• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಕ್ರಾಂತಿಗೆ ತಟ್ಟದ ಬೆಲೆ ಏರಿಕೆ ಬಿಸಿ, ಗ್ರಾಹಕರಿಗೆ ಫುಲ್ ಖುಷಿ

|

ಬೆಂಗಳೂರು, ಜ, 13: ರಾಜ್ಯದ ಮನೆ-ಮನಗಳಲ್ಲಿ ಸಂಕ್ರಾಂತಿ ಸಂಭ್ರಮ ನೆಲೆಸಿದೆ. ಬೆಂಗಳೂರಲ್ಲೂ ಎಳ್ಳು-ಬೆಲ್ಲ ಹಬ್ಬದ ತಯಾರಿ ಜೋರಾಗಿದ್ದು ಮಾರುಕಟ್ಟೆಗಳತ್ತ ಜನ ತೆರಳುತ್ತಿದ್ದಾರೆ. ಖರೀದಿಗೆ ತೆರಳುವ ಮುನ್ನ ಒಂದಿಷ್ಟು ಮಾಹಿತಿ ತಿಳಿದುಕೊಂಡು ಹೋಗುವುದು ಒಳಿತು.

ಕಳೆದ ಕೆಲ ದಿನಗಳಿಂದ ಬೀಳುತ್ತಿರುವ ಚಳಿಯ ನಡುವೆಯೂ ಜನ ಅಗತ್ಯ ವಸ್ತು ಖರೀದಿಗೆ ಮುಂದಾಗುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳು, ಕೃಷ್ಣರಾಜೇಂದ್ರ ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿಬಝಾರ್, ಜಯನಗರ ಬಿಡಿಎ ಕಾಂಪ್ಲೆಕ್ಸ್, ಮತ್ತಿಕೆರೆ, ಎನ್ ಆರ್ ಕಾಲೋನಿ ಮುಂತಾದ ಭಾಗಗಳಲ್ಲಿ ಕಬ್ಬು, ಹೂವು, ಹಣ್ಣು ಮತ್ತು ತೆಂಗಿನಕಾಯಿ ಮಾರಾಟ ಜೋರಾಗಿದೆ.[ಜ.14, 15ರಂದು ಹಳ್ಳಿಮನೆಯಲ್ಲಿ ಸಂಕ್ರಾಂತಿ ಹಬ್ಬದೂಟ]

ಪ್ರತಿ ಸಾರಿ ಜನರನ್ನು ಕಾಡುತ್ತಿದ್ದ ಬೆಲೆ ಏರಿಕೆ ಬಿಸಿ ಈ ಬಾರಿ ದೂರವಾಗಿದೆ ಎಂದೇ ಹೇಳಬಹುದು. ತರಕಾರಿ ಬೆಲೆ ಇಳಿಕೆ ಹಾದಿಯಲ್ಲಿದೆ. ಹೂವು ಮಾಮೂಲಿ ದರ ಕಾಪಾಡಿಕೊಂಡಿದೆ. ಆದರೆ ಹಬ್ಬಕ್ಕೆ ಅಗತ್ಯವಾದ ಕಡಲೆ ಬೀಜ, ಗೆಣಸು, ಅವರೆಕಾಯಿ ಹಬ್ಬದ ಹಿನ್ನೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು ತಲೆ ಕೆಡಿಸಿಕೊಳ್ಳುವಂಥದ್ದೇನಿಲ್ಲ.

ಕಬ್ಬಿನ ಬೆಲೆ ಎಷ್ಟಿದೆ?

ಕಬ್ಬಿನ ಬೆಲೆ ಎಷ್ಟಿದೆ?

ಜೋಡಿ ಕಬ್ಬಿಗೆ 50 ರಿಂದ 100 ರೂ. ವರೆಗೆ ಮಾರಾಟವಾಗುತ್ತಿದೆ. ಅವುಗಳ ಬಣ್ಣ ಮತ್ತು ಗಾತ್ರ ಆಧರಿಸಿ ಬೆಲೆ ನಿರ್ಧಾರ ಮಾಡಲಾಗಿದೆ. ಕೆ ಆರ್ ಮಾರುಕಟ್ಟೆಯಿಂದ ಮುಂಜಾನಯೇ ತಂದ ಕಬ್ಬುಗಳನ್ನು ಚಿಲ್ಲರೆ ವ್ಯಾಪಾರಿಗಳು ಗಾಡಿ ಮೇಲೆ ಇಟ್ಟುಕೊಂಡು ಮನೆ ಮನೆ ಬಾಗಿಲೆಗೆ ತೆರಳಿ ಮಾರಾಟ ಮಾಡುತ್ತಿದ್ದ ದೃಶ್ಯವೂ ಕಂಡುಬಂತು.

ಬೆಂಗಳೂರಿಗೆ ಕಬ್ಬು ಎಲ್ಲಿಂದ ಬರುತ್ತದೆ?

ಬೆಂಗಳೂರಿಗೆ ಕಬ್ಬು ಎಲ್ಲಿಂದ ಬರುತ್ತದೆ?

ಸಾಮಾನ್ಯವಾಗಿ ಕಬ್ಬನ್ನು ಸಕ್ಕರೆ ನಾಡು ಮಂಡ್ಯ ಮತ್ತು ತಮಿಳುನಾಡು ಭಾಗದಿಂದ ತರಿಸಿಕೊಳ್ಳಲಾಗುತ್ತದೆ. ವ್ಯಾಪಾರಿಗಳು ಹೇಳುವಂತೆ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬಂದಿಲ್ಲ. ಹಾಗಾಗಿ ನಾವೇ ಜೋಡಿಗೆ 10 ರೂ. ಹೆಚ್ಚಿಗೆ ತೆರಬೇಕಾಗಿದೆ. ಅನಿವಾರ್ಯವಾಗಿ ದರ ಏರಿಕೆ ಮಾಡಬೇಕಾಗುತ್ತದೆ ಎನ್ನುತ್ತಾರೆ.

ಇನ್ನು ಬೋಣಿ ಆಗಿಲ್ಲ

ಇನ್ನು ಬೋಣಿ ಆಗಿಲ್ಲ

ಬೆಳಗ್ಗೆ 6 ಗಂಟೆಗೆ ಕಬ್ಬು ತಂದು ಹಾಕಿಕೊಂಡಿದ್ದೇವೆ. ಆದರೆ ಇನ್ನು ಮೊದಲ ವ್ಯಾಪಾರವೇ ಆಗಿಲ್ಲ. ಆಟೋಕ್ಕೆ, ವ್ಯಾಪಾರಕ್ಕೆ ಅಂತ ಅಳತೆ ಮೀರಿ ಹಣ ವೆಚ್ಚ ಮಾಡಿದ್ದೇನೆ. ಜನರು ಚೌಕಾಸಿ ಮಾಡಿದರೆ ನಷ್ಟ ಅನುಭವಿಸಬೇಕಾಗುತ್ತದೆ. ರಸ್ತೆ ಬದಿ ವ್ಯಾಪಾರಿಗಳ ಗೋಳು ಮುಗಿಯದ್ದು ಎಂದು ವಿದ್ಯಾಪೀಠ ಸಮೀಪ ವ್ಯಾಪಾರ ಸಾಕಮ್ಮ ಅಳಲು ತೋಡಿಕೊಳ್ಳುತ್ತಾರೆ.

ಹೂವು-ಹಣ್ಣು ತರಕಾರಿ

ಹೂವು-ಹಣ್ಣು ತರಕಾರಿ

ಹಬ್ಬದ ಹಿನ್ನೆಲೆಯಲ್ಲಿ ಹೂವು-ಹಣ್ಣು ದರದಲ್ಲೂ ಕೊಂಚ ಏರಿಕೆ ಕಂಡುಬಂದಿದೆ. ದ್ರಾಕ್ಷಿ ಕೆಜಿಗೆ 100 ರೂ. ದಾಳಿಂಬೆ ಕೆಜಿಗೆ 140 ರೂ. ಸೇಬು 140ರೂ ಇದ್ದು ಯಾವುದೇ ವಿಶೇಷ ಹೆಚ್ಚಳ ಕಂಡುಬಂದಿಲ್ಲ. ಆದರೆ ಬಾಳೆಹಣ್ಣಿನ ದರ ದಿಢೀರ್ ಏರಿಕೆಯಾಗಿದ್ದು ಕೆಜಿಗೆ 45 ರಿಂದ 50 ರೂ. ನೀಡಬೇಕಾಗಿದೆ.

ಹಬ್ಬ ಅಂದ ಮೇಲೆ ಬಿಡೋಕಾಗತ್ತ?

ಹಬ್ಬ ಅಂದ ಮೇಲೆ ಬಿಡೋಕಾಗತ್ತ?

ಹಬ್ಬ ಅಂದ ಮೇಲೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲೇಬೇಕು. ಸಂಪ್ರದಾಯಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಸಂಜೆ ಕಚೇರಿಗೆ ತೆರಳಬೇಕಾಗಿರುವುದರಿಂದ ಈಗಲೇ ಸಾಮಗ್ರಿ ಕೊಂಡೊಯ್ಯುತ್ತಿದ್ದೇನೆ ಎಂದು ಎನ್. ಆರ್.ಕಾಲೋನಿ ನಿವಾಸಿ ರಾಜಶೇಖರ್ ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Makara Sankranti, the festival of happiness, prosperity and togetherness, is celebrated all over Karnataka and many parts of India in the month of January. The festival gladness in every house of the city. People started festival preparation and rushed towards market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more