ಬೆಂಗಳೂರಿನ ಮ್ಯೂಸಿಯಂಗೆ ಇನ್ನಷ್ಟು ಹೊಸ ಕಳೆ: ವಿಕೇಂಡ್ ಭೇಟಿಗೆ ಬೆಸ್ಟ್‌!

ಬೆಂಗಳೂರಿನ ಮಕ್ಕಳಿಗೆ ಹಾಗೂ ಮ್ಯೂಸಿಯಂ ಪ್ರಿಯರಿಗೆ ಗುಡ್‌ನ್ಯೂಸ್‌ ಕೊಡಲಾಗಿದೆ. ಬೆಂಗಳೂರಿನಲ್ಲಿ ಮ್ಯೂಸಿಯಂ ಪ್ರಿಯರಿಗೆ ಇಲ್ಲೊಂದು ಭರ್ಜರಿ ಗುಡ್‌ನ್ಯೂಸ್‌ ಸಿಕ್ಕಿದೆ. ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನದಿಂದ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವತಿಯಿಂದ ಜವಾಹರ್ ಲಾಲ್ ನೆಹರು ತಾರಾಲಯ ಆವರಣದಲ್ಲಿ ನಿರ್ಮಿಸಿರುವ ಯು.ಆರ್ ರಾವ್ ಭವನವನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಉದ್ಘಾಟಿಸಿದ್ದಾರೆ. ಈ ಮ್ಯೂಸಿಯಂನ ವಿಶೇಷವೇನು ಎನ್ನುವ ಕಂಪ್ಲೀಟ್ ಡೀಟೆಲ್ಸ್‌ ಇಲ್ಲಿದೆ.

ಬೆಂಗಳೂರು ನಗರದ ಸಮೀಪವಿರುವ ಜವಹಾರ್ ಲಾಲ್ ನೆಹರು ತಾರಾಲಯವು ಭಾರತ ದೇಶದ ಐದು ತಾರಾಲಯಗಳ ಪೈಕಿ ಒಂದಾಗಿದೆ. ಸ್ಮಾರ್ಟ್ ಸಿಟಿ ಮೀಷನ್ ಯೋಜನೆಯಡಿಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಜವಾಹರ್ ಲಾಲ್ ನೆಹರು ತಾರಾಲಯದ ಆವರಣದಲ್ಲಿ ನೂತನವಾಗಿ ಐಜಿಬಿಸಿ ಗ್ರೀನ್ ಬಿಲ್ಡಿಂಗ್ ಪರಿಸರ ಸ್ನೇಹಿ ಮಾದರಿಯಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ.

More New Additions to Bengaluru Museum Best for a Weekend Visit

ಈ ಕಟ್ಟಡದ ಪ್ರಮುಖ ಅಂಶಗಳು:

* ಯೋಜನೆಯ ಒಟ್ಟು ಮೊತ್ತ 42 ಕೋಟಿ ರೂ.

* 600 ಆಸನಗಳ ಆಡಿಟೋರಿಯಂ

* 4 ಉಪನ್ಯಾಸ ಸಭಾಂಗಣಗಳು 50 ಆಸನಗಳ ಸಾಮರ್ಥ್ಯ

* 1 ಉಪನ್ಯಾಸ ಸಭಾಂಗಣ 100 ಆಸನಗಳ ಸಾಮರ್ಥ್ಯ

• ಅಧ್ಯಕ್ಷರು ಮತ್ತು ಆಡಳಿತ ಮಂಡಳಿರವರ ಕೊಠಡಿಗಳು

* ವೀಕ್ಷಣಾ ದೂರದರ್ಶಕ (Observatory Telescope)

* 50 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ

* 20 ಕೆ.ಎಲ್.ಡಿ. ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ (STP)

* ಎ.ಎಚ್.ಯು. (Air Handeling Unit) ಮತ್ತು ಇತರ ಸೇವೆಗಳು

* ಡಿಜಿ- 2 ಸಂಖ್ಯೆ (125 & 250 ಕೆವಿಎ ಸಾಮರ್ಥ್ಯದ ಜನರೇಟರ್)

* ಕಟ್ಟಡದ ಒಟ್ಟು ವಿಸ್ತೀರ್ಣ: 9949.00

ಪರಿಸರಸ್ನೇಹಿ ಕಟ್ಟಡದ ಪ್ರಮುಖ ಅಂಶಗಳು ಇಲ್ಲಿದೆ

* ಒಳಾಂಗಣ ಗಾಳಿಯ ಗುಣಮಟ್ಟ : CO2 ಮಾನಿಟರ್ ಗಳ ಬಳಕೆ, ಕಡಿಮೆ ವಿಒಸಿ ಪೇಂಟ್, ಅಡ್ಹೆಸೀವ್ ಹಾಗೂ ಸಿಲಿಂಡರ್‌ಗಳ ಬಳಕೆ.

* ನೀರಿನ ಸಂರಕ್ಷಣೆ (ಜಲ ಸಂರಕ್ಷಣೆ) : ಎಸ್ ಟಿ ಪಿ ನಿರ್ಮಾಣ, ಎ.ಸಿ. ವ್ಯವಸ್ಥೆ (ಹವಾನಿಯಂತ್ರಣ ವ್ಯವಸ್ಥೆ), ಗಾರ್ಡನಿಂಗ್ ಮತ್ತು ಫ್ಲಷಿಂಗ್‌ಗೆ ಶೇ. 100ರಷ್ಟು ಸಂಸ್ಕರಿತ ನೀರಿನ ಬಳಕೆ.

* ಕಟ್ಟಡದ ವಿನ್ಯಾಸ: ಸೂರ್ಯನ ಚಲನೆಗೆ ಅನುಗುಣವಾಗಿ ಕಟ್ಟಡದ ಓರಿಯೆಂಟೇಷನ್.

* ಲೈಟಿಂಗ್ ವ್ಯವಸ್ಥೆ: ವಿಷನ್ ಗ್ಲೇಜಿಂಗ್ ಮತ್ತು ಡೇಲೈಟ್ ಗ್ಲೇಜಿಂಗ್ ಸಂಯೋಜನೆಯ ಮೂಲಕ ಶೇ. 90 ಕ್ಕಿಂತ ಹೆಚ್ಚಿನ ಜಾಗದಲ್ಲಿ ಹೊರಭಾಗದ ಗೋಚರತೆ ಹಾಗೂ ಶೇ. 75 ಕ್ಕಿಂತ ಹೆಚ್ಚಿನ ಜಾಗದಲ್ಲಿ ಹಗಲಿನ ಸಹಜ ಬೆಳಕಿನ ಲಭ್ಯತೆ.

* ಕೂಲಿಂಗ್: ಉಪನ್ಯಾಸ ಸಭಾಂಗಣದಲ್ಲಿ ವಾಟರ್ ಕೂಲ್ಡ್ ಚಿಲ್ಲರ್‌ಗಳು ಮತ್ತು ಅಂಡರ್ ಫ್ಲೋರ್ ಗಾಳಿ ವ್ಯವಸ್ಥೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+