ವಾಹನ ಸವಾರರೇ ಎಚ್ಚರ: ರಸ್ತೆಯಲ್ಲಿ ಜಗಳ ಮಾಡುವುದು "ಕ್ರಿಮಿನಲ್ ಕ್ರೈಮ್"

ರಾಜ್ಯ ಸಂಚಾರ ಪೊಲೀಸ್‌ ಇಲಾಖೆಯು ವಾಹನ ಸವಾರರಿಗೆ ಗಂಭೀರವಾದ ಎಚ್ಚರಿಕೆಯೊಂದನ್ನು ನೀಡಿದೆ.

ನೀವು ಸಹ ವಾಹನ ಸವಾರರಾಗಿದ್ದರೆ, ಖಂಡಿತವಾಗಿಯೂ ನೀವು ಈ ಸುದ್ದಿಯನ್ನು ಓದಬೇಕು. ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲೇ ವಾಹನ ಸವಾರರು ಜಗಳಕ್ಕೆ ಇಳಿಯುವುದು ಹಾಗೂ ಆ ಜಗಳಗಳು ತಾರಕಕ್ಕೆ ಹೋಗುವುದು ವರದಿಯಾಗುತ್ತಲ್ಲೇ ಇರುತ್ತದೆ.

Motorists beware Arguing on the road is a criminal crime

ಈ ವಿಷಯವನ್ನು ಇದೀಗ ಕರ್ನಾಟಕ ಟ್ರಾಫಿಕ್ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ವಾಹನ ಸವಾರರಿಗೆ ಗಂಭೀರವಾದ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಸಂಚಾರ ಪೊಲೀಸರು ನೀಡಿರುವ ಎಚ್ಚರಿಕೆ ಏನು ?

Reckless rage has no place on Bengaluru's roads! ಎಂದು ಬೆಂಗಳೂರು ಟ್ರಾಫಿಕ್‌ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ (ಯಾವುದೇ ರಸ್ತೆಗಳಲ್ಲಿ ) ಅತಿರೇಕದ ಜಗಳಗಳಿಗಿಲ್ಲ ಅವಕಾಶ ಇರುವುದಿಲ್ಲ.

ನಿಮ್ಮ ಆಕ್ರೋಶ ಬದಿಗೊತ್ತಿ, ತಾಳ್ಮೆಯನ್ನು ತಂದುಕೊಳ್ಳಿ. ರಸ್ತೆ ಜಗಳ ಅಪಾಯಕಾರಿಯಷ್ಟೇ ಅಲ್ಲ, ಕ್ರಿಮಿನಲ್ ಅಪರಾಧ ಕೂಡ. ಅದರಲ್ಲಿ ಭಾಗಿಯಾದರೆ ಕಾನೂನು ಕ್ರಮ ನಿಶ್ಚಿತ! ಇಂತಹ ಪರಿಸ್ಥಿತಿಯಲ್ಲಿ ನೆರವು ಪಡೆಯಲು ನಮ್ಮ 112ಗೆ ಕರೆ ಮಾಡಿ ಎಂದಿದ್ದಾರೆ. ಅಲ್ಲದೇ ಈ ರೀತಿಯ ಸಂದರ್ಭಗಳಲ್ಲಿ ಟ್ರಾಫಿಕ್‌ ಜಾಮ್‌ ಆಗುವುದನ್ನು ಮೊದಲು ತಪ್ಪಿಸಿ.

ಜಗಳಕ್ಕೆ ಪ್ರಚೋದನೆ ನೀಡಿದವರ ವಾಹನದ ಪೋಟೋ ಇಲ್ಲವೇ, ಆ ಘಟನೆಯ ಫೋಟೊ ತೆಗೆದುಕೊಳ್ಳಿ. ಮುಂದೆ ಸ್ಥಳಕ್ಕೆ ಪೊಲೀಸರು ಬಂದ ಮೇಲೆ ಘಟನೆಯ ಕುರಿತು ನಿಖರವಾದ ಮಾಹಿತಿಯನ್ನು ಹಂಚಿಕೊಳ್ಳಿ. ಬೇರೆಯವರು ಸಹ ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗಮನಿಸಿ, ಅವರಿಗೂ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಟ್ರಾಫಿಕ್‌ ಪೊಲೀಸರು ಸಜೆಸ್ಟ್‌ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ರಸ್ತೆಯಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಜಗಳಕ್ಕೆ ಇಳಿಯುವುದು ಸಾಮಾನ್ಯ. ಈ ಜಗಳಗಳು ತಾರಕಕ್ಕೆ ಹೋಗಿ ವಾಹನ ಸವಾರರು ಕೈ- ಕೈ ಮಿಲಾಯಿಸಿದ್ದು, ಮಾರಾಮಾರಿಯಾಗಿದ್ದರ ಉದಾಹರಣೆಗಳು ಸಹ ಇವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಗಂಭೀರವಾದ ಎಚ್ಚರಿಕೆಯನ್ನು ನೀಡಿದ್ದಾರೆ.

ಜಗಳದ ಸಂದರ್ಭದಲ್ಲಿ ಏನು ಮಾಡಬೇಕು ?

ಕೆಲವೊಮ್ಮೆ ನಮ್ಮ ತಪ್ಪು ಇಲ್ಲದೆ ಇದ್ದರೂ ಮುಂದಿರುವವರು ಅನವಶ್ಯಕವಾಗಿ ನಮ್ಮೊಂದಿಗೆ ಜಗಳಕ್ಕೆ ಬರುವ ಸಂದರ್ಭಗಳೂ ಇವೆ. ಈ ರೀತಿ ಸಂದರ್ಭದಲ್ಲಿ ನೀವು ಏನು ಮಾಡಬೇಕು ಎಂದು ಸಹ ಟ್ರಾಫಿಕ್‌ ಪೊಲೀಸರು ಸಲಹೆ ನೀಡಿದ್ದಾರೆ.

ಜಗಳ, ವಾಗ್ವಾದದ ಸಂದರ್ಭದಲ್ಲಿ ನೀವು ಏನು ಮಾಡಬೇಕು ಎನ್ನುವ ಬಗ್ಗೆ ಸಂಚಾರ ಪೊಲೀಸರು ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಆ ಎಂಟು ಸಲಹೆಗಳು ಈ ರೀತಿ ಇವೆ.

* ಮೊದಲನೆಯದಾಗಿ ವಾಹನ ಸಂಚಾರ ಮಾಡುವಾಗ ಜಗಳ, ಗಲಾಟೆಗಳು ಸಂಭವಿಸದಂತೆ ತಾಳ್ಮೆ ಕಾಪಾಡಿ.

* ಮುಂದಿರುವವರೊಂದಿಗೆ ವಾಗ್ವಾದ ಮಾಡಬೇಡಿ. ವಾಗ್ವಾದ ಆಗುವುದನ್ನು ತಪ್ಪಿಸಿ

* ಸಮಸ್ಯೆಗೆ ಪರಿಹಾರವನ್ನು ನಿಮ್ಮ ವಿವೇಚನೆ ತಕ್ಕಂತೆ ಕಂಡುಕೊಳ್ಳ ಬೇಡಿ

* ನಿಮ್ಮೊಂದಿಗೆ ಯಾರು ಅನವಶ್ಯಕವಾಗಿ ಜಗಳಕ್ಕೆ ಇಳಿಯುತ್ತಾರೋ ಅವರ ವಾಹನ ಸಂಖ್ಯೆಯನ್ನು ಪೋಟೋ ತೆಗೆದುಕೊಳ್ಳಿ. ಅಲ್ಲದೇ ಅಗತ್ಯ ಮಾಹಿತಿ ಸಂಗ್ರಹಿಸುವುದನ್ನು ಮರೆಯಬೇಡಿ.

* ಸಂಚಾರ ಇಲಾಖೆಯ ತುರ್ತು ಸಹಾಯವಾಣಿ ನಮ್ಮ 112ಗೆ ಕರೆ ಕೂಡಲೇ ಕರೆ ಮಾಡಿ. ಏನಾಗಿದೆ ಎನ್ನುವ ಪೂರ್ಣ ಮಾಹಿತಿ ಕೊಡಿ.

ವೈರಲ್ ಆಗುತ್ತಿದ್ದ ವಿಡಿಯೋಗಳು

ವಾಹನ ಸವಾರರು ರಸ್ತೆಗಳಲ್ಲಿ ಜಗಳವಾಡುವುದು ಅದನ್ನು ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿತ್ತು. ಇದನ್ನು ತಪ್ಪಿಸಲು ಇದೀಗ ನಗರ ಸಂಚಾರ (ಟ್ರಾಫಿಕ್‌ ಪೊಲೀಸರು) ಮುಂದಾಗಿದ್ದಾರೆ. ಇನ್ನು ಮುಂದೆ ನೀವು ರಸ್ತೆಯಲ್ಲಿ ನಿಂತು ಬೇಕಾಬಿಟ್ಟ ಇತರ ವಾಹನ ಸವಾರರೊಂದಿಗೆ ಜಗಳಕ್ಕೆ ಇಳಿಯುವಂತಿಲ್ಲ.

ಇಬ್ಬರು ವಾಹನ ಸವಾರರು ಜಗಳಕ್ಕೆ ಇಳಿಯುವುದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಇನ್ನುಳಿದ ವಾಹನ ಸವಾರರಿಗೂ ಕಿರಿಕಿರಿ ಆಗುತ್ತಿತ್ತು. ಇದರಿಂದ ಕೆಲವು ಪ್ರಮುಖ ರಸ್ತೆಗಳಲ್ಲಿ ತಾಸುಗಟ್ಟಲೆ ವಾಹನಗಳು ಸಂಚಾರ ದಟ್ಟಣೆ (ಟ್ರಾಫಿಕ್‌)ನಲ್ಲಿ ಸಿಲುಕಿಕೊಂಡ ಉದಾಹರಣೆಗಳು ಸಹ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+