ಆಟೋ, ಟ್ಯಾಕ್ಸಿ, ಬಸ್‌ಗಿಂತ ನಮ್ಮ ಮೆಟ್ರೋ ಬೆಲೆ ಕಡಿಮೆಯೇ ಇದೆ! BMRCL
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಳ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಈ ನಡುವೆ ಬೆಲೆ ಏರಿಕೆಯ ಬಗ್ಗೆ ಮೆಟ್ರೋ ಕೊಟ್ಟಿರುವ ಸ್ಪಷ್ಟನೆ ಜನರನ್ನು ಕೆರಳಿಸುವಂತೆ ಮಾಡಿದೆ. ದೇಶದ ಪ್ರಮುಖ ಮೆಟ್ರೋಗಳಿಗಿಂತಲೂ ರಾಜ್ಯ ರಾಜಧಾನಿ ಬೆಂಗಳೂರು ಮೆಟ್ರೋದ ಪ್ರಯಾಣ ದರವು ಹೆಚ್ಚಳವಾಗಿದ್ದು, ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು ಮೆಟ್ರೋ ಪ್ರಯಾಣ ದರವು ರಾಜ್ಯ ರಾಜಧಾನಿ ದೆಹಲಿಗಿಂತಲೂ ಹೆಚ್ಚಳವಾಗಿದೆ. ಆದರೆ ಅಷ್ಟೊಂದೆನ್ನು ಜಾಸ್ತಿ ಆಗಿಲ್ಲ ಅಂತ ಬಿಎಂಆರ್‌ಸಿಎಲ್ ಹೇಳಿದೆ. ಅದರ ವಿವರ ಇಲ್ಲಿದೆ.
ನಮ್ಮ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಳ ಮಾಡಿದೆ. ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಮೆಟ್ರೋ ಬೆಲೆ ಏರಿಕೆಯಿಂದ ಇನ್ಮುಂದಿನ ದಿನಗಳಲ್ಲಿ ನಾವು ಮೆಟ್ರೋ ಪ್ರಯಾಣ ಬೆಳೆಸುವುದಿಲ್ಲ. ಸ್ವಂತ ವಾಹನಗಳಲ್ಲೇ ಬಳಸಲಿದ್ದೇವೆ ಎಂದು ಜನ ಹೇಳುತ್ತಿದ್ದಾರೆ. ಆದರೆ, ಈ ರೀತಿಯ ಜನರ ಆಕ್ರೋಶದ ನುಡಿಗಳ ನಡುವೆಯೂ ಮೆಟ್ರೋ ಬೆಲೆ ಏರಿಕೆ ಮಾಡಿರುವುದು ಅಷ್ಟೊಂದು ಏನು ಮಾಡಿಲ್ಲ. ಬೆಂಗಳೂರಿನಲ್ಲಿ ಪ್ರಯಾಣ ದರ ಕಡಿಮೆಯೇ ಇದೆ ಎಂದಿದೆ. ಇದಕ್ಕೆ ಇನ್ನಷ್ಟು ವಿರೋಧ ಕೇಳಿ ಬಂದಿದೆ.

ನಮ್ಮ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಿಸಿರುವುದು ಹಳೆಯ ವಿಷಯ. ಆದರೆ, ಹೊಸ ವಿಷಯವೆಂದರೆ ಈ ಬೆಲೆ ಏರಿಕೆಯಿಂದ ಜನ ಕೋಪಗೊಂಡಿರುವಾಗಲೇ ನಾವು ಅಷ್ಟೊಂದೇನು ಬೆಲೆ ಏರಿಕೆ ಮಾಡಿಲ್ಲ ಬಿಡಿ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಮೆಟ್ರೋದ ಪ್ರಯಾಣ ಬೆಲೆಯನ್ನು ಹಲವು ವರ್ಷಗಳಿಂದ ಮಾಡಿರಲಿಲ್ಲ. ಹೀಗಾಗಿ ಈಗ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಬೆಲೆ ಏರಿಕೆಯನ್ನು ಮಾಡಲಾಗಿದೆ. ಬೆಂಗಳೂರಿನಲ್ಲಿ ಆಟೋಗಳು ಇಲ್ಲವೇ ಟ್ಯಾಕ್ಸಿಗಳಿಗಿಂತ ಕಡಿಮೆ ಬೆಲೆಯಲ್ಲಿ ಮೆಟ್ರೋ ಸೇವೆ ಕೊಡಲಾಗುತ್ತಿದೆ ಎಂದು ಹೇಳಿದೆ. ಈ ಸಮರ್ಥನೆ ಜನರನ್ನು ಕೆರಳಿಸಿದೆ. ಸಾರ್ವಜನಿಕ ಸಾರಿಗೆಗೂ, ಖಾಸಗಿ ಸೇವೆಗೂ ವ್ಯತ್ಯಾಸವಿಲ್ಲವೇ ಎಂದು ಜನ ಪ್ರಶ್ನೆ ಮಾಡಿದ್ದಾರೆ.
ಬಿಎಂಆರ್‌ಸಿಎಲ್ ಸಮರ್ಥನೆ ಈ ರೀತಿ ಇದೆ
ಬಿಎಂಆರ್‌ಸಿಎಲ್ ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿರುವುದನ್ನು ಸಮರ್ಥನೆ ಮಾಡಿಕೊಂಡಿದೆ. ಮೆಟ್ರೋ ಇದೀಗ 2 ಕಿ.ಮೀ ದೂರಕ್ಕೆ ಕೇವಲ 10 ರೂಪಾಯಿ ಮಾತ್ರ ಜಾಸ್ತಿ ಮಾಡಲಾಗಿದೆ. ಇದೇ ನೀವು ಆಟೋದಲ್ಲಿ ಇಷ್ಟು ಕಿ.ಮೀ ಹೋಗಬೇಕಾದರೆ 30 ರೂಪಾಯಿ ಆಗುತ್ತದೆ. ಇನ್ನು ಟ್ಯಾಕ್ಸಿಯಲ್ಲಿ 100 ರೂಪಾಯಿ ಆಗುತ್ತದೆ. ನಗರದಲ್ಲಿ 25ರಿಂದ 30 ಕಿ.ಮೀ ಹೋಗಬೇಕು ಎಂದಾದರೆ, ಮೆಟ್ರೋದಲ್ಲಿ 90 ರೂಪಾಯಿ ಆಗುತ್ತದೆ. ಆದರೆ ಆಟೋದಲ್ಲಿ ಇದೇ ದೂರಕ್ಕೆ 390 ರಿಂದ 450 ರೂಪಾಯಿ ಆಗುತ್ತದೆ. ಟ್ಯಾಕ್ಸಿಯಲ್ಲಿ 676 ರಿಂದ 748 ರೂಪಾಯಿ ಆಗುತ್ತದೆ ಎಂದು ಬಿಎಂಆರ್‌ಸಿಎಲ್‌ನ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಬಿಎಂಟಿಸಿ ಬಗ್ಗೆಯೂ ಹೇಳಿದೆ. ಬಿಎಂಟಿಸಿ ಎಸಿ ಬಸ್‌ನಲ್ಲಿ ಕನಿಷ್ಠ ದೂರ ಬೆಲೆಯು 15 ರೂಪಾಯಿ ಇದ್ದರೆ, 25 ಕಿ.ಮೀ ಗಿಂತ ಹೆಚ್ಚು ದೂರವಿದ್ದರೆ 50 ರೂಪಾಯಿ ಇದೆ. ಎಸಿ ಹೊರತುಪಡಿಸಿ ಉಳಿದ ಬಸ್ ದರ ಸಹ ಹೆಚ್ಚಾಗಿದೆ. ಈ ಬೆಲೆಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮೆಟ್ರೋದ ಪ್ರಯಾಣ ದರವು ಈಗಲೂ ಕಡಿಮೆ ಇದೆ ಎಂದು ಸಮರ್ಥಿಸಿಕೊಳ್ಳಲಾಗಿದೆ ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications