Namma Metro: ನಮ್ಮ ಮೆಟ್ರೋ ಪರಿಷ್ಕೃತ ಟಿಕೆಟ್ ದರ ಹೇಗಿದೆ? ದರ ಇಳಿಕೆ ಪಟ್ಟಿ ಇಲ್ಲಿದೆ
ಬೆಂಗಳೂರು, ಫೆಬ್ರವರಿ 14: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಈವರೆಗೆ ಪ್ರಯಾಣಿಕರ ಮೆಚ್ಚಿನ ಆಯ್ಕೆಯಾಗಿತ್ತು. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಹಾಗೂ ಸಮಯ ಉಳಿಸಲು ಪ್ರತಿನಿತ್ಯ ಲಕ್ಷಾಂತರ ಜನರು ಮೆಟ್ರೋದಲ್ಲಿ ಸಂಚಾರ ನಡೆಸುತ್ತಿದ್ದರು. ಟಿಕೆಟ್ ದರವೂ ಕೂಡ ಪ್ರಯಾಣಕ್ಕೆ ನ್ಯಾಯ ಒದಗಿಸುವಂತಿತ್ತು. ಆದರೆ ಕಳೆದೊಂದು ವಾರದಲ್ಲಿ ನಡೆದ ಬೆಳವಣಿಗೆ ನೋಡಿ ಜನ ನಮ್ಮ ಮೆಟ್ರೋ ವಿರುದ್ಧ ಅಸಮಾಧಾನಗೊಂಡಿದ್ದಾರೆ.
ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದಂತೆ ನಮ್ಮ ಮೆಟ್ರೋ ಸಂಸ್ಥೆ ಏಕಾಏಕಿ ಟಿಕೆಟ್ ದರ ಹೆಚ್ಚಿಸಿದ್ದು, ಬರೋಬ್ಬರಿ ಶೇಕಡಾ 46ರಷ್ಟು ಏರಿಕೆ ಮಾಡಿತ್ತು. ಇದು ಪ್ರಯಾಣಿಕರ ಜೇಬಿಗೆ ಕತ್ತರಿಯಲ್ಲ, ಬ್ಯಾಂಕ್ ಖಾತೆಗೆ ಕತ್ತರಿ ಹಾಕಿದಂತಿತ್ತು. ಮೆಟ್ರೋ ಟಿಕೆಟ್ ದರ ದುಪ್ಪಟ್ಟು ಮಾಡಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕೂಡ ಗಣನೀಯವಾಗಿ ಇಳಿಕೆಯಾಗಿದೆ.

ಕೊನೆಗೂ ನಮ್ಮ ಮೆಟ್ರೋ ಪ್ರಯಾಣಿಕರ ಆಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್ ಸಂಸ್ಥೆ ಟಿಕೆಟ್ ದರ ಇಳಿಕೆ ಮಾಡಿದ್ದು, ಇಂದಿನಿಂದ ಹೊಸ ದರ ಜಾರಿ ಮಾಡಿದೆ. ನಮ್ಮ ಮೆಟ್ರೋ ಪರಿಷ್ಕೃತ ಟಿಕೆಟ್ ದರದ ವಿವರ ಈ ಕೆಳಗಿನಂತಿದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಸಿಲ್ಕ್ ಇನ್ಸ್ಟಿಟ್ಯೂಟ್‌ಗೆ ಮೊದಲು 70 ರೂಪಾಯಿ ದರ ಏರಿಕೆ ಮಾಡಲಾಗಿತ್ತು. ಇದೀಗ ಪರಿಷ್ಕೃತ ದರ 60 ರೂಪಾಯಿಗೆ ಇಳಿಸಲಾಗಿದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿಗೆ ಮೊದಲು 60 ರೂಪಾಯಿ ದರ ಏರಿಕೆ ಮಾಡಲಾಗಿತ್ತು. ಇದೀಗ ಪರಿಷ್ಕೃತ ದರ 50 ರೂಪಾಯಿಗೆ ಇಳಿಸಲಾಗಿದೆ.

* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ಚಲ್ಲಘಟ್ಟಕ್ಕೆ ಮೊದಲು 70 ರೂಪಾಯಿ ದರ ಏರಿಕೆ ಮಾಡಲಾಗಿತ್ತು. ಇದೀಗ ಪರಿಷ್ಕೃತ ದರ 60 ರೂಪಾಯಿಗೆ ಇಳಿಸಲಾಗಿದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ ಮೊದಲು 20 ರೂಪಾಯಿ ದರ ಏರಿಕೆ ಮಾಡಲಾಗಿತ್ತು. ಇದೀಗ ಪರಿಷ್ಕೃತ ದರ 10 ರೂಪಾಯಿಗೆ ಇಳಿಸಲಾಗಿದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ವೈಟ್ ಫೀಲ್ಡ್‌ಗೆ ಮೊದಲು 90 ರೂಪಾಯಿ ದರ ಏರಿಕೆ ಮಾಡಲಾಗಿತ್ತು. ಇದೀಗ ಪರಿಷ್ಕೃತ ದರ 80 ರೂಪಾಯಿಗೆ ಇಳಿಸಲಾಗಿದೆ.
* ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ನಿಂದ ವೈಟ್ ರೇಷ್ಮೆ ಸಂಸ್ಥೆಗೆ ಮೊದಲು 70 ರೂಪಾಯಿ ದರ ಏರಿಕೆ ಮಾಡಲಾಗಿತ್ತು. ಇದೀಗ ಪರಿಷ್ಕೃತ ದರ 60 ರೂಪಾಯಿಗೆ ಇಳಿಸಲಾಗಿದೆ.












Click it and Unblock the Notifications