300ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮ ಉಂಲ್ಲಂಘಿಸಿದ "ಟೂ ವೀಲರ್ ಅಂಕಲ್‌ಗೆ" ಬಿದ್ದ ದಂಡ ಎಷ್ಟು ಲಕ್ಷ?-ಮಾಹಿತಿ
ಬೆಂಗಳೂರು, ಫೆಬ್ರವರಿ, 11: ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ನಿಯಗಳಲ್ಲಿ ತುಂಬಾ ಬದಲಾವಣೆಗಳಾಗಿವೆ, ಕೆಲವರು ನಮಗೆ ಯಾರು ಏನು ಮಾಡುವುದಿಲ್ಲ ಎಂದು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಾ ತಾವು ನಡೆದ್ದೇ ಹಾದಿ ಎನ್ನುವಂತೆ ಅದನ್ನೇ ಮುಂದುವರೆಸಿರುತ್ತಾರೆ. ಆದರೆ ಕೆಲವು ದಿನಗಳ ಬಳಿಕ ಅಂತಹವರ ಮನೆಗೆ ನಿಯಮ ಉಲ್ಲಂಘಟನೆಯ ದಂಡದ ಶುಲ್ಕ ಮನೆಗೆ ಬರುತ್ತದೆ. ಹಾಗೆಯೇ ಬೆಂಗಳೂರಿನಲ್ಲೊಬ್ಬ ಬೂಪ 300ಕ್ಕೂ ಹೆಚ್ಚು ಬಾರಿ ನಿಯಮ ಉಲ್ಲಂಘನೆ ಮಾಡಿ ಪೇಚಿದ ಸಿಲುಕಿದ ಘಟನೆ ನಡೆದಿದೆ.
ಬೆಂಗಳೂರಿನ ಓರ್ವ ಸವಾರ ಸಂಚಾರಿ ಪೊಲೀಸರ ಭಯವಿಲ್ಲದೆ, ಹೆಲ್ಮಟ್ ಧರಿಸದೆ, ಸಿಗ್ನಲ್ ಜಂಪ್ ಮಾಡಿ, ಒನ್ ವೇಯಲ್ಲಿ ಮೊಬೈಲ್‌ನಲ್ಲಿ ಮಾತಾಡಾಡಿಕೊಂಡು ಡ್ರೈವಿಂಗ್ ಮಾಡಿದ್ದಾನೆ. ಈತ ಬರೊಬ್ಬರಿ ನಗರದಲ್ಲಿ 300ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆ ಈತನಿಗೆ ಬರೋಬ್ಬರಿ 3.20 ಲಕ್ಷ ರೂಪಾಯಿ ದಂಡ ಬಿದ್ದಿದೆ.

ಬೆಂಗಳೂರಿನ ಸುಧಾಮನಗರ ನಿವಾಸಿ ವೆಂಕಟ್ರಾಮನ್ ಎಂಬುವರ KA-05-KF-7969 ನಂಬರ್‌ನ ಆಕ್ಟೀವಾ ಹೊಂಡಾ ಸ್ಕೂಟರ್‌ನಲ್ಲಿ ಸಂಚಾರ ಮಾಡುವ ಮೂಲಕ 300ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಪ್ರಕರಣಗಳಿವೆ. ಇದಕ್ಕೆ ಸಂಚಾರಿ ಪೊಲೀಸರು 3 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಇವರು ಎಸ್ಆರ್ ನಗರ, ವಿಲ್ಸನ್ ಗಾರ್ಡನ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ.
ವೆಂಕಟ್ರಾಮನ್ ಅವರು 3 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗಿರುವ ಹಿನ್ನೆಲೆ ಸಂಚಾರಿ ಪೊಲೀಸರು ಅವರ ಮನೆಗೆ ತೆರಳಿದ್ದು, ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಇದಕ್ಕೆ ವೆಂಕಟ್ರಾಮನ್ ಅವರು ಇಷ್ಟು ದಂಡ ಕಟ್ಟಲು ಆಗಲ್ಲ. ಬೇಕಿದ್ದರೆ ಬೈಕ್ ತೆಗೆದುಕೊಂಡು ಹೋಗಿ ಎಂದಿದ್ದಾರೆ. ಆಗ ಪೊಲೀಸರು ನಮಗೆ ಬೈಕ್ ಬೇಡ, ದಂಡ ಕಟ್ಟಿ, ಇಲ್ಲ ಕೇಸ್ ಮಾಡುತ್ತೇವೆ ಎಂದಿದ್ದಾರೆ. ಸದ್ಯ ಸಂಚಾರಿ ಪೊಲೀಸರು ನೊಟೀಸ್ ನೀಡಿದ್ದು, ದಂಡ ಕಟ್ಟಿಲ್ಲ ಅಂದರೆ ಕೇಸ್ ಹಾಕಲು ನಿರ್ಧಾರ ಮಾಡಿದ್ದಾರೆ.
ಆರ್.ಟಿ.ನಗರದ ಗಂಗಾನಗರ ಬಳಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸ್ಕೂಟಿ ಪೆಪ್ ಮೇಲೆ 2023ರ ಡಿಸೆಂಬರ್ನಲ್ಲಿ ಬರೊಬ್ಬರಿ 3.22 ಲಕ್ಷ ರೂಪಾಯಿ ದಂಡ ಬಿದ್ದಿತ್ತು. ಮಾಲಾ ಎಂಬುವವರಿಗೆ ಸೇರಿದ ಸ್ಕೂಟಿ ಮೇಲೆ 643 ಸಂಚಾರ ನಿಯಮ ಉಲ್ಲಂಘನೆ ಕೇಸ್ಗಳು ದಾಖಲು ಆಗಿದ್ದವು. ಸ್ಕೂಟಿ ಬೆಲೆಯೇ 70ರಿಂದ 80 ಸಾವಿರ, ಆದರೆ ದಂಡದ ಮೊತ್ತ ನಾಲ್ಕು ಪಟ್ಟು ಹೆಚ್ಚಿದೆ. KA-04-0KF9072 ನಂಬರ್‌ನ ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸಿ ನಿಯಮ ಉಲ್ಲಂಘಿಸಿದ್ದರು ಎಂದು ಎಐಎನ್ ವರದಿ ಮಾಡಿದೆ.












Click it and Unblock the Notifications