ವಾಸ್ತು ಸರಿಯಿದ್ದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲವೇ, ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಈ ಸರಳ ವಾಸ್ತು ಟಿಪ್ಸ್ ಪಾಲಿಸಿ
ವಾಸ್ತು ನಿಯಮಗಳನ್ನು ಅನುಸರಿಸಿ ಮನೆ ಕಟ್ಟಿದರೂ ಕೆಲವೊಮ್ಮೆ ಆರ್ಥಿಕ ಸಂಕಷ್ಟಗಳು ಎದುರಾಗಬಹುದು. ಅನಗತ್ಯ ಜಗಳಗಳು, ಕಿರಿಕಿರಿ ಮತ್ತು ಹಣಕಾಸಿನ ತೊಂದರೆಗಳು ಕಂಡುಬರುತ್ತವೆ. ಇದನ್ನು ವಾಸ್ತು ದೋಷ ಎಂದು ಭಾವಿಸಿ ದೊಡ್ಡ ಬದಲಾವಣೆಗಳಿಗೆ ಹೋಗುವ ಬದಲು, ವಾಸ್ತು ತಜ್ಞರು ಸೂಚಿಸುವ ಕೆಲವು ಸರಳ ಕ್ರಮಗಳನ್ನು ಪಾಲಿಸಿದರೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ.
ಮನೆಯಲ್ಲಿ ಲಾಕರ್ ಇಡುವ ಸರಿಯಾದ ದಿಕ್ಕು
ಹಣ, ಚಿನ್ನ ಮುಂತಾದವುಗಳನ್ನು ಇಡುವ ಲಾಕರ್ ಅಥವಾ ಪೆಟ್ಟಿಗೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಬೇಕು. ಲಾಕರ್ ಅಥವಾ ಪೆಟ್ಟಿಗೆ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತೆ ಇರಬೇಕು ಉತ್ತರ ದಿಕ್ಕು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಲಾಕರ್ ಅನ್ನು ಬೀಮ್ ಕೆಳಗೆ, ಮೆಟ್ಟಿಲಿನ ಕೆಳಗೆ ಅಥವಾ ಬಾತ್ರೂಮ್ ಗೋಡೆಯ ಹತ್ತಿರ ಇಡಬಾರದು.

ಉತ್ತರ ದಿಕ್ಕಿನ ಮಹತ್ವ
ಉತ್ತರ ದಿಕ್ಕನ್ನು ಸದಾ ಸ್ವಚ್ಛ ಮತ್ತು ಖಾಲಿಯಾಗಿ ಇಡುವುದು ಮುಖ್ಯ.
ಇಲ್ಲಿ ಕಸ ಅಥವಾ ಭಾರವಾದ ವಸ್ತುಗಳನ್ನು ಇಡಬಾರದು.
ಸಣ್ಣ ನೀರಿನ ಫೌಂಟನ್ ಅಥವಾ ಅಕ್ವೇರಿಯಂ ಇಟ್ಟರೆ ಹಣದ ಹರಿವು ಹೆಚ್ಚುತ್ತದೆ ಎಂದು ನಂಬಲಾಗಿದೆ.
ಮನೆಯ ಮುಖ್ಯ ದ್ವಾರ ಬಾಗಿಲು
ಮನೆಯ ಮುಖ್ಯ ಬಾಗಿಲು ಆಕರ್ಷಕವಾಗಿದ್ದು ಬೆಳಕಿನಿಂದ ತುಂಬಿರಬೇಕು.
ಸ್ವಸ್ತಿಕ್ ಅಥವಾ ಓಂ ಚಿಹ್ನೆ ಅಳವಡಿಸುವುದು ಶುಭಕರ.
ಮುರಿದು ಹೋಗಿರುವ ಅಥವಾ ಶಬ್ದ ಮಾಡುವ ಬಾಗಿಲುಗಳನ್ನು ತಕ್ಷಣ ಸರಿಪಡಿಸಬೇಕು.
ಅಡಿಗೆಮನೆ ದಿಕ್ಕು
ಅಡಿಗೆಮನೆ ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಇರಬೇಕು.
ನಳಗಳಲ್ಲಿ ನೀರು ಲೀಕ್ ಆಗಬಾರದು.
ನೀರು ವ್ಯರ್ಥವಾದರೆ ಹಣವೂ ವ್ಯರ್ಥವಾಗುತ್ತದೆ ಎಂಬ ನಂಬಿಕೆ ಇದೆ.
ಮನೆಯಲ್ಲಿ ಇರಬೇಕಾದ ಸಸ್ಯಗಳು
ಉತ್ತರ ದಿಕ್ಕಿನಲ್ಲಿ ಮನಿ ಪ್ಲಾಂಟ್ ಬೆಳೆಸುವುದು ಉತ್ತಮ.
ಲಾಕರ್ ಒಳಗೆ ಸಣ್ಣ ಕನ್ನಡಿ ಇಡಬಹುದು.
ಲಾಕರ್ ಎದುರು ಕನ್ನಡಿ ಇದ್ದರೆ ಧನ ಹೆಚ್ಚುತ್ತದೆ ಎಂದು ನಂಬಲಾಗಿದೆ.
ತುಳಸಿ ಮತ್ತು ಲಕ್ಷ್ಮೀ ಕೃಪೆ
ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡ ನೆಟ್ಟು ಪ್ರತಿದಿನ ಸಂಜೆ ದೀಪ ಹಚ್ಚುವುದು ಶುಭಕರ.
ಇದರಿಂದ ಲಕ್ಷ್ಮೀ ದೇವಿಯ ಅನುಗ್ರಹ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಸ್ವಚ್ಛತೆ - ಸಂಪತ್ತು
ಮನೆ ಸ್ವಚ್ಛವಾಗಿದ್ದು ಸುವ್ಯವಸ್ಥಿತವಾಗಿದ್ದರೆ ಆರ್ಥಿಕ ಸ್ಥಿರತೆ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ವಾಸ್ತು ಹೇಳುತ್ತದೆ.
ಒಟ್ಟಿನಲ್ಲಿ ಸರಿಯಾದ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಗೆ ಶಾಂತಿ, ಸಮೃದ್ದಿ ಮತ್ತು ಅಭವೃದ್ದಿ ಹೊಂದಲು ಸಹಕಾರಿಯಾಗುತ್ತದೆ ಎಂದು ವಾಸ್ತು ತಜ್ಞರು ಅಭಿಪ್ರಾಯ ಪಡುತ್ತಾರೆ.












Click it and Unblock the Notifications