ನೂತನ ಮತದಾರರಿಗೆ ಚುನಾವಣಾ ಆಯೋಗದಿಂದ ತರಬೇತಿ

ಬೆಂಗಳೂರು, ಮಾರ್ಚ್ 09: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೈಗೊಂಡ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವೇಳೆ ರಾಜ್ಯಾದ್ಯಂತ ಒಟ್ಟಾರೆ 2,743 ಮಂದಿ ಮಿಲೇನಿಯಂ ಮತದಾರರ ರೂಪದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಇವರೆಲ್ಲರೂ 2000 ನೇ ಇಸವಿಯ ಜನವರಿ 1ರಂದು ಜನಿಸಿದವರಾಗಿದ್ದಾರೆ. ಈ ಕಾರಣದಿಂದ ಇವರನ್ನು ಮಿಲೇನಿಯಂ ಮತದಾರರು ಎಂದು ಚುನಾವಣೆ ಆಯೋಗ ಗುರುತಿಸಿದೆ.

ಮೊದಲ ಬಾರಿಗೆ ಮತ ಚಲಾಯಿಸಲಿರುವ ಮಿಲೀನಿಯಂ ವೋಟರ್ಸ್ ಗಳನ್ನು ಮತದಾನದ ಹಕ್ಕಿನ ಕುರಿತು ಅರಿವು ಮೂಡಿಸುವ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಚುನಾವಣೆ ಆಯೋಗ ನಿರ್ಧರಿಸಿದೆ.

ಎಲೆಕ್ಷನ್ ಎಂದರೆ ರಾಜಕೀಯ ಪಕ್ಷಗಳ ನಡುವಿನ ಯುದ್ಧವೆಂದು ವ್ಯಾಖ್ಯಾನಿಸಲಾಗುತ್ತದೆ. ಹಾಗಾಗಿ ಚುನಾವಣೆ ರಂಗೇರುವಾಗ ರಣಕಣ, ಸಮಾರೋತ್ಸಾಹ ಎಂಬ ಪದಗಳು ಮೇಲಿಂದ ಮೇಲೆ ಬಳಕೆಯಾಗುತ್ತದೆ. ಆದರೆ, ಚುನಾವಣೆಯನ್ನು ಪ್ರಜಾಪ್ರಭುತ್ವವೆಂದು ಭಾವಿಸಬೇಕು.

ಇದು ಮತದಾರರಲ್ಲಿ ಸಂಭ್ರಮ ತರಬೇಕು ಎನ್ನುವುದು ಆಯೋಗದ ಆಲೋಚನೆಯಾಗಿದೆ.

Millennium voters in the state will get special training

ಡಿಸಿಗಳಿಗೆ ಸೂಚನೆ: ಮಿಲೇನಿಯಂ ಮತದಾರರ ಜಿಲ್ಲಾವಾರು, ವಿಧಾನಸಭೆ ಕ್ಷೇತ್ರವಾರು ವಿವರ ಸಲ್ಲಿಸುವಂತೆ ಚುನಾವಣಾ ಆಯೋಗದಿಂದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಆಯೋಗದ ಬಳಿ ಸದ್ಯಕ್ಕೆ ಒಟ್ಟಾರೆ ನೋಂದಣಿಯಾಗಿರುವ 2,743 ಮಿಲೇನಿಯಂ ಮತದಾರರ ಸಂಖ್ಯೆ ಮಾತ್ರ ಲಭ್ಯವಿದೆ.

ರಾಧಾನಿಯಲ್ಲಿ 135 ಮತದಾರರು: ಬಿಬಿಎಂಪಿ ವ್ಯಾಪ್ತಿಯ 28ಕ್ಷೇತ್ರಗಳಿಂದ ಒಟ್ಟಾರೆ 135 ಮಿಲೇನಿಯಂ ಮತದಾರರ ನೋಂದಣಿಯಾಗಿದೆ. ವಾರಾಂತ್ಯದಲ್ಲಿ ಮತದಾನವಿದ್ದರೂ ಬೆಂಗಳೂರಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+