ಆನ್‌ಲೈನ್ ಮೂಲಕ ರಾಜೀವ್ ಗಾಂಧಿ ವಿವಿ ಪದವಿ ಪ್ರಧಾನ ಮಾಡಿದ ಸಚಿವ ಸುಧಾಕರ್

ಬೆಂಗಳೂರು, ಜೂನ್ 25: ರಾಜ್ಯಪಾಲರಾದ ವಜುಭಾಯಿ ವಾಲಾ ಅವರ ಅನುಪಸ್ಥಿತಿಯಲ್ಲಿ ವಿಶ್ವವಿದ್ಯಾಲಯದ ಪರಕುಲಪತಿಗಳು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರೂ ಆದ ಡಾ.ಕೆ.ಸುಧಾಕರ್ ಅವರು ಆನ್ ಲೈನ್ ಮೂಲಕ ಪದವಿ ಪ್ರದಾನ ಮಾಡಿದ ಘಟನೆ ಗುರುವಾರ ನಡೆದಿದೆ.

ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವ ಸಮಾರಂಭ ಬೆಂಗಳೂರಿನಲ್ಲಿ ಜರುಗಿತು. ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಕುಲಪತಿಗಳಾದ ಪದ್ಮಭೂಷಣ ಡಾ.ಪಿ.ಬಲರಾಂ, ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ಸಚ್ಚಿದಾನಂದ್ ಮುಂತಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

Medical Education Minister Dr.K.Sudhakar conferred Rajiv Gandhi Varsity degrees through online

ಡಾ. ಸುಧಾಕರ್ ಅವರ ಕುಟುಂಬದವರಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಹೀಗಾಗಿ, ಆನ್‌ಲೈನ್ ವೀಡಿಯೋ ಸಂವಾದದ ಮೂಲಕ ಘಟಿಕೋತ್ಸವವನ್ನು ಉದ್ಘಾಟಿಸಿದರು. ವಿಶ್ವವಿದ್ಯಾಲಯದ ಪರ ಕುಲಪತಿಗಳಾಗಿ ಪದವಿ ಪ್ರದಾನ ಮಾಡುತ್ತಿರುವುದು ಅತ್ಯಂತ ಗೌರವದ ಸಂಗತಿ ಎಂದು ಅವರು ಹೇಳಿದರು.

Medical Education Minister Dr.K.Sudhakar conferred Rajiv Gandhi Varsity degrees through online

ವೈದ್ಯಕೀಯ, ದಂತವೈದ್ಯಕೀಯ, ಸ್ನಾತಕೋತ್ತರ, ಆಯುರ್ವೇದ, ಹೋಮಿಯೋಪತಿ ಮುಂತಾದ ರಂಗಗಳಲ್ಲಿನ ಸುಮಾರು 36,434 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು ಸಮಾರಂಭವನ್ನು ಆಯೋಜಿಸಲಾಗಿತ್ತು. ದೇಶದಲ್ಲೇ ಅತ್ಯಂತ ಪ್ರತಿಷ್ಠಿತ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇದಾಗಿದ್ದು ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+