ಬೆಂಗಳೂರು: ಇನ್ನೂ ಎರಡು ದಿನ ತುಂತುರು ಮಳೆ ಸಾಧ್ಯತೆ
ಬೆಂಗಳೂರು, ಏಪ್ರಿಲ್ 02: ದಕ್ಷಿಣ ಒಳನಾಡಿನಲ್ಲಿ ಸೃಷ್ಟಿಯಾದ ಟ್ರಫ್ ತೀವ್ರತೆ ಕಡಿಮೆಯಾಗಿರುವುದರಿಂದ ನಗರದಲ್ಲಿ ಮಳೆ ಕಡಿಮೆಯಾಗಿದೆ.ಇನ್ನೂ ಎರಡು ದಿನ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಟ್ರಫ್ ನಿಂದ ಸುರಿದ ಮಳೆ ಮಾರ್ಚ್ ತಿಂಗಳಲ್ಲಿ ದಾಖಲೆಯಾಗಲು ಕಾರಣವಾಗಿತ್ತು. ಏಪ್ರಿಲ್ ಮೊದಲ ದಿನದಿಂದ ಮಳೆ ಕಡಿಮೆಯಾಗಿದ್ದು, ದೊಡ್ಡ ಜಾಲ, ಹೆಸರಘಟ್ಟ, ಬಾಗಲೂರು, ಕಣ್ಣೂರಿನಲ್ಲಿ ಭಾನುವಾರ ಸಂಜೆ ತುಂತುರು ಮಳೆಯಾಗಿದೆ. ಇನ್ನೂ ಎರಡು ದಿನ ಸಂಜೆ ಮತ್ತು ರಾತ್ರಿ ಮೋಡ ಕವಿದ ವಾತಾವರಣ ಕಂಡುಬರಲಿದೆ.
ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ.ಮಳೆ ಕಡಿಮೆಯಾಗಿರುವುದರಿಂದ ಇನ್ನುಮುಂದೆ ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 33.5 ಡಿಗ್ರಿ ಸೆಲ್ಸಿಯಸ್ ಹಾಗೂ 21.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ 33.5 ಡಿಗ್ರಿ ಗರಿಷ್ಠ ಉಷ್ಣಾಂಶ ಹಾಗೂ 19.4ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇನ್ನು ಎಚ್‌ಎಎಲ್ ನಲ್ಲಿ 33ಡಿಗ್ರಿ ಸೆಲ್ಸಿಯಸ್ ಗರಿಚ್ಠ ಹಾಗೂ 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.












Click it and Unblock the Notifications