ಬೆಂಗಳೂರಲ್ಲಿ ಸೆಕೆಯ ಪ್ರಮಾಣದಲ್ಲಿ ಕೊಂಚ ಇಳಿಕೆ
ಬೆಂಗಳೂರು, ಮಾರ್ಚ್ 08: ದಕ್ಷಿಣ ಒಳನಾಡಿನಲ್ಲಿ ಕಂಡುಬಂದಿರುವ ವಾಯುಭಾರ ಕುಸಿತದಿಂದ ನಗರದ ಗರಿಷ್ಠ ತಾಪಮಾನ ಒಂದು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.
ಇದರಿಂದ ಒಂದು ವಾರದಿಂದ ಇದ್ದ ಸೆಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಮಾರ್ಚ್ ಆರಂಭದಿಂದಲೇ ತಾಪಮಾನ ಹೆಚ್ಚಿದ್ದರಿಂದ ಸೆಕೆ ಅಧಿಕವಾಗಿತ್ತು. ಬುಧವಾರ ಮತ್ತು ಗುರುವಾರ ಸೆಕೆ ಸ್ವಲ್ಪ ಕಡಿಮೆಯಾಗಿದ್ದು, ಇನ್ನೂ ಒಂದು ಅಥವಾ ಎರಡು ದಿನ ಇದೇ ಹವಾಮಾನ ಮುಂದುವರೆಯಲಿದೆ.

ಈ ಬದಲಾವಣೆಯ ನಗರದ ಹವಾಮಾನದ ಮೇಲೆ ಹೆಚ್ಚೇನೂ ಪರಿಣಾಮ ಬೀರಿಲ್ಲ. ಆದರೆ 34 ಡಿಗ್ರಿ ಸೆಲ್ಸಿಯಸ್ ಇದ್ದ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಗೆ ಬಂದಿದೆ. ಇನ್ನೂ ಒಂದು ದಿನ ಇದೇ ರೀತಿ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಗುರುವಾರದ ಮಾಹಿತಿಯಂತೆ ನಗರದ ಕೇಂದ್ರ ಭಾಗದಲ್ಲಿ 33.5ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್32.2 ಡಿಗ್ರಿ ಸೆಲ್ಸಿಯಸ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.












Click it and Unblock the Notifications