ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇತಿಹಾಸದಲ್ಲೇ ಮೊದಲ ಸಲ ಲಾಭ ಗಳಿಸಿದ ಪ್ರವಾಸೋದ್ಯಮ ಇಲಾಖೆ

|
Google Oneindia Kannada News

ಬೆಂಗಳೂರು, ಮಾರ್ಚ್ 30: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಸ್ಥಾಪನೆಗೊಂಡ 47ವರ್ಷಗಳಲ್ಲಿ ಈ ವರ್ಷ ಅತಿ ಹೆಚ್ಚು ಅತಿ ಹೆಚ್ಚು ಲಾಭವನ್ನು ಗಳಿಸಿದೆ.

ಕಳೆದ 47 ವರ್ಷಗಳಲ್ಲಿ ಕೇವಲ ನಷ್ಟದಲ್ಲಿದ್ದ ಕೆಎಸ್ ಟಿಡಿಸಿ ಇದೇ ಮೊದಲ ಬಾರಿಗೆ 4.57ಕೋಟಿ ರೂ ಲಾಭ ಗಳಿಸಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೋಟೆಲ್ ಮತ್ತು ರೆಸಾರ್ಟ್ ಗಳಲ್ಲಿ ಇತ್ತೀಚಿನ ವರ್ಷಗಳಲ್ಲೇ ಅತಿ ಹೆಚ್ಚು ಗ್ರಾಹಕರು ಬಳಕೆ ಮಾಡಿದ್ದು, ಹೋಟೆಲ್ ಹಾಗೂ ರೆಸಾರ್ಟ್ ಗಳ ರೂಮುಗಳ ಕಾಯ್ದಿರಿಸುವ ಪ್ರಮಾಣ ಶೇ.30ಕ್ಕಿಂತ ಹೆಚ್ಚಾಗಿದೆ.

ಪ್ರವಾಸೋದ್ಯಮ ಇಲಾಖೆ: ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಪ್ಯಾಕೇಜ್ಪ್ರವಾಸೋದ್ಯಮ ಇಲಾಖೆ: ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಪ್ಯಾಕೇಜ್

ಕೆಎಸ್ ಟಿಡಿಸಿ ರಾಜ್ಯದಲ್ಲಿ ಒಟ್ಟು 19 ಹೋಟೆಲ್ ಗಳನ್ನು ಹೊಂದಿದ್ದು, ಇತ್ತೀಚೆಗಷ್ಟೇ ಬೆಂಗಳೂರು ಸಮೀಪದ ನಂದಿ ಬೆಟ್ಟದ ವಸತಿ ಗೃಹ ಹಾಗೂ ಬರಚುಕ್ಕಿ, ಗಗನಚುಕ್ಕಿಯಲ್ಲಿ ಹೋಟೆಲ್ ಗಳನ್ನು ಆರಂಭಿಸಿದ್ದು ಇದರಿಂದ ಪ್ರಯಾಣಿಕರು ಕೆಎಸ್ ಟಿಡಿಸಿ ವ್ಯಾಪ್ತಿಯಲ್ಲಿ ಸೇವೆಯನ್ನು ಪಡೆಯಲು ಹೆಚ್ಚು ಉತ್ಸುಕರಾಗಿದ್ದಾರೆ.

KSTDC earns highest profit in 47-year history

ಕೆಎಸ್ ಟಿಡಿಸಿ ರಾಜ್ಯಾದ್ಯಂತ ಪ್ರವಾಸಿಗರಿಗಾಗಿಯೇ ರೂಪಿಸಿರುವ ಪ್ಯಾಕೇಜ್ ಟೂರ್ ಗಳಲ್ಲೂ ಕೂಡ ಶೇ. 20ರಷ್ಟು ಗ್ರಾಹಕರ ಹೆಚ್ಚಳ ಕಂಡುಬಂದಿದ್ದು, 2017-18ರಲ್ಲಿ ಅತಿ ಹೆಚ್ಚು ಪ್ಯಾಕೇಜ್ ಟೂರುಗಳನ್ನು ಆಯೋಜಿಸಿರುವ ಸಾಧನೆ ಮಾಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದಲ್ಲದೆ ಗೋಲ್ಡನ್ ಚಾರಿಯೇಟ್ ರೈಲಿನ ಸೇವೆ ಕೂಡ ಭಾರತೀಯ ರೈಲ್ವೆ ಜತೆಗೆ ಕೆಎಸ್ ಟಿಡಿಸಿಯ ಸಾಧನೆ ಈ ವರ್ಷ ಉತ್ತಮವಾಗಿದ್ದು, ಈ ಸೇವೆಯನ್ನು ಮತ್ತಷ್ಟು ವರ್ಷಗಳ ಕಾಲ ಮಾಡಿರುವುದರಿಂದ ಕೆಎಸ್ ಟಿಡಿಸಿಗೆ ಹೆಚ್ಚು ಲಾಭವಾಗಲಿದೆ ಎಂದು ನಿಗಮ ನಿರೀಕ್ಷಿಸಿದೆ.

English summary
The Karnataka State Tourism Development Corporation has earned its highest profit yet- Rs.457 lakh in 2016-17, which is said to be the highest in its 47 year history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X