ಟೆರೇಸ್‌ನಿಂದ ಆಯತಪ್ಪಿ ಬಿದ್ದು ಹೆಡ್ ಕಾನ್‌ಸ್ಟೆಬಲ್ ಸಾವು
ಬೆಂಗಳೂರು, ಫೆಬ್ರವರಿ 13: ವಸತಿಗೃಹದ ಮೂರನೇ ಮಹಡಿಯ ಟೆರೇಸ್‌ನಿಂದ ಬಿದ್ದು ಹೆಡ್ ಕಾನ್‌ಸ್ಟೆಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಜ್ಯ ಮೀಸಲು ಪಡೆಯ ಎನ್ ಮುದ್ರೆ(59) ಮೃತರು. ಆಯತಪ್ಪಿ ಬಿದ್ದು ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಅವರು 9ನೇ ಬೆಟಾಲಿಯನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಮುದ್ರೆ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ ಎಎಸ್ ಐ ಸ್ಥಳಕ್ಕೆ ದಾವಿಸಿ ಪರೀಕ್ಷಿಸಿದ್ದಾರೆ, ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಕೋರಮಂಗಲದಲ್ಲಿರುವ ವಸತಿಗೃಹದಲ್ಲಿ ನೆಲೆಸಿದ್ದ ಮುದ್ರೆ ಅವರು, ಟ್ಯಾಂಕ್‍ನಲ್ಲಿ ನೀರು ಇದೆಯೇ ಎಂದು ಪರಿಶೀಲಿಸಲು ಬುಧವಾರ ಬೆಳಿಗ್ಗೆ 6 ಗಂಟೆಗೆ ಟೇರೆಸ್‍ಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಶವನನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications