ಬೆಂಗಳೂರಿನ ಈ ಭಾಗದಲ್ಲಿ ಮಾತ್ರ ಭೂಮಿ ಬೆಲೆ ಹೆಚ್ಚಳ, ಕಾರಣವೇನು ?
ಬೆಂಗಳೂರು ಅಭಿವೃದ್ಧಿಯ ವೇಗದಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೇ ಬೆಂಗಳೂರು ನಗರವು ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಮುಂದುವರಿದಿದೆ. ಇದರ ನಡುವೆ ಬೆಂಗಳೂರು ಅಭಿವೃದ್ಧಿಯಿಂದಾಗಿ ಎಲ್ಲಾ ಭಾಗದಲ್ಲೂ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಆದರೆ, ಬೆಂಗಳೂರು ಅಭಿವೃದ್ಧಿಯಿಂದಾಗಿ ಭೂಮಿ ಬೆಲೆ ಇನ್ನಷ್ಟು ಹೆಚ್ಚಳವಾಗಬೇಕಿತ್ತು. ಆದರೆ, ನಗರದ ರಿಯಲ್ ಎಸ್ಟೇಟ್‌ನ ಮೇಲೆ ಬೆಂಗಳೂರಿನ ಸಮಸ್ಯೆಯೊಂದು ಪರಿಣಾಮ ಬೀರುತ್ತಿದೆ. ಅದೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು ರಿಯಲ್ ಎಸ್ಟೇಟ್‌ನಲ್ಲಿ ಕರ್ನಾಟಕದಲ್ಲೇ ಮುಂಚೂಣಿಯಲ್ಲಿದೆ. ಬೆಂಗಳೂರಿನ ಭೂಮಿಗೆ ಇರುವ ಬೆಲೆ ಕರ್ನಾಟಕದಲ್ಲೇ ಅತಿ ಹೆಚ್ಚು ಅಂತಲೂ ಹೇಳಬಹುದು. ಅದೇ ರೀತಿ ಸಮಸ್ಯೆ ಇರುವುದು ಸಹ ಇಲ್ಲಿಯೇ. ಇನ್ನು ನಗರದ ಭೂಮಿ ಬೆಲೆ ಹೆಚ್ಚಳವಾಗುವುದಕ್ಕೆ ಈ ಭಾಗ ಅಭಿವೃದ್ಧಿ ಆಗಿರುವುದು ಮಾತ್ರವಲ್ಲ. ಇಲ್ಲಿಂದ ನೆರೆಯ ರಾಜ್ಯಗಳಿಗೆ ಕೆಲವೇ ಕಿ.ಮೀ ಇರುವುದು, ರಾಜಧಾನಿ ಹಾಗೂ ಪ್ರತಿಷ್ಠಿತ ಕಂಪನಿಗಳು ಇಲ್ಲಿ ನೆಲೆಯೂರಿರುವುದು ಸಹ ಪ್ರಮುಖ ಕಾರಣವಾಗಿದೆ. ಆದರೆ ಇದೀಗ ಬೆಂಗಳೂರಿನ ಬೆಳವಣಿಗೆಗೆ ಅಥವಾ ಭೂಮಿ ಬೆಲೆ ಹೆಚ್ಚಳಕ್ಕೆ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯೇ ತೊಡಕಾಗಿದೆ ಎಂದು Trade Brains ವರದಿ ಮಾಡಿದೆ.

ಬೆಂಗಳೂರಿನ ಟ್ರಾಫಿಕ್ ಬಿಕ್ಕಟ್ಟು ಇಲ್ಲಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಬದಲಾಯಿಸುತ್ತಿದೆ. ಆದರೆ, ಇದರಿಂದ ಲಾಭ - ನಷ್ಟ ಎರಡೂ ಸಹ ಆಗುತ್ತಿದೆ ಎನ್ನುತ್ತದೆ ವರದಿ. ನಗರದಲ್ಲಿ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸುವ ಸ್ಥಳಗಳು, ಉಪನಗರದ ಅಭಿವೃದ್ಧಿ ಮತ್ತು ಸಾರಿಗೆ ಆಧಾರಿತ ಅಭಿವೃದ್ಧಿ ಸೇರಿದಂತೆ ಹಲವು ಕಾರಣಕ್ಕೆ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ನಗರದಿಂದ ಕೆಲವು ಪ್ರಮುಖ ಪ್ರದೇಶಗಳಿಗೆ ಕೇವಲ 15 ನಿಮಿಷಗಳ ಅವಧಿಯಲ್ಲಿ ನೀವು ಹೋಗುವುದಕ್ಕೆ ಸಾಧ್ಯವಿದೆ. ಇದರಿಂದ ಬೆಂಗಳೂರನಲ್ಲಿ ಹೂಡಿಕೆ, ಯೋಜನೆ ಹಾಗೂ ಸುಸ್ಥಿರ ನಗರ ಅಭಿವೃದ್ಧಿ ಸಾಧ್ಯವಾಗುತ್ತಿದೆ.
ಇಷ್ಟೆಲ್ಲದರ ನಡುವೆ ಟಾಮ್‌ಟಾಮ್ ಸಂಚಾರ ಸೂಚ್ಯಂಕದ ಪ್ರಕಾರ, 2024 ಬೆಂಗಳೂರನ್ನು ಜಾಗತಿಕವಾಗಿ ದಟ್ಟಣೆಯಲ್ಲಿ 3ನೇ ಸ್ಥಾನದಲ್ಲಿದೆ. ವಾಹನ ಸವಾರರು ಹಾಗೂ ಜನ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಪ್ರತಿ ವರ್ಷ 134 ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಪ್ರಯಾಣಿಕರು ಟ್ರಾಫಿಕ್ ಜಾಮ್‌ನಲ್ಲೇ ಕಳೆಯುತ್ತಾರೆ. ಕೇವಲ 10 ಕಿ. ಮೀ ಸಂಚರಿಸುವುದಕ್ಕೆ 34 ನಿಮಿಷ ಆಗುತ್ತಿದೆ. ಆದರೆ, ಬೆಂಗಳೂರು ಟ್ರಾಫಿಕ್ ಜಾಮ್ ಎಲ್ಲೆಲ್ಲಿ ಆಗುತ್ತಿದೆ ಎನ್ನುವುದು ರಿಯಲ್ ಎಸ್ಟೇಟ್‌ನ ಮೇಲೆ ಪರಿಣಾಮ ಬೀರುತ್ತಿದೆ.
ಎಲ್ಲಿ ಸಂಚಾರ ಚೆನ್ನಾಗಿದೆ ಹಾಗೂ ಪರಿಸರ ಉತ್ತಮವಾಗಿದೆ ಎನ್ನುವುದನ್ನು ಹೂಡಿಕೆದಾರರು ಹಾಗೂ ಖರೀದಿದಾರರು ಗಮನಿಸುತ್ತಿದ್ದಾರೆ. ಅಲ್ಲದೇ ಆಸ್ತಿದಾರರು ಕೆಲವೊಂದು ಪ್ರದೇಶಗಳಲ್ಲಿ ಮಾತ್ರವೇ ಆಸ್ತಿಗಳನ್ನು ಖರೀದಿ ಮಾಡುತ್ತಿರುವುದು ಇನ್ನುಳಿದ ಪ್ರದೇಶಗಳ ಮೇಲೆಯೂ ಪರಿಣಾಮ ಬೀರುತ್ತಿದೆ. ಕೆಲವೊಂದು ಪ್ರಮುಖ ಪ್ರದೇಶಗಳು ರಿಯಲ್ ಎಸ್ಟೇಟ್‌ದಾರರ ಡಾರ್ಲಿಂಗ್ ಆಗುತ್ತಿದೆ. ಇನ್ನುಳಿದ ಪ್ರದೇಶಗಳಲ್ಲಿ ಭೂಮಿಗೆ ಹೆಚ್ಚಿನ ಬೆಲೆ ಇಲ್ಲ.
ಬೆಂಗಳೂರಿನ ಆಸ್ತಿದಾರರ ಫೇವರೆಟ್ ಪ್ರದೇಶಗಳಿವು. ವೈಟ್‌ಫೀಲ್ಡ್, ಸರ್ಜಾಪುರ, ಹೆಬ್ಬಾಳ ಮತ್ತು ಯಲಹಂಕ, ಎಲೆಕ್ಟ್ರಾನಿಕ್ ಸಿಟಿ, ಕನಕಪುರ ರಸ್ತೆ ಹಾಗೂ ದೇವನಹಳ್ಳಿ ಸೇರಿವೆ. ಈ ಭಾಗದಲ್ಲಿ ಭೂಮಿ ಖರೀದಿ ಹಾಗೂ ಮಾರಾಟ ಜೋರಾಗಿದೆ.












Click it and Unblock the Notifications