Namma Metro: ಹಳಿಗೆ ಜಿಗಿದ ವ್ಯಕ್ತಿ: ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ
Namma Metro: ಬೆಂಗಳೂರು ನಮ್ಮ ಮೆಟ್ರೋ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಬಂದಿದೆ. ಅದರಲ್ಲೂ ಮೊಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಗಳು ನಡೆದಿವೆ. ಹಾಗೆಯೇ ಇದೀಗ ನಗರದಲ್ಲಿ ಅಂತಹದ್ದೇ ಒಂದು ಘಟನೆ ಮತ್ತೆ ನಡೆದಿರುವ ಹಿನ್ನೆಲೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ.
ನಮ್ಮ ಮೆಟ್ರೋ ಟ್ರ್ಯಾಕ್‌ಗೆ ಜಿಗಿದು 35 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಸುಮಾರು ಸಂಜೆ 5:45ರ ವೇಳೆಗೆ ನಾಗಸಂದ್ರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ (ಹಸಿರು) ಮಾರ್ಗದ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ನಡೆದಿದೆ. ಆದರೆ ಆತ್ಮಹತ್ಯೆಗೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಮೃತರ ಗುರುತು ಕೂಡ ಪತ್ತೆ ಆಗಿಲ್ಲ.

ಘಟನೆ ಬಳಿಕ ತಾತ್ಕಾಲಿಕ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಆಗಿದ್ದು, ಕೋಣನಕುಂಟೆ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಯಲಚೇನಹಳ್ಳಿ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಿಲ್ದಾಣಗಳ (ಹಸಿರು ಮಾರ್ಗ) ನಡುವೆ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಉಳಿದ ಮಾರ್ಗದಲ್ಲಿ ಸೇವೆಗಳು ಲಭ್ಯವಿದೆ ಎಂದು ಬಿಎಂಆರ್‌ಸಿಎಲ್ ಅಧಿಕೃಯ ಟ್ವೀಟ್‌ನಲ್ಲಿ ತಿಳಿಸಿದೆ.
As per the preliminary information a 35-year-old Man, has jumped in front of the approaching train at 17.45 hrs at Doddakallasandra Station.
— ನಮ್ಮ ಮೆಟ್ರೋ (@OfficialBMRCL) August 3, 2024
On Green Line Train services are suspended between Yelachenahalli & Silk Institute Stations, Remaining section the services are on. Fki.
ಬಿಎಂಆರ್‌ಸಿಎಲ್ ಟ್ವೀಟ್‌ನಲ್ಲೇನಿದೆ?: ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಹಿನ್ನೆಲೆ ಇತ್ತೀಚೆಗಷ್ಟೇ ಹಸಿರು ಮಾರ್ಗದಲ್ಲಿ ರೈಲುಗಳ ಸಂಚಾರ ವ್ಯತ್ಯಯ ಆಗಿದೆ. ನಾಗಸಂದ್ರ-ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಮಾತ್ರ ಮೆಟ್ರೋ ರೈಲುಗಳು ಓಡಲಿವೆ ಎಂದು ತನ್ನ ಅಧಿಕೃತ ಟ್ವೀಟ್ ಮೂಲಕ ಬಿಎಂಆರ್‌ಸಿಎಲ್ ತಿಳಿಸಿದೆ. ಇನ್ನು ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ತಿಳಿಸಿದೆ.
ಬನಶಂಕರಿ, ಜೆಪಿ ನಗರ, ಯಲಚೇನಹಳ್ಳಿ, ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಜರಹಳ್ಳಿ, ತಲಘಟಪುರ, ರೇಷ್ಮೇ ಮಂಡಳಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ. ಇನ್ನು ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ರೈಲು ಸಂಚಾರ ಮಾಡಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಮ್ಮ ಮೆಟ್ರೋ ರೈಲುಗಳಲ್ಲಿ ಆಗಾಗ ಸಮಸ್ಯೆ ಕಾಣಿಸಿಕೊಂಡಾಗ ಪ್ರಯಾಣಿಕರಿಗೆ ಅನುಕಾಲವಾಗಲೆಂದು ಇರುವ ವಿಷಯವನ್ನು ಹೇಳಲಾಗುತ್ತದೆ. ಕಾಮಗಾರಿ, ವಿದ್ಯುತ್ ಸಮಸ್ಯೆ, ಮಳೆ ಹಿನ್ನೆಲೆ ಟ್ರಾಕ್ ಮೇಲೆ ಮರ ಬಿದ್ದು, ಅಥವಾ ಟ್ರ್ಯಾಕ್‌ಗೆ ಪ್ರಯಾಣಿಕರು ಜಿಗಿದ ವೇಳೆಯಲ್ಲಿ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿರುವ ಘಟನೆಗಳು ಈಗಾಗಲೇ ಜರಿಗಿವೆ. ಇನ್ನು ಇಂದು ವಿದ್ಯುತ್ ಸಮಸ್ಯೆ ಹಿನ್ನೆಲೆ ತಾತ್ಕಾಲಿಕವಾಗಿ ಸಂಚಾರ ರದ್ದು ಮಾಡಲಾಗಿತ್ತು.












Click it and Unblock the Notifications