ಸೋಮವಾರ ಬೆಂಗಳೂರಲ್ಲಿ ಮಾಂಸ ಮಾರಾಟ ನಿ‍ಷೇಧ

ಬೆಂಗಳೂರು, ಮೇ 15: ಬುದ್ಧ ಪೂರ್ಣಿಮಾ ಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ಸೋಮವಾರ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಬಿಬಿಎಂಪಿಯಿಂದ ಈ ಕುರಿತು ಆದೇಶ ಹೊರಡಿಸಲಾಗಿದೆ.

ಬೌದ್ಧ ಧರ್ಮದ ಸಂಸ್ಥಾಪಕ ಗೌತಮ್ ಬುದ್ಧ ಹುಟ್ಟಿದ ದಿನವನ್ನು ಬುದ್ಧ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಈ ವರ್ಷ ಮೇ 16ರ ಸೋಮವಾರ ಬುದ್ಧ ಪೂರ್ಣಿಮಾ ಇದೆ.

ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿರುವ ಅನೇಕ ದಿನಗಳ ಪಟ್ಟಿಗೆ ಈಗ ಬುದ್ಧ ಪೂರ್ಣಿಮಾ ಸೇರಿಕೊಂಡಂತಾಗಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ಮಾಂಸ ನಿಷೇಧ ಮೊದಲಿಂದಲೂ ಇದೆ. ಸರ್ವೋದಯ ದಿನ ಹಾಗು ಇನ್ನೂ ಕೆಲ ಹಬ್ಬ ಸೇರಿದಂತೆ ವರ್ಷದಲ್ಲಿ ಬೆಂಗಳೂರಿನಲ್ಲಿ ಏಳೆಂಟು ದಿನ ಮಾಂಸ ಮಾರಾಟ ಬಂದ್ ಆಗಿರುತ್ತದೆ.

Buddha Purnima: BBMP Bans Meat On May 16th

ಕಳೆದ ತಿಂಗಳು ರಾಮನವವಿ ದಿನವೂ ಮಾಂಸ ಮಾರಾಟ ನಿಷೇಧಿಸುವ ನಿರ್ಧಾರವನ್ನು ಬಿಬಿಎಂಪಿ ಕೈಗೊಂಡಿತ್ತು. ಈ ಎಲ್ಲಾ ದಿನಗಳಂದು ಮಾಂಸದಂಗಡಿಗಳು ತೆರೆಯುವಂತಿಲ್ಲ, ಮಾಂಸ ಮಾರಾಟ ನಡೆಸುವಂತಿಲ್ಲ.

ಸೋಮವಾರ ಮಾಂಸದಂಗಡಿ ಬಂದ್ ಸಾಮಾನ್ಯ: ರಾಜ್ಯದಲ್ಲಿ ಸಾಮಾನ್ಯವಾಗಿ ಬಹುತೇಕ ಮಾಂಸದಂಗಡಿಗಳು ಸೋಮವಾರ ಬಂದ್ ಆಗಿರುತ್ತವೆ. ಸೋಮವಾರ ದಿನಗಳಂದು ಮಾಂಸ ಸೇವನೆ ಮಾಡಬಾರದು ಎಂಬ ಹಿಂದೂ ಧರ್ಮದ ವಿವಿಧ ಪಂಗಡಗಳಲ್ಲಿ ಪರೋಕ್ಷ ಭಾವನೆಗಳಿವೆ. ಹೀಗಾಗಿ, ಬಹಳ ಮಂದಿ ಸೋಮವಾರ ಮಾಂಸ ತಿನ್ನದೇ ಇರುವುದರಿಂದ ಅಂದು ಅನೇಕ ಮಾಂಸದಂಗಡಿಗಳು ಬಂದ್ ಆಗಿರುತ್ತವೆ.

ಇನ್ನು, ಗೌರಿ ಗಣೇಶ ಇತ್ಯಾದಿ ಪ್ರಮುಖ ಹಬ್ಬಗಳಲ್ಲೂ ಬಹುತೇಕ ಹಿಂದೂಗಳು ಮಾಂಸಾಹಾರ ಸೇವಿಸುವುದಿಲ್ಲ. ಹೀಗಾಗಿ, ಇಂಥ ಪ್ರಮುಖ ಹಬ್ಬ ಹರಿದಿನಗಳಂದೂ ವ್ಯಾಪಾರ ಸಾಧ್ಯತೆ ಇಲ್ಲದ್ದರಿಂದ ಅನೇಕ ಮಾಂಸದಂಗಡಿಗಳು ಬಾಗಿಲು ಮುಚ್ಚುತ್ತವೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+