ಫೇಸ್‌ಬುಕ್ ಮೂಲಕ ಪ್ರೀತಿ, ಮದುವೆ, ಮಗು, ಕೊಲೆ
ಬೆಂಗಳೂರು, ಜನವರಿ 31: ಫೇಸ್‌ಬುಕ್ ಮೂಲಕವೇ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಫೇಸ್‌ಬುಕ್‌ನಿಂದಲೇ ದೂರವಾಗಿರುವುದಲ್ಲದೇ ಹೆಂಡತಿಯನ್ನೇ ಕೊಲೆ ಮಾಡಿರುವ ವಿಚಿತ್ರ ಘಟನೆ ಬೆಂಗಳೂರಲ್ಲಿ ನಡೆದಿದೆ.
ತನ್ನ ಹೆಂಡತಿ ಹಾಗೂ ಮಗವನ್ನು ಕೊಲೆ ಮಾಡಿರುವ ವಿಚಿತ್ರ ಘಟನೆ ಇದಾಗಿದೆ. ಸುಷ್ಮಾ ಮೃತರು, ಕಳೆದ ಎರಡು ವರ್ಷಗಳ ಹಿಂದೆ ಎಸ್‌ಕೆ ರಾಜು ಹಾಗೂ ಸುಷ್ಮಾ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದರು, ಕ್ರಮೇಣವಾಗಿ ಪ್ರೀತಿಗೆ ಜಾರಿದ್ದರು. ಸುಷ್ಮಾ ಗರ್ಭಿಣಿ ಎಂದು ತಿಳಿದ ಬಳಿಕ ಆರು ತಿಂಗಳ ಹಿಂದೆ ಮದುವೆಯಾಗಿದ್ದರು.
ಕಳೆದ ಕೆಲವು ದಿನಗಳಿಂದ ಸುಷ್ಮಾ ಹೆಚ್ಚು ಸಮಯವನ್ನು ಇನ್‌ಸ್ಟಾಗ್ರಾಂ, ಫೇಸ್‌ಬುಕ್ ನಲ್ಲೇ ಕಳೆಯುತ್ತಾಳೆ ಎನ್ನುವುದು ರಾಜು ಆರೋಪವಾಗಿತ್ತು, ಅದಕ್ಕೆ ರಾಜು ಸುಷ್ಮಾ ಮೇಲೆ ಪದೇ ಪದೇ ರೇಗಾಡುತ್ತಿದ್ದ.

ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು ಇದರಿಂದ ರೋಸಿ ಹೋಗಿದ್ದ ರಾಜು ಕೆಲ ದಿನಗಳ ಹಿಂದೆ ಆಕೆ ಹಾಗೂ ಮಗುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬಿಡದಿ ಬಳಿಕ ಕಾಡಿನತ್ತ ಪ್ರಯಾಣ ಬೆಳೆಸಿದ್ದ ಅಲ್ಲಿಯೇ ಕಲ್ಲಿನಲ್ಲಿ ಜಜ್ಜಿ ಕೊಲೆ ಮಾಡಿ ಆಕೆಯ ದೇಹವನ್ನು ಸಂಪೂರ್ಣವಾಗಿ ಸುಟ್ಟು ಹಾಕಿದ್ದ, ಬಳಿಕ ಮಗುವನ್ನೂ ಕೂಡ ಕೊಲೆ ಮಾಡಿದ್ದ.
ಮಗಳು ಹಾಗೂ ಮೊಮ್ಮಗು ಕಾಣಿಸದ ಹಿನ್ನೆಲೆಯಲ್ಲಿ ಸುಷ್ಮಾ ತಾಯಿ ದೂರು ದಾಖಲಿಸಿದ್ದರು, ಆ ದೂರು ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. ದೂರಿನಲ್ಲೇ ಅಳಿಯನ ಮೇಲೆ ಸಂದೇಹವನ್ನು ವ್ಯಕ್ತಪಡಿಸಲಾಗಿತ್ತು. ವಿಚಾರಣೆ ಬಳಿಕ ವಿಷಯ ಬಾಯ್ಬಿಟ್ಟಿದ್ದಾನೆ.












Click it and Unblock the Notifications