ಇನ್ನೂ ಒಂದು ವಾರ ರಾಜ್ಯದ ಜನರನ್ನು ಚಳಿ ಬಿಡದು!

ಬೆಂಗಳೂರು, ಜನವರಿ 24: ನಗರದ ತಾಪಮಾನ ದಿನದಿಂದ ದಿನಕ್ಕೆ ಏರಿಳಿತವಾಗುತ್ತಿದೆ. ಈ ತಿಂಗಳ ಅಂತ್ಯದವರೆಗೂ ಚಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಿಂಗಳ ಆರಂಭದಲ್ಲಿ ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ಇತ್ತು. ತಿಂಗಳ ಎರಡನೇ ವಾರದಲ್ಲಿ ಸ್ವಲ್ಪ ಹೆಚ್ಚಿದ್ದರಿಂದ ತಾಪಮಾನದಲ್ಲಿ ಏರಿಕೆ ಕಂಡುಬಂತು.ಆದರೆ, ಚಳಿಯ ಅನುಭವ ಇತ್ತು. ಈಗ ಹಿಂದಿನಂತೆಯೇ ಚಳಿ ಮುಂದುವರೆದಿದೆ.

ಎರಡು ದಿನಗಳ ಹಿಂದೆ 14 ಡಿಗ್ರಿ ಸೆಲ್ಸಿಯಸ್ ಇದ್ದ ಕನಿಷ್ಠ ತಾಪಮಾನ ಬುಧವಾರ 16 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾತ್ರಿ ಮತ್ತು ಮುಂಜಾನೆ ಚಳಿಯ ತೀವ್ರತೆ ಹೆಚ್ಚಿರುತ್ತದೆ. ಬೆಳಗ್ಗೆ 10 ಗಂಟೆಯವರೆಗೂ ಚಳಿ ಪ್ರಮಾಣ ಕಡಿಮೆಯಾಗುವುದಿಲ್ಲ.

Low temperature in Karnataka one more week

ಈ ತಿಂಗಳ ಅಂತ್ಯದವರೆಗೂ ತಾಪಮಾನದಲ್ಲಿ ಹೀಗೆಯೇ ಏರಿಕೆಯಿರುತ್ತದೆ.ಆದರೆ ಜನವರಿಯಲ್ಲಿ ಚಳಿ ಹೆಚ್ಚುವ ಸಾಧ್ಯತೆ ಇಲ್ಲ. ಮೋಡಗಳು ಚದುರಿ ಶುಭ್ರ ಆಕಾಶ ಕಂಡು ಬಂದಾಗ ಚಳಿ ಹೆಚ್ಚುತ್ತದೆ. ಕೆಲ ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಟ್ರಫ್ ಇರುವುದರಿಂದ ತಾಪಮಾನ 14 ರಿಂದ 16 ಡಿಗ್ರಿ ಸೆಲ್ಸಿಯಸ್ ಗೆ ಏರಿದೆ.

ಬೆಂಗಳೂರು ನಗರ ಬುಧವಾರದ ತಾಪಮಾನ: ನಗರದಲ್ಲಿ ಕನಿಷ್ಠ ತಾಪಮಾನ 17 ಹಾಗೂ ಗರಿಷ್ಠ ತಾಪಮಾನ 29ಇರಲಿದೆ. ಕೆಐಎಎಲ್ ನಲ್ಲಿ ಕನಿಷ್ಠ ತಾಪಮಾನ 15 ಡಿಗ್ರಿ ಹಾಗೂ ಗರಿಷ್ಠ ತಾಪಮಾನ 29 ಡಿಗ್ರಿ ಇರಲಿದೆ ಇನ್ನು ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ 15ಹಾಗೂ ಗರಿಷ್ಠ 29 ಇರಲಿದೆ.

ಬೆಳಗಾವಿಯಲ್ಲಿ ಅತ್ಯಂತ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜ್ಯದಲ್ಲಿ ಇನ್ನು 48 ಗಂಟೆಗಳ ಕಾಲ ಒಣಹವೆ ಮುಂದುವರೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+