ಏರ್‌ಪೋರ್ಟ್‌ ರಸ್ತೆಯಲ್ಲಿ ಓಲಾ ಚಾಲಕನಿಂದ ಮಹಿಳೆಗೆ ಕಿರುಕುಳ

ಬೆಂಗಳೂರು, ಡಿಸೆಂಬರ್ 12: ಕಳೆದ ನಾಲ್ಕೈದು ತಿಂಗಳಿಂದ ಕ್ಯಾಬ್ ಡ್ರೈವರ್‌ಗಳಿಂದ ಪ್ರಯಾಣಿಕರ ಮೇಲೆ ಲೈಂಗಿಕ ಪ್ರಕರಣಗಳ ದೂರು ಹೆಚ್ಚಾಗುತ್ತಿದೆ. ಅದೂ ಏರ್‌ಪೋರ್ಟ್ ರಸ್ತೆಯಲ್ಲಿಯೇ ಹೆಚ್ಚು ಘಟನೆಗಳು ನಡೆಯುತ್ತಿವೆ.

ಓಲಾ ಕ್ಯಾಬ್‌ನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಬರುತ್ತಿದ್ದ ಮಹಿಳೆಗೆ ಕ್ಯಾಬ್‌ ಚಾಲಕ ಕಿರುಕುಳ ನೀಡಿದ್ದು, ದೂರು ದಾಖಲಾಗಿದೆ.

ಉಡುಗೊರೆಗಳನ್ನು ತಲುಪಿಸುವ ಸ್ಟಾರ್ಟ್ ಅಪ್ ಕಂಪನಿ ಎಂ ಪಾನಿಯ ಸಿಇಒ ಆಕಾಂಕ್ಷಾ ಹಜಾರಿ ಎಂಬಿವರು ಈ ಕುರಿತು ದೂರು ನೀಡಿದ್ದಾರೆ.

ಅವರು ರಾತ್ರಿ ವೇಳೆ ಏರ್‌ಪೋರ್ಟ್‌ನಿಂದ ನಗರಕ್ಕೆ ಬರುತ್ತಿದ್ದರು. ಈ ಚಾಲಕ ಮ್ಯಾಪ್‌ನಲ್ಲಿದ್ದ ರೂಟ್ ಬಿಟ್ಟು ಬೇರೆ ದಾರಿಯಲ್ಲಿ ಸಾಗಲು ಯತ್ನಿಸಿದ್ದ. ಅದನ್ನು ಆಕಾಂಕ್ಷಾ ಅವರು ಪ್ರಶ್ನಿಸಿದ್ದಕ್ಕೆ ಚಾಲಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ನಿಂದಿಸಿದ್ದ, ತಕ್ಷಣ ಅವರು ಓಲಾ ಸಹಾಯವಾಣಿಗೆ ಹಾಗೂ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆದರೆ, ಎರಡೂ ಕಡೆಯಿಂದ ಅವರ ಮನವಿಗೆ ಸ್ಪಂದನೆ ದೊರೆತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಘಟನೆ ವಿವರ

ಘಟನೆ ವಿವರ

ರಾತ್ರಿ 11.30ಕ್ಕೆ ಕೆಐಎನಿಂದ ನಗರಕ್ಕೆ ತೆರಳಲು ಓಲಾ ಕ್ಯಾಬ್ ಹತ್ತಿದೆ, ಮಧ್ಯದಲ್ಲಿ ಚಾಲಕ ರೂಟ್ ಮ್ಯಾಫ್ ಆಫ್ ಮಾಡಿ ದಾರಿ ಬದಲಿಸಿದ್ದು ಗೊತ್ತಾಯಿತು, ಯಾಕೆಂದು ಕೇಳಿದಾಗ ಟೋಲ್ ಕಟ್ಟಲು ಹಣ ಇಲ್ಲದ ಕಾರಣ ಪರ್ಯಾಯ ಮಾರ್ಗದಲ್ಲಿ ಹೋಗುವುದಾಗಿ ತಿಳಿಸಿದ. ಆದರೆ ನಿರ್ಜನ ರಸ್ತೆಯಲ್ಲಿ ರಾತ್ರಿ ವೇಳೆ ಹೋಗಬೇಡಿ, ವಾಪಸ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಹೋಗಿ ಎಂದು ತಿಳಿಸಿದೆ. ಕ್ಯಾಬ್ ನಿಲ್ಲಿಸಿ ಬೇಕಿದ್ದರೆ ಬನ್ನಿ ಇಲ್ಲದಿದ್ದರೆ ಇಳಿಯಿರಿ ಎಂದು ದಬಾಯಿಸಿದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಿಂದಿನ ಲೈಂಗಿಕ ಕಿರುಕುಳ ಘಟನೆ

ಹಿಂದಿನ ಲೈಂಗಿಕ ಕಿರುಕುಳ ಘಟನೆ

ಈ ವರ್ಷದ ಆರಂಭದಲ್ಲಿ ಟೋಲ್ ತಪ್ಪಿಸಲು ಪಯಾರ್ಯಮಾರ್ಗದಲ್ಲಿ ಸಂಚರಿಸಿದ ಚಾಲಕನೊಬ್ಬ ಮಹಿಳೆಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಕುರಿತು ಪ್ರಕರಣ ದಾಖಲಾಗಿದ್ದರೂ, ಓಲಾ ಸಂಸ್ಥೆ ಚಾಲಕರನ್ನು ನಿಗಾದಲ್ಲಿ ಇಟ್ಟುಕೊಳ್ಳುತ್ತಿಲ್ಲ ಎಂಬ ದೂರುಗಳು ದಾಖಲಾಗಿದೆ.

ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ

ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ

ಓಲಾ ಕ್ಯಾಬ್ ನಲ್ಲಿ ತೆರಳುತ್ತಿದ್ದ ವೇಳೆ ಕ್ಯಾಬ್ ಚಾಲಕ ಯುವತಿಗೆ ಮೊಬೈಲ್‌ ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಆಕೆಗೆ ಮುಜುಗರ ಉಂಟು ಮಾಡಿದ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಯುವತಿ ಬೆಳಗ್ಗೆ 6.28ಕ್ಕೆ ಯಲಹಂಕ ನ್ಯೂ ಟೌನ್ ನಿಂದ ಜೆಪಿನಗರದಲ್ಲಿರುವ ಕಚೇರಿಗೆ ತೆರಳಲು ಓಲಾ ಬುಕ್ ಮಾಡಿದ್ದಳು.

ಕ್ಯಾಬ್ ಸಿಗ್ನಲ್ ದಾಟಿದ ಬಳಿಕ ರಿಯರ್ ಮಿರರ್ ಅಲ್ಲಿ ಯುವತಿ ಮುಖ ಕಾಣುವಂತೆ ಹೊಂದಿಕೆ ಮಾಡಿ ಪದೇ ಪದೇ ನೋಡುತ್ತಿದ್ದ, ಸ್ವಲ್ಪ ದೂರ ಹೋದ ನಂತರ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋವನ್ನು ನೋಡುತ್ತಾ ಕ್ಯಾಬ್ ಚಾಲನೆ ಮಾಡುತ್ತಿದ್ದ, ಅಷ್ಟೇ ಅಲ್ಲದೆ ಯುವತಿಗೆ ಆ ವಿಡಿಯೋವನ್ನು ತೋರಿಸಿ ಮುಜುಗರವಾಗುವಂತೆ ನಡೆದುಕೊಂಡಿದ್ದಾನೆ, ಅಷ್ಟೇ ಅಲ್ಲದೆ ಆಕೆ ನಲ್ಲಿಸಲು ಹೇಳಿದ ಸ್ಥಳದಲ್ಲೂ ನಿಲ್ಲಿಸದೆ ಕರೆದೊಯ್ದಿದ್ದ ಎಂದು ಹೇಳಿ ಆಕೆ ದೂರು ದಾಖಲಿಸಿದ್ದಾರೆ.

ಯುವತಿಗೆ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಚಾಲಕ

ಯುವತಿಗೆ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಚಾಲಕ

ಓಲಾ ಚಾಲಕನೊಬ್ಬ ಮಹಿಳೆಗೆ ಕಿರುಕುಳ ನೀಡಿದ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ್ದ ಘಟನೆಯೂ ನಡೆದಿತ್ತು.

ಕೆಜಿ ರಸ್ತೆ ಮೈಸೂರ್‌ ಬ್ಯಾಂಕ್‌ ವೃತ್ತದಿಂದ ಯುವತಿ ತನ್ನ ತಾಯಿ ಜೊತೆಗೆ ಮಲ್ಲೇಶ್ವರಕ್ಕೆ ತೆರಳಲು ಓಲಾ ಕ್ಯಾಬ್‌ ಬುಕ್‌ ಮಾಡಿದ್ದರು. ಕ್ಯಾಬ್‌ ಚಾಲಕ ಮಹದೇವಸ್ವಾಮಿ ಎಂಬಾತನಿಗೆ ಕರೆ ಮಾಡಿದಾಗ ಸಿಗ್ನಲ್‌ನಲ್ಲಿ ಇದ್ದೇನೆ ಬರುತ್ತೇನೆ ಎಂದಿದ್ದಾನೆ, ಆದರೆ ಪಿಕ್‌ಅಪ್‌ ಸ್ಥಳಕ್ಕೆ ಬರುವ ಮೊದಲೇ ವೇಟಿಂಗ್‌ ಚಾರ್ಜ್ ಹಾಕಲು ಆರಂಭಿಸಿದ್ದ, ಇದನ್ನು ಗಮನಿಸಿದ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬರುವ ಮೊದಲೇ ವೇಟಿಂಗ್‌ ಶುಲ್ಕವನ್ನು ಆರಂಭಿಸುವುದು ಏಕೆ ಎಂದು ಯುವತಿ ಪ್ರಶ್ನಿಸಿದ್ದಳು.

ಇದರಿಂದ ಕೆರಳಿದ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಕ್ಯಾಬ್‌ ಬುಕಿಂಗ್‌ ಕ್ಯಾನ್ಸಲ್‌ ಮಾಡಿದ್ದಾನೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಸಾರ್ವಜನಿಕರ ಎದುರೇ ಅನುಚಿತವಾಗಿ ವರ್ತಿಸಿದ್ದು ಹಲ್ಲೆ ನಡೆಸಲು ಮುಂದಾಗಿದ್ದ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ ಈ ಕುರಿತು ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚಾಲಕನನ್ನು ಬಂಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+