ನಿಮ್ಮ ಏರಿಯಾ ಕಸಕ್ಕೆ ಶಾಸಕರು, ಎಂಪಿಗಳೇ ಹೊಣೆ; ಬೆಂಗಳೂರು ಸಾರ್ವಜನಿಕರ ಕೈಸೇರಿತು 'ನಮ್ಮ ಕಸ' ಅಪ್ಲಿಕೇಶನ್ ಡಿಜಿಟಲ್ ಅಸ್ತ್ರ

ಬೆಂಗಳೂರು, ಅಕ್ಟೋಬರ್ 26: ನಗರದ ಮೂಲೆ ಮೂಲೆಯಲ್ಲಿ ರಾಶಿಗಟ್ಟಲೇ ಶೇಖರಣೆಯಾಗುವ ತ್ಯಾಜ್ಯದ ಸಮಸ್ಯೆಗೆ ಇನ್ಮುಂದೆ ನಾಗರಿಕರೇ ಸಾಕ್ಷಿ, ತಂತ್ರಜ್ಞಾನವೇ ಹಾದಿ. ಪ್ರತಿಯೊಂದು ದೂರು ಸಾರ್ವಜನಿಕವಾಗಿ ಪಾರದರ್ಶಕವಾಗಿಸುವ ಜೊತೆಗೆ, ಶಾಸಕರು ಮತ್ತು ಸಂಸದರ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡುವ ವೇದಿಕೆಯೊಂದು ಈಗ ಬೆಂಗಳೂರಿನ ಸಾರ್ವಜನಿಕ ನೈರ್ಮಲ್ಯಕ್ಕೆ ಹೊಸ ದಿಕ್ಕು ನೀಡಲು ಸಜ್ಜಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೆಂಗಳೂರು ನಗರದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಹಾಗೂ ಜವಾಬ್ದಾರಿಯನ್ನು ಯಾರು ವಹಿಸಬೇಕು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಈ ಸಮಸ್ಯೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನ ಟೆಕ್ಕಿಯೊಬ್ಬರು 'ನಮ್ಮ ಕಸ' ಎಂಬ ಹೊಸ ಸಿವಿಕ್-ಟೆಕ್ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಸಾರ್ವಜನಿಕ ದೂರುಗಳನ್ನು ಪಾರದರ್ಶಕಗೊಳಿಸುವುದು ಮತ್ತು ಜನಪ್ರತಿನಿಧಿಗಳಲ್ಲಿ ಜವಾಬ್ದಾರಿಯನ್ನು ಹೆಚ್ಚಿಸುವುದು ಈ ಅಪ್ಲಿಕೇಶನ್‌ನ ಮುಖ್ಯ ಉದ್ದೇಶವಾಗಿದೆ.

Namma Kasa App Bengaluru Techie Develops Platform to Track Garbage Complaints Know complete detail

'ನಮ್ಮ ಕಸ' ಅಪ್ಲಿಕೇಶನ್‌ನ ಪ್ರಮುಖ ಅಂಶಗಳು

* ಛಾಯಾಚಿತ್ರ ಅಪ್‌ಲೋಡ್: ನಾಗರಿಕರು ತಮ್ಮ ಸುತ್ತಮುತ್ತ ಬಿದ್ದಿರುವ ಕಸದ ರಾಶಿಗಳ ಫೋಟೋಗಳನ್ನು ನೇರವಾಗಿ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬಹುದು.

* ಹಾಟ್‌ಸ್ಪಾಟ್ ಮ್ಯಾಪಿಂಗ್: ನಗರದಾದ್ಯಂತ ಕಸ ಹೆಚ್ಚಾಗಿ ಶೇಖರಣೆಯಾಗುವ ಮತ್ತು ತ್ಯಾಜ್ಯ ಸಮಸ್ಯೆಯಿರುವ ಪ್ರದೇಶಗಳನ್ನು ನಕ್ಷೆಯ ಮೂಲಕ ಗುರುತಿಸಲು ಇದು ನೆರವಾಗುತ್ತದೆ.

* ಸಾಂಪ್ರದಾಯಿಕ ದೂರು ವ್ಯವಸ್ಥೆಗಳಲ್ಲಿ ಸಾರ್ವಜನಿಕರ ದೂರುಗಳು ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿದ್ದು, ಇತರರಿಗೆ ತಿಳಿಯುತ್ತಿರಲಿಲ್ಲ. ಆದರೆ 'ನಮ್ಮ ಕಸ' ಅಪ್ಲಿಕೇಶನ್‌ನಲ್ಲಿ ದಾಖಲಾಗುವ ಪ್ರತಿಯೊಂದು ದೂರು ಸಾರ್ವಜನಿಕವಾಗಿ ಎಲ್ಲರಿಗೂ ಕಾಣಿಸುತ್ತದೆ.

* ಪ್ರತಿಯೊಂದು ಪ್ರದೇಶದ ಕಸದ ಸಮಸ್ಯೆಯನ್ನು ಆಯಾ ಕ್ಷೇತ್ರದ ಶಾಸಕರು (MLA), ಸಂಸದರು (MP) ಮತ್ತು ಜನಪ್ರತಿನಿಧಿಗಳಿಗೆ ಲಿಂಕ್ ಮಾಡಲಾಗುತ್ತದೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡಲು ಇದು ಸಹಕಾರಿಯಾಗಿದೆ.

ಪಾರದರ್ಶಕತೆ ಮತ್ತು ತಾಂತ್ರಿಕತೆಯ ಸವಾಲುಗಳು

ತಂತ್ರಜ್ಞಾನವು ನಾಗರಿಕರ ಸಮಸ್ಯೆಗಳನ್ನು ಮತ್ತು ನಗರದ ನೈಜ ಸ್ಥಿತಿಯನ್ನು ಎತ್ತಿ ತೋರಿಸಲು ಸಹಾಯ ಮಾಡುತ್ತದೆ. ಆದರೆ ಕೇವಲ ದೂರುಗಳನ್ನು ಪ್ರದರ್ಶಿಸುವುದರಿಂದಲೇ ಕಸದ ಸಮಸ್ಯೆ ಪರಿಹಾರವಾಗುವುದಿಲ್ಲ. ಸಮಸ್ಯೆಯ ನಿಜವಾದ ಪರಿಹಾರಕ್ಕಾಗಿ ಸ್ಥಳೀಯ ಆಡಳಿತದ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಜನಪ್ರತಿನಿಧಿಗಳ ಜವಾಬ್ದಾರಿಯುತ ನಡವಳಿಕೆ ಅತ್ಯಗತ್ಯವಾಗಿದೆ.

ಅಷ್ಟೇ ಅಲ್ಲದೆ ಪ್ರಜೆಗಳು ಸಹ ಮೊದಲೇ ತ್ಯಾಜ್ಯ ವಿಂಗಡಣೆ ಮಾಡುವುದು ಮತ್ತು ಸರಿಯಾದ ಸ್ಥಳಗಳಲ್ಲಿ ಕಸವನ್ನು ಹಾಕುವುದು ಅತ್ಯಂತ ಮುಖ್ಯವಾಗಿದೆ. ಇಂತಹ ಸಿವಿಕ್ ಟೆಕ್ ವೇದಿಕೆಗಳು ಭಾರತೀಯ ನಗರಗಳ ಆಡಳಿತ ಮತ್ತು ನೈರ್ಮಲ್ಯ ನಿರ್ವಹಣೆಯಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತವೆ ಎಂಬುದನ್ನು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+