ವಿಡಿಯೋ: ತೆಲುಗು ಹಾಡಿಗೆ ಸಂಸದ ತೇಜಸ್ವಿ ಸೂರ್ಯ ಸಖತ್ ಡ್ಯಾನ್ಸ್
Recommended Video
ಬೆಂಗಳೂರು, ಜನವರಿ 14: ಜಯನಗರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ತೇಜಸ್ವಿ ಸೂರ್ಯ ತೆಲುಗು ಹಾಡೊಂದಕ್ಕೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಜನವರಿ 12ರಂದು ಯುವ ದಿನದ ಅಂಗವಾಗಿ ಜಯನಗರದ ನಾಲ್ಕನೇ ಬಡಾವಣೆಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಆರ್ಯ ವೈಶ್ಯ ಸಮುದಾಯದವರು ಆಯೋಜಿಸಿದ್ದ ವಾಕಥಾನ್‍ನಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು.

ಈ ಬಾರಿ 4,000 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ ವಾಕಥಾನ್ ಆಯೋಜನೆ ಮಾಡಿ ಒಂದೊಳ್ಳೆ ಕೆಲಸ ಮಾಡಿದ್ದಾರೆ. ಎಲ್ಲರಿಗೂ ನನ್ನ ಪ್ರೋತ್ಸಾಹ ಇರುತ್ತೆ ಎಂದಿದ್ದಾರೆ.
ಜಯನಗರದ ನಾಲ್ಕನೇ ಬಡಾವಣೆಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಆರ್ಯ ವೈಶ್ಯ ಸಮುದಾಯದವರು ಆಯೋಜಿಸಿದ್ದ ವಾಕಥಾನ್‍ನಲ್ಲಿ ಸಂಸದ ತೇಜಸ್ವಿ ಸೂರ್ಯ ಭಾಗವಹಿಸಿದ್ದರು.@Tejasvi_Surya #Bengaluru pic.twitter.com/1njFJcOll6
— Oneindia Kannada (@OneindiaKannada) January 14, 2020
ಈ ವೇಳೆ ಸಂಸದ ತೇಜಸ್ವಿ ಸೂರ್ಯ ಡ್ಯಾನ್ಸ್ ಮಾಡಿದ್ದಾರೆ. ಬಿ ಶಿಪ್‍ನ ಮೂರನೇ ವರ್ಷದ ವಾಕಥಾನ್ ಸಾವಿರಾರು ಮಂದಿ ಪಾಲ್ಗೊಂಡಿದ್ದರು. 2018ರಲ್ಲಿ ಮೊದಲ ಬಾರಿಗೆ ಆರಂಭಿಸಿದ ಈ ವಾಕಥಾನ್‍ನಲ್ಲಿ 1500 ಮಂದಿ ಹೆಸರು ನೋಂದಾಯಿಸಿಕೊಂಡು ಭಾಗವಹಿಸಿದ್ದರು. ಅಂತೆಯೇ 2019ರಲ್ಲೂ 3000 ಮಂದಿ ಭಾಗವಹಿಸಿದ್ದರು.












Click it and Unblock the Notifications