• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಟಿ ಆಯುಕ್ತರ ಲ್ಯಾಪ್‌ಟಾಪ್ ಕದ್ದು ಓಡುತ್ತಿದ್ದ ಕಳ್ಳನನ್ನು ಹಿಡಿದ ಕಾರು ಚಾಲಕ

|

ಬೆಂಗಳೂರು, ಡಿಸೆಂಬರ್ 15: ಆದಾಯ ತೆರಿಗೆ ಇಲಾಖೆಯ ಲ್ಯಾಪ್‌ಟಾಪ್‌ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಕಾರು ಚಾಲಕ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್

ಘಟನೆ ಎಂಜಿರಸ್ತೆಯಲ್ಲಿ ನಡೆದಿದ್ದು, ತಮಿಳುನಾಡು ಮೂಲದ ಕುಮಾರನ್(30) ಆರೋಪಿ. ಆಯುಕ್ತ ಸಂಜಯ್ ಕುಮಾರ್ ಅವರು ಶಾಪಿಂಗ್‌ಗೆಂದು ಎಂಜಿ ರಸ್ತೆಯ ಶೋರೂಂಗೆ ಹೋಗಿದ್ದರು. ಚಾಲಕ ಹೇಮಂತ್ ಕುಮಾರ್ ಕಾರನ್ನು ಶೋರೂಂನಿಂದ ಸ್ವಲ್ಪವೇ ದೂರದಲ್ಲಿ ನಿಲ್ಲಿಸಿದ್ದರು. ಕಾರಿನ ಬಳಿ ಬಂದ ಕುಮಾರನ್ 10 ರೂ ಕೆಳಗೆ ಎಸೆದು ನಿಮ್ಮ ಹಣ ಬಿದ್ದಿದೆ ಎಂದು ಚಾಲಕ ಹೇಮಂತ್‌ಗೆ ಹೇಳಿದ್ದ.

ಮದುವೆಯಲ್ಲಿ ಸಂಬಂಧಿಕರನ್ನು ಮೆಚ್ಚಿಸಲು ಯುವತಿ ಮಾಡಿದ್ದೇನು?

ಹೇಮಂತ್ ಕಾರಿನಿಂದ ಕೆಳಗೆ ಬಗ್ಗಿ ನೋಟು ತೆಗೆದುಕೊಳ್ಳುವಷ್ಟರಲ್ಲಿ ಕಾರಿನ ಹಿಂದಿನ ಬಾಗಿಲು ತೆಗೆದು ಲ್ಯಾಪ್‌ಟಾಪ್ ಬ್ಯಾಗ್ ಮತ್ತು ಕೆಲ ಫೈಲ್‌ಗಳನ್ನು ಲಪಟಾಯಿಸಿ ಓಡಲು ಶುರು ಮಾಡಿದ್ದ.

ತಕ್ಷಣ ಹೇಮಂತ್ ಕುಮಾರ್ ಸ್ಥಳದಲ್ಲಿದ್ದ ಇತರೆ ಕಾರು ಚಾಲಕರಿಗೆ ಮಾಹಿತಿ ನೀಡಿದ್ದು, ಎಲ್ಲರೂ ಸೇರಿ ಕುಮಾರನ್ ಬೆನ್ನಟ್ಟಿದ್ದಾರೆ ಬಳಿಕ ಸಾರ್ವಜನಿಕರೂ ಸೇರಿಕೊಂಡು ಆತನನ್ನು ಬೆನ್ನಟ್ಟಿ ಕೊನೆಗೆ ಕಬ್ಬನ್‌ಪಾರ್ಕ್ ಪೊಲೀಸರಿಗೆ ಒಪ್ಪಿಸಿದ್ದಾರೆ.

English summary
Income Tax officer's lptop stolen by thief in MG roaf, later car driver and public chased him and caught him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X