Property Good News: ಬೆಂಗಳೂರಿನಲ್ಲಿ ಈ ಕಾರಣಕ್ಕೆ ಭೂಮಿಗೆ ಗೋಲ್ಡ್‌ ಬೆಲೆ!

Property Good News: ಬೆಂಗಳೂರಿನಲ್ಲಿ ಮೊದಲಿನಿಂದಲೂ ಭೂಮಿಗೆ ಬಂಗಾರದ ಬೆಲೆ ಇದೆ. ಇದೀಗ ಬೆಂಗಳೂರಿನಲ್ಲಿ ಕೆಲವು ಭಾಗದಲ್ಲಿ ಭೂಮಿಗೆ ಏಕಾಏಕಿ ಚಿನ್ನದ ಬೆಲೆ ಬಂದಿದೆ. ರಾಜ್ಯ ರಾಜಧಾನಿಯ ವಿವಿಧ ಭಾಗದಲ್ಲಿ ಹೊಸ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಇದರಿಂದ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಇದರೊಂದಿಗೆ ಬೆಂಗಳೂರು ಮೆಟ್ರೋ ವಿಸ್ತರಣೆಯು ರಿಯಲ್‌ ಎಸ್ಟೇಟ್‌ ಹಾಗೂ ಆಸ್ತಿದಾರರಿಗೆ ಬಂಪರ್ ಗುಡ್‌ನ್ಯೂಸ್‌ ಕೊಟ್ಟಿದೆ. ಬೆಂಗಳೂರಿನಲ್ಲಿ ವಿವಿಧ ಭಾಗದಲ್ಲಿ ಇರುವ ಪ್ರಮುಖ ಸಮಸ್ಯೆ ಎಂದರೆ ಎಂಡ್‌ ಟು ಎಂಡ್‌ ಕನೆಕ್ಟಿವಿಟಿ (ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ನೇರ ಸಾರಿಗೆ ವ್ಯವಸ್ಥೆ) ಇಲ್ಲದೆ ಇರುವುದು. ಆದರೆ, ಮೆಟ್ರೋ ಕನೆಕ್ಟಿವಿಟಿ ಅಭಿವೃದ್ಧಿಯಿಂದ ಭೂಮಿಗೆ ಚಿನ್ನದ ಬೆಲೆ ಬಂದಿದೆ.

ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆಯಾಗುತ್ತಿದ್ದಂತೆಯೇ ರಿಯಲ್‌ ಎಸ್ಟೇಟ್‌ ಲೆಕ್ಕಾಚಾರ ಜೋರಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ಸೇವೆ ವಿಸ್ತರಣೆ ಆಗುವುದರಿಂದ ಎಂಡ್‌ ಟು ಎಂಡ್‌ ಕನೆಕ್ಟಿವಿಟಿ ಅಭಿವೃದ್ಧಿ ಆಗಲಿದೆ.ಇದರಿಂದ ವಿವಿಧ ಭಾಗದಲ್ಲಿ ಭೂಮಿಗೆ ಭರ್ಜರಿ ಬೆಲೆ ಬರಲಿದೆ. ಅಲ್ಲದೇ ಬೆಂಗಳೂರಿನ ಕೆಲವು ಭಾಗದಲ್ಲಿ ಭೂಮಿ ಬೆಲೆ ಇಳಿಕೆಯೂ ಆಗಲಿದೆ ಎನ್ನುವ ಚರ್ಚೆ ಜೋರಾಗಿದೆ.

land Price is Gold Different Parts of Bengaluru Property

ನಗರದಲ್ಲಿ ಮೆಟ್ರೋ ಸೇವೆ ವಿಸ್ತರಣೆಯಾಗುತ್ತಿದ್ದಂತೆಯೇ ಭೂಮಿಗೂ ಬಂಗಾರ ಬೆಲೆ ಬರುವ ನಿರೀಕ್ಷೆ ಹೆಚ್ಚಾಗಿದೆ. ಮೆಟ್ರೋ ಕನೆಕ್ಟಿವಿಟಿಯಿಂದಾಗಿ ಬೆಂಗಳೂರಿನ ಉಪನಗರ ಭಾಗದ ಪ್ರದೇಶಗಳು ಅಭಿವೃದ್ಧಿ ಆಗಲಿವೆ. ಬೆಂಗಳೂರಿನ ಮೆಟ್ರೋ ವಿಸ್ತರಣೆಯಿಂದಾಗಿ ರಿಯಲ್ ಎಸ್ಟೇಟ್ ಹೆಚ್ಚು ಕೈಗೆಟುಕುವಂತೆ ಆಗಲಿದೆ. ಅಲ್ಲದೇ ಕನೆಕ್ಟಿವಿಟಿಯು ಉಪನಗರ ಪ್ರದೇಶಗಳಲ್ಲಿ ವಸತಿ ಅಭಿವೃದ್ಧಿಯನ್ನು ಹೆಚ್ಚಳ ಮಾಡಲಿದೆ. ಮನೆ ಅಥವಾ ಆಸ್ತಿ ಖರೀದಿ ಮಾಡಬೇಕು ಎಂದು ಕೊಂಡಿರುವವರಿಗೆ ನಗರದ ಕೇಂದ್ರ ಪ್ರದೇಶಕ್ಕಿಂತ ಅಥವಾ ನಗರ ಪ್ರದೇಶಕ್ಕಿಂತ ಈ ಭಾಗದಲ್ಲಿ ಕಡಿಮೆ ಬೆಲೆಗೆ ಭೂಮಿ ಹಾಗೂ ಆಸ್ತಿ ಸಿಗಲಿದೆ ಎನ್ನುವ ಲೆಕ್ಕಾಚಾರವನ್ನು ರಿಯಲ್‌ ಎಸ್ಟೇಟ್‌ದಾರರು ಶುರು ಮಾಡಿದ್ದಾರೆ.

ಮೆಟ್ರೋದಿಂದ ರಿಯಲ್‌ ಎಸ್ಟೇಟ್‌ಗೆ ಹೇಗೆ ಲಾಭ ?

ಬೆಂಗಳೂರು ನಮ್ಮ ಮೆಟ್ರೋವನ್ನು ಮುಂದಿನ 5 ವರ್ಷದ ಅವಧಿಯಲ್ಲಿ ಬರೋಬ್ಬರಿ 143 ಕಿ.ಮೀ ವಿಸ್ತರಣೆ ಮಾಡುವುದಕ್ಕೆ ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಸದ್ಯ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ವಿಸ್ತರಣೆಯು 77 ಕಿ.ಮೀ ಇದೆ. ಇದರಿಂದಾಗಿ ಬೆಂಗಳೂರಿನಲ್ಲಿ ಆಸ್ತಿಗಳಿಗೆ ಬಂಪರ್‌ ಬರಲಿದೆ. ಬೆಂಗಳೂರಿನ ಉಪನಗರಗಳಲ್ಲಿ ಸಂಚಾರ / ಸಂಪರ್ಕ ಸಮಸ್ಯೆ ಇದೆ. ಆದರೆ ಮುಂದಿನ ದಿನಗಳಲ್ಲಿ ಮೆಟ್ರೋ ವಿಸ್ತರಣೆಯಿಂದಾಗಿ ಪರಿಣಾಮಕಾರಿ ಸಾರಿಗೆ ವ್ಯವಸ್ಥೆ, ಟ್ರಾಫಿಕ್‌ ಜಾಮ್ ಕಡಿಮೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಅಭಿವೃದ್ಧಿಯಾಗಲಿದೆ.

ಟ್ರಾಫಿಕ್‌ ಜಾಮ್‌ ಇಳಿಕೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಆಗುವುದರೊಂದಿಗೆ ಮೆಟ್ರೋ ಗಮನಾರ್ಹವಾಗಿ ವಿಸ್ತರಣೆ ಸಾಧ್ಯವಿದೆ ಎಂದು ಹೇಳಲಾಗಿದೆ.

Take a Poll

ನಗರದಲ್ಲಿ ಹೊಸ ಮೆಟ್ರೋ ಮಾರ್ಗಗಳ ಪ್ರಯಾಣದ ಸಮಯ ಕಡಿಮೆಯಾಗಿ ಹೊಸ ಪ್ರದೇಶಗಳಲ್ಲಿ ರಿಯಲ್‌ ಎಸ್ಟೇಟ್‌ಗೆ ಬಂಪರ್‌ ಬರಲಿದೆ. ಪರಿಸರ ಸ್ನೇಹಿ ಹಾಗೂ ಬಜೆಟ್‌ ಸ್ನೇಹಿ ಪ್ರದೇಶಗಳಿಂದ ರಿಯಲ್‌ ಎಸ್ಟೇಟ್‌ಗೆ ಧಮಾಕ ಅಂತಲೇ ಹೇಳಲಾಗುತ್ತಿದೆ. ಮೆಟ್ರೋ ವಿಸ್ತರಣೆಯು ಹಿಂದೆ ಟೆಕ್ಕಿಗಳ ವಲಸೆಗೆ ಕಾರಣವಾಗಿದೆ.

ಬೆಂಗಳೂರಿನ ಮೆಟ್ರೋ ರೆಡ್‌ ರೂಟ್‌ ಅಭಿವೃದ್ಧಿ ಮಾಡಲು ಮುಂದಾಗಿದೆ. ಸರ್ಜಾಪುರದಿಂದ ಹೆಬ್ಬಾಳ ಮಾರ್ಗಕ್ಕೆ ಈ ಹೊಸ ಮಾರ್ಗ ಇರಲಿದೆ. ಇದರಿಂದ ಭೂಮಿಗೆ ಭರ್ಜರಿ ಬೆಲೆ ಬರುವುದಕ್ಕೆ ಶುರುವಾಗಿದೆ.

ಈ ಭಾಗಕ್ಕೆ ಬಂಪರ್: ಹೊಸ ಮೆಟ್ರೋದಿಂದ ಕೋರಮಂಗಲ, ಸರ್ಜಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಕನೆಕ್ಟಿವಿಟಿ ಸಿಗಲಿದೆ. ಅಲ್ಲದೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲೂ ಮೆಟ್ರೋ ವಿಸ್ತರಣೆ ಮಾಡುವುದಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಈ ಎಲ್ಲಾ ಆಂಶಗಳು ಸಹ ರಿಯಲ್‌ ಎಸ್ಟೇಟ್‌ಗೆ ಲಾಭ ತಂದುಕೊಡಲಿದೆ ಎಂದು ಹೇಳಲಾಗುತ್ತಿದೆ.

ಮೆಟ್ರೋ ವಿಸ್ತೀರ್ಣವು ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ಗೆ ಹೊಸ ಧಮಾಕಾ ಸೃಷ್ಟಿ ಮಾಡಿದೆ ಅಂತಲೇ ಹೇಳಬಹುದಾಗಿದೆ. ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಏರಿಳಿತ ಇರುವ ಸಂದರ್ಭದಲ್ಲಿಯೇ ಈ ಹೊಸ ಮೆಟ್ರೋ ಯೋಜನೆಯು ಭರ್ಜರಿ ಲಾಭವನ್ನೇ ತಂದುಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+