ಪ್ರಚಾರದ ವೇಳೆ ಸಚಿವ ಎಂಟಿಬಿ ನಾಗರಾಜ್ ನಾಗಿಣಿ ಡ್ಯಾನ್ಸ್: ವೈರಲ್ ವಿಡಿಯೋ

ಬೆಂಗಳೂರು, ಏಪ್ರಿಲ್ 10: ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಅವರ ಪರವಾಗಿ ಪ್ರಚಾರ ನಡೆಸುವ ವೇಳೆ ವಸತಿ ಸಚಿವ ಎಂಟಿಬಿ ನಾಗರಾಜ್ ನಾಗಿಣಿ ನೃತ್ಯ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹೊಸಕೋಟೆಯ ಕಟ್ಟಿಗೇನಹಳ್ಳಿಯ ಎಂಟಿಬಿ ನಾಗರಾಜ್ ಸ್ಥಳೀಯರ ಜತೆಗೂಡಿ ನಾಗಿಣಿ ಶೈಲಿಯಲ್ಲಿ ನರ್ತಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿಕ್ಕಬಳ್ಳಾಪುರದ ಲೋಕಸಭೆ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರ ಪರ ಪ್ರಚಾರ ನಡೆಸಲು ಎಂಟಿಬಿ ನಾಗರಾಜ್ ತೆರಳಿದ್ದರು. ಈ ಸಂದರ್ಭದಲ್ಲಿ ಅವರು ಸಂಗೀತ ವಾದ್ಯಗಳ ಸದ್ದಿಗೆ ನರ್ತಿಸಲು ಆರಂಭಿಸಿದರು. ಎರಡೂ ಕೈಗಳನ್ನು ಹಾವಿನ ಹೆಡೆಯ ರೀತಿ ಇರಿಸಿಕೊಂಡು ಅವರು ನರ್ತಿಸಲು ಆರಂಭಿಸಿದರು.

lok sabha elections 2019 MTB Nagaraj Nagin dance Hosakote campaign for veerappa moily chikkaballapur

ಸ್ವತಃ ಸಚಿವರೇ ಹೀಗೆ ತಮಟೆ ಸದ್ದಿಗೆ ಎಗ್ಗಿಲ್ಲದೆ ಕುಣಿಯುವುದನ್ನು ಕಂಡ ಗ್ರಾಮಸ್ಥರಲ್ಲಿ ಕೂಡ ಹುರುಪು ಮೂಡಿತು. ಅವರೂ ಸಚಿವರ ಜತೆಗೆ ಹೆಜ್ಜೆಹಾಕಿದರು. ಪ್ರಚಾರ ಮೆರವಣಿಗೆಯಲ್ಲಿ ಸಚಿವರು ಜನರಿಗೆ ಒಂದಷ್ಟು ಸಮಯ ಮನರಂಜನೆ ನೀಡಿದರು. ಅವರ ಕುಣಿತದ ದೃಶ್ಯಗಳನ್ನು ಕೆಲವರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಅದೀಗ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+