರೋಗ್ಯ ಕಾಣಿಸಿಕೊಂಡರೆ ಮನೆಯಲ್ಲಿರುವುದೇ ಸೂಕ್ತ ಅಂತಲೂ ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+