ಪತ್ರಕರ್ತೆ ಗೌರಿ ಲಂಕೇಶ್ ಜನ್ಮದಿನ 'ಗೌರಿ ದಿನ'ವಾಗಿ ಆಚರಣೆ
ಬೆಂಗಳೂರು, ಜನವರಿ 27 : ಇತ್ತೀಚೆಗೆ ಹಂತಕರ ಗುಂಡಿಗೆ ಬಲಿಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಜನ್ಮದಿನವನ್ನು ಜನವರಿ 29 ರಂದು ಗೌರಿ ದಿನವನ್ನಾಗಿ ಆಚರಿಸಲಾಗುತ್ತಿದೆ.
ಗೌರಿ ದಿನವು ಜನವರಿ 29 ರಂದು ಸೋಮವಾರ ಮಧ್ಯಾಹ್ನ 2.30 ರಿಂದ ಸಂಜೆ 8 ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ದ್ವೇಷ ರಾಜಕಾರಣ, ಗೌರಿ ಲಂಕೇಶ್ ಬದುಕು, ಬರಹ, ಹತ್ಯೆ ವಿಚಾರ ಇನ್ನು ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.

'ನಾನು ದ್ವೇಷ ರಾಜಕಾರಣ ಮತ್ತು ಮತೋನ್ಮಾದಗಳನ್ನು ಪ್ರತಿರೋಧಿಸುತ್ತೇನೆ . ಯಾಕೆಂದರೆ ನಾನು ಗೌರಿ. ಹಾಗಾಗಿ ಅಂದು ನಾನು ಅಲ್ಲಿರುತ್ತೇನೆ' ಹೀಗೆಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಕಾರ್ಯಕ್ರಮದಲ್ಲಿ ಹಿರಿಯ ನಟ ಪ್ರಕಾಶ್ ರೈ, ಕವಿತಾ ಲಂಕೇಶ್, ಕೆ. ನೀಲಾ, ಜಿಗ್ನೇಶ್ ಮೇವಾನಿ, ಉಮರ್ ಖಲೀಮ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕನ್ಹಯ್ಯ ಕುಮಾರ್, ದಿನೇಶ್ ಅಮಿನ್ ಮಟ್ಟು, ಎನ್. ಮುನಿಸ್ವಾಮಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications