ಬೆಂಗಳೂರಿನ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಲಭ್ಯ

ಬೆಂಗಳೂರು, ಜುಲೈ 29: ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಪಿಪಿಇ ಕಿಟ್ ಲಭ್ಯವಿರಲಿದ್ದು, ಡಿಜಿಟಲ್ ಬ್ಯಾಂಕಿಂಗ್ ಮೂಲಕ ಮಾತ್ರ ಹಣ ಪಾವತಿ ಮಾಡಬಹುದಾಗಿದೆ.

Recommended Video

      Rafael fighter jet lands in India | Oneindia Kannada

      ನೈಋತ್ಯ ರೈಲ್ವೆಯು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್, ಸ್ಯಾನಿಟೈಸರ್ ಅನ್ನು ವೆಂಡಿಂಗ್ ಯಂತ್ರದ ಮೂಲಕ ಮಾರಾಟ ಮಾಡುತ್ತಿದೆ.

      ರೈಲ್ವೆ ನಿಲ್ದಾಣದಿಂದ ತಮ್ಮ ತಮ್ಮ ಊರುಗಳಿಗೆ ತೆರಳಿರುವ ಪ್ರಯಾಣಿಕರ ಆರೋಗ್ಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾಸ್ಕ್‌ಗಳಿಗಾಗಿ ಎರಡು ವೆಂಡಿಂಗ್ ಯಂತ್ರವನ್ನು ಅಳವಡಿಸಲಾಗಿದೆ.

      ಮೊದಲ ಯಂತ್ರವನ್ನು ಪ್ಲಾಟ್‌ಫಾರಂ ನಂಬರ್ 1 ಹಾಗೂ ಎರಡನೇ ಪ್ಲ್ಯಾಟ್‌ಫಾರಂನಲ್ಲಿ, ಎರಡನೇ ಯಂತ್ರವನ್ನು ಎಂಟನೇ ಪ್ಲ್ಯಾಟ್‌ಫಾರಂನಲ್ಲಿ ಇರಿಸಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಒಟ್ಟು 5ಯಂತ್ರವನ್ನು ಅಳವಡಿಸಲು ನಿರ್ಧರಿಸಲಾಗಿದೆ. ಯಶವಂತಪುರ ಹಾಗೂ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗುತ್ತದೆ.

      ಈ ವೆಂಡಿಂಗ್ ಯಂತ್ರವು ನಗದನ್ನು ಪಡೆಯುವುದಿಲ್ಲ, ಆನ್‌ಲೈನ್ ಪೇಮೆಂಟ್‌ಗೆ ಮಾತ್ರ ಅವಕಾಶವಿರುತ್ತದೆ. ಪ್ರಯಾಣಿಕರು ತಮಗೆ ಬೇಕಾದ ರೀತಿಯ ಮಾಸ್ಕ್‌ಗಳನ್ನು ಪಡೆದುಕೊಳ್ಳಬಹುದು. ತಮಗೆ ಬೇಕಾದ ಬೆಲೆಯಲ್ಲಿ ಮಾಸ್ಕ್‌ಗಳು ಲಭ್ಯವಿರಲಿದೆ. ಗೂಗಲ್ ಪೇ, ಪೇಟಿಯಂ ಮೂಲಕವೂ ಹಣ ಪಾವತಿ ಮಾಡಬಹುದಾಗಿದೆ.

      KSR Majestic Railway Station Installs Vending Machines For Masks, Hand Sanitisers

      ಇದನ್ನು ಪ್ರಯೋಗಾತ್ಮಕವಾಗಿ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿದೆ. ಇದು ಯಶಸ್ವಿಯಾದರೆ ಎಲ್ಲಾ ಪ್ಲ್ಯಾಟ್‌ಫಾರಂಗಳಲ್ಲಿಯೂ ಅಳವಡಿಸಲಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+