Namma Metro: "ಬೆಂಗಳೂರು ಮೆಟ್ರೋ ಯಾವಾಗಲೂ ರಷ್: Frequency ಪ್ಲಾನ್ ಮಾಡುವುದರಲ್ಲಿ ಸಮಸ್ಯೆ"
Namma Metro: ಬೆಂಗಳೂರು ನಮ್ಮ ಮೆಟ್ರೋ ಸೇವೆ ಬಂದ ಮೇಲೆ ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆ ಆಗಬಹುದು. ಬೆಂಗಳೂರಿನಲ್ಲಿ ಸಂಚಾರ ಸೇವೆ ಸುಧಾರಿಸಬಹುದು ಎಂದು ಬೆಂಗಳೂರಿಗರು ಲೆಕ್ಕಾಚಾರ ಹಾಕಿದ್ದರು. ಆದರೆ, ಬೆಂಗಳೂರಿಗೆ ಮೆಟ್ರೋ ಬಂದ ಮೇಲೆ ಜನರಿಗೆ ಅನುಕೂಲವಾಗಿದೆಯಾದರೂ. ನಿರೀಕ್ಷಿತ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಪರಿಹಾರ ಆಗಿಲ್ಲ. ಅಲ್ಲದೇ ನಿತ್ಯ ಮೆಟ್ರೋದಲ್ಲಿ ಪ್ರಯಾಣಿಸುವವರರು ಸಂಕಷ್ಟ ಅನುಭವಿಸುತ್ತಿದ್ದಾರೆ. train frequency ಕಡಿಮೆ ಆಗಿದೆ (ಇಂತಿಷ್ಟು ನಿಮಿಷಕ್ಕೆ ಇಷ್ಟು ಮೆಟ್ರೋ ಟ್ರೈನ್ ಸೇವೆ) ಕುಳಿತುಕೊಳ್ಳುವುದಕ್ಕೆ ಜಾಗವೇ ಸಿಗಲ್ಲ. ಯಾವಾಗಲೂ ರಷ್ ಇರುತ್ತದೆ ಅಂತ ಮೆಟ್ರೋ ಪ್ರಯಾಣಿಕರು ದೂರಿದ್ದಾರೆ.
ಈ ಬಗ್ಗೆ ಬರಹಗಾರ ಸಂತೋಷ್‌ಕುಮಾರ್ ಎಲ್‌ಎಂ ಎನ್ನುವವರು, ನಮ್ಮ ಮೆಟ್ರೋ ಟ್ರೈನ್‌ಗಳ ವಿಶೇಷ ಏನು ಅಂತ ನಿಮಗೆ ಅದರಲ್ಲಿ ಓಡಾಡಿದರೆ ಮಾತ್ರ ಗೊತ್ತಾಗುತ್ತದೆ. ಬಹುಶಃ ಬೆಂಗಳೂರಿನ ಮೆಟ್ರೋ ಟ್ರೈನ್‌ಗಳು ಅವುಗಳು ಹೊರಡುವ ಮೊದಲನೇ ನಿಲ್ದಾಣದಲ್ಲೇ 90% ಫುಲ್ ಆಗಿರುತ್ತವೆ. ಎರಡನೇ ನಿಲ್ದಾಣದಲ್ಲಿ ಕೇಳಲೇಬೇಕಿಲ್ಲ. ಅಲ್ಲೂ ಯಾರಿಗಾದರೂ ಕುಳಿತುಕೊಳ್ಳಲು ಸೀಟು ಸಿಗುತ್ತದೆ ಎಂದರೆ ಅದು ಅವರ ಪೂರ್ವಜನ್ಮದ ಪುಣ್ಯವಷ್ಟೇ 😀 ಈ ಮೆಟ್ರೋ ಟ್ರೈನ್‌ಗಳ frequency ಪ್ಲಾನ್ ಮಾಡುವ ಪುಣ್ಯಾತ್ಮನಿಗೆ ಪ್ರಯಾಣಿಕರನ್ನು ಕಂಡರೆ ಅದ್ಯಾಕೆ ಆ ಪರಿ ಹೊಟ್ಟೆ ಉರಿಯೋ ಗೊತ್ತಿಲ್ಲ ಎಂದಿದ್ದಾರೆ.

Just imagine ಉದಾಹರಣೆಗೆ ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯವರೆಗೆ ನಿಮಗೆ 5 ನಿಮಿಷಕ್ಕೊಂದು ಟ್ರೈನು ಬರುತ್ತದೆ ಅಂದಿಟ್ಟುಕೊಳ್ಳಿ. ನೀವು ಮೊದಲ ನಿಲ್ದಾಣದಲ್ಲೇ ಸೀಟು ಹಿಡಿಯಲೇಬೇಕು ಅಂತ ಕಾಯುತ್ತಲೇ ಇರುತ್ತೀರ. ಸೀಟ್ ಇಲ್ಲದ ಟ್ರೈನಿಗೆ ಹತ್ತುವುದೇ ಇಲ್ಲ ಅಂದುಕೊಳ್ಳಿ. ಟ್ರೈನ್ ಸೀಟ್ ಕೆಪಾಸಿಟಿಯೇ ಬರೀ 60 ಸೀಟು ಅಂದುಕೊಳ್ಳೋಣ. ಮೊದಮೊದಲಿಗೆ ಪ್ರತಿ ಟ್ರೈನಿಗೂ 100 ಜನರು ಕಾಯುತ್ತಿದ್ದಾರೆ ಎಂದುಕೊಳ್ಳಿ. ಅದರಲ್ಲಿ 60 ಜನರಿಗೆ ಮಾತ್ರ ಸೀಟು ಸಿಗುತ್ತದೆ. ಉಳಿದ 40 ಜನರು ನಿಂತುಕೊಂಡೇ ಪ್ರಯಾಣ ಮಾಡುತ್ತಾರೆ. ನೀವು ಹತ್ತುವುದಿಲ್ಲ. ನಂತರ ಬರುವ ಟ್ರೈನಿಗೆ 90 ಜನರು ಕಾಯುತ್ತಿದ್ದಾರೆ ಅಂದುಕೊಳ್ಳಿ. ಅದರಲ್ಲಿ 60 ಜನರಿಗೆ ಸೀಟು ಸಿಗುತ್ತದೆ & 30 ಜನರು ನಿಂತುಕೊಂಡೇ ಪ್ರಯಾಣ ಮಾಡುತ್ತಾರೆ. ನೀವು ಹತ್ತುವುದಿಲ್ಲ. ನಂತರ ಬರುವ ಟ್ರೈನಿಗೆ 80 ಜನರು ಕಾಯುತ್ತಿದ್ದಾರೆ ಅಂದುಕೊಳ್ಳಿ. ಅದರಲ್ಲಿ 60 ಜನರಿಗೆ ಸೀಟು ಸಿಗುತ್ತದೆ & 20 ಜನರು ನಿಂತುಕೊಂಡೇ ಪ್ರಯಾಣ ಮಾಡುತ್ತಾರೆ. ನೀವು ಹತ್ತುವುದಿಲ್ಲ. ಹೀಗೆ ಕಾಯುತ್ತಾ ಕಾಯುತ್ತಾ....ಪ್ರತೀ ಟ್ರೈನಿಗಾಗಿ ಕಾಯುವ ಜನರು ಕ್ರಮೇಣ ಕಡಿಮೆಯಾಗುತ್ತಾರೆ. ಈಗ ಮುಂದಿನ ಟ್ರೈನಿಗೆ ಕಾಯುತ್ತಿರುವ ಜನ ಬರೀ 50. ಅಂದರೆ ಈಗ ಮುಂಬರುವ ಟ್ರೈನಿಗೆ ಹತ್ತಿದರೆ ನಿಮಗೆ ಖಂಡಿತ ಸೀಟು ಸಿಗುತ್ತದೆ ತಾನೇ?!
ನೀವು ಹೀಗೆ ಲೆಕ್ಕಾಚಾರ ಮಾಡಿದ್ದರೆ ಮೋಸ ಹೋಗುವುದು ಖಂಡಿತ. ಏಕೆಂದರೆ ಮುಂದಿನ ಟ್ರೈನಿಗೆ ನೀವು ಕಾಯುತ್ತಿದ್ದರೆ ಟ್ರೈನು ಬರುವುದೇ ಇಲ್ಲ. ಯಾಕೆ ಅಂತ ಗಮನಿಸಿದರೆ ಈ ಟ್ರೈನ್ frequency ಪ್ಲಾನ್ ಮಾಡಿದಾತ ಅಷ್ಟು ಹೊತ್ತಿಗೆ 5 ನಿಮಿಷದ ಬದಲಿಗೆ 10ನಿಮಿಷಕ್ಕೊಂದು ಅಂತ ಪ್ಲಾನ್ ಮಾಡಿರುತ್ತಾನೆ!! 😡 ಅಂದರೆ ಮುಂದಿನ 10 ನಿಮಿಷದ ಟ್ರೈನು ಬರುವ ಹೊತ್ತಿಗೆ ಅಲ್ಲಿ 100 ಜನ ಸೇರಿರುತ್ತಾರೆ. ಮತ್ತೆ ನಿಮಗೆ ಸೀಟು ಸಿಗುವ ಯಾವ ಲಕ್ಷಣವು ಕಾಣುವುದಿಲ್ಲ ಎಂದು ವಿವರಿಸಿದ್ದಾರೆ.
ಇದು ಮೊದಲನೇ ನಿಲ್ದಾಣದಲ್ಲಿ ನಿಂತವರ ಕಥೆಯಾದರೆ ನಂತರದ ನಿಲ್ದಾಣಗಳಲ್ಲಿ ಕಾಯುತ್ತಿರುವವರ ಕಥೆ ಕೇಳುವುದೇ ಬೇಡ?! ಒಟ್ಟಾರೆ ಮೆಟ್ರೋ ಟ್ರೈನುಗಳು ಲಾಭ ಮಾಡಬೇಕೆಂದರೆ ಸದಾ ಕೈಕಾಲು ಆಡಿಸಲೂ ಆಗದಷ್ಟು ಪ್ರಯಾಣಿಕರಿಂದ ತುಂಬಿರಬೇಕು ಅನ್ನುವಂತಾಗಿದೆ. ಏಕೆಂದರೆ ಈಗ ಉಸಿರಾಡುವಷ್ಟು ಆರಾಮವಾಗಿ ನಿಂತುಕೊಂಡು ಪ್ರಯಾಣ ಮಾಡಬಹುದು ಅಂದುಕೊಳ್ಳುವಷ್ಟರಲ್ಲಿ train frequency ಕಡಿಮೆ ಮಾಡಿರುತ್ತಾರೆ. ಇದನ್ನು ಯಾರೂ ನೋಡಲ್ವಾ ಅಂತ?! Train availability ಇದ್ದಾಗ ಬೇರೆ ಬೇರೆ ಶಿಫ್ಟುಗಳಲ್ಲಿ ಚಾಲಕರನ್ನು ನೇಮಿಸಿಕೊಂಡು frequency ಜಾಸ್ತಿ ಮಾಡಲೇನು ಕಷ್ಟ ಇವರಿಗೆ ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications