• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೇಜಸ್ವಿ ಮಾಯಾಲೋಕದಿ ಅವಿರತವಾಗಿ ಕೇಳಿಕಥೆಯ

By Mahesh
|
Google Oneindia Kannada News

ಕನ್ನಡ ಸಾಹಿತ್ಯ ಹಾಗೂ ಆಡಿಯೋ ಮಾರುಕಟ್ಟೆ ಕ್ಷೇತ್ರದಲ್ಲೇ ವಿನೂತನ ಪ್ರಯೋಗವಾದ 'ಕೇಳಿ ಕಥೆಯ' ಆಡಿಯೋ ಪುಸ್ತಕವು ಜನಮನಗೆದ್ದ ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟುಹಬ್ಬದ ಮುನ್ನಾ ದಿನ ಲೋಕಾರ್ಪಣೆಗೊಳ್ಳುತ್ತಿದೆ. ಅಂದು ಸಂಜೆ ಅವಿರತ ಪ್ರತಿಷ್ಠಾನ ವಿಶಿಷ್ಟವಾಗಿ ತೇಜಸ್ವಿ ಅವರ ಹುಟ್ಟುಹಬ್ಬ ಆಚರಿಸುತ್ತಿದೆ.

ಕೇಳಿಕಥೆಯ ಇನ್ನೂ ಬಿಡುಗಡೆ ಏಕೆ ಆಗಿಲ್ಲ ಎಂದು ಜನ ಕೇಳುವ ಪ್ರಶ್ನೆಗೆ ವಿಡಿಯೋ ರೂಪದಲ್ಲಿ ಕೇಳಿಕಥೆಯ ತಂಡ ಉತ್ತರ ನೀಡಿದೆ ಇದೇ ಸೆಪ್ಟೆಂಬರ್ 07 ರಂದು ಗಡಿನಾಡ ಕನ್ನಡ ಮಕ್ಕಳ ಪುಟಾಣಿ ಕೈಗಳಿಂದ ಹೊರಬರಲಿದೆ "ಕೇಳಿ ಕಥೆಯ" ಜೊತೆಗೆ, ಕನ್ನಡದ ಮೌಖಿಕ ಕಥನ ಪರಂಪರೆಯ ನೇರ ಪ್ರಾತ್ಯಕ್ಷಿಕೆ ಹರಿಕಥೆ, ಕಂಸಾಲೆ ಮತ್ತು ನೀಲಗಾರರ ಪದಗಳ ಪಲುಕುಗಳು. [ಕೇಳಿ ಕಥೆಯ ತಂಡದ ಸುದ್ದಿಗೋಷ್ಠಿ ವಿವರ]

ನಮ್ಮೆಲ್ಲರ ಪ್ರೀತಿಯ ತೇಜಸ್ವಿಯಿಂದ, ಯುವ ಲೇಖಕ ವಿಕ್ರಮ್ ಹತ್ವಾರ್ ನ ಕತೆಯೂ ಸೇರಿದಂತೆ ಇದರಲ್ಲಿ ಆರು ಕತೆಗಳಿವೆ. ಹಿರಿಯ ನಿರ್ದೇಶಕ ನಾಗಾಭರಣ ರಿಂದ ರಕ್ಷಿತ್ ಶೆಟ್ಟಿಯ ತನಕ ಆರು ವಿಶಿಷ್ಠ ದನಿಗಳು ಈ ಕತೆಗಳನ್ನ ಓದಿವೆ.ಈ ಆಡಿಯೋ ಸಿಡಿ ಯಿಂದ ಬರುವ ಸಂಪೂರ್ಣ ಲಾಭ ಅವಿರತ ಪ್ರತಿಷ್ಠಾನದ ಮೂಲಕ ಗಡಿನಾಡ ಕನ್ನಡ ಮಕ್ಕಳ ಶಿಕ್ಷಣಕ್ಕೆ ಮೀಸಲು.

ತೇಜಸ್ವಿ ನೆನಪಿನ 'ಮಾಯಾಲೋಕ - ತೇಜಸ್ವಿ ಹಾದಿಯಲ್ಲೊಂದು ಪಯಣ' ಕಾರ್ಯಕ್ರಮ(ಸೆ.7) ಸರಣಿಯ ಎರಡನೇ ಹಾಗೂ ಕೊನೆಯ ದಿನದ ಕಾರ್ಯಕ್ರಮ ಸೆಪ್ಟೆಂಬರ್ 14 ರಂದು "ತೇಜಸ್ವಿ ಸಾಹಿತ್ಯ - ಕಾಲುದಾರಿಯ ನೋಟ". ಈ ಕಾರ್ಯಕ್ರಮವು ಒಂದು ಸಾಹಿತ್ಯ ಮಂಟಪವಾಗಿದ್ದು, ಇಲ್ಲಿ ಶಿಬಿರಾರ್ಥಿಗಳು ಮುಖ್ಯ ಭೂಮಿಕೆಯನ್ನು ವಹಿಸಬೇಕಾಗುತ್ತೆ.

ಶಿಬಿರಾರ್ಥಿ ತಮ್ಮ ಹೆಸರು, ವಿದ್ಯಾಭ್ಯಾಸ , ವೃತ್ತಿಯ ವಿವರಗಳ ಜೊತೆಗೆ ತಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಈ ಕೆಳಕಂಡ ಈ-ಮೈಲ್ ವಿಳಾಸಗಳಿಗೆ ಕಳುಹಿಸಬೇಕಾಗಿ ವಿನಂತಿಸುತ್ತೇವೆ

ಪ್ರಸನ್ನ ಲಕ್ಷ್ಮೀಪುರ: prasanna.lakshmipura@gmail.com
ಸತೀಶ್ ಗೌಡ: kts_gowda@yahoo.com, 98800 86300

ಕೇಳಿಕಥೆಯ ಪುಟಾಣಿ ಕೈಗಳಿಂದ ಹೊರಬರಲಿದೆ

ಕೇಳಿಕಥೆಯ ಪುಟಾಣಿ ಕೈಗಳಿಂದ ಹೊರಬರಲಿದೆ

ಕೇಳಿಕಥೆಯ ಇನ್ನೂ ಬಿಡುಗಡೆ ಏಕೆ ಆಗಿಲ್ಲ ಎಂದು ಜನ ಕೇಳುವ ಪ್ರಶ್ನೆಗೆ ವಿಡಿಯೋ ರೂಪದಲ್ಲಿ ಕೇಳಿಕಥೆಯ ತಂಡ ಉತ್ತರ ನೀಡಿದೆ ಇದೇ ಸೆಪ್ಟೆಂಬರ್ 07 ರಂದು ಗಡಿನಾಡ ಕನ್ನಡ ಮಕ್ಕಳ ಪುಟಾಣಿ ಕೈಗಳಿಂದ ಹೊರಬರಲಿದೆ "ಕೇಳಿ ಕಥೆಯ" ಜೊತೆಗೆ, ಕನ್ನಡದ ಮೌಖಿಕ ಕಥನ ಪರಂಪರೆಯ ನೇರ ಪ್ರಾತ್ಯಕ್ಷಿಕೆ ಹರಿಕಥೆ, ಕಂಸಾಲೆ ಮತ್ತು ನೀಲಗಾರರ ಪದಗಳ ಪಲುಕುಗಳು.

ಕೇಳಿ ಕಥೆಯ ಏಕೆ ಬಿಡುಗಡೆಯಾಗುತ್ತಿಲ್ಲ?

ನಮ್ಮೆಲ್ಲರ ಪ್ರೀತಿಯ ತೇಜಸ್ವಿಯಿಂದ, ಯುವ ಲೇಖಕ ವಿಕ್ರಮ್ ಹತ್ವಾರ್ ನ ಕತೆಯೂ ಸೇರಿದಂತೆ ಇದರಲ್ಲಿ ಆರು ಕತೆಗಳಿವೆ. ಹಿರಿಯ ನಿರ್ದೇಶಕ ನಾಗಾಭರಣ ರಿಂದ ರಕ್ಷಿತ್ ಶೆಟ್ಟಿಯ ತನಕ ಆರು ವಿಶಿಷ್ಠ ದನಿಗಳು ಈ ಕತೆಗಳನ್ನ ಓದಿವೆ.ಈ ಆಡಿಯೋ ಸಿಡಿ ಯಿಂದ ಬರುವ ಸಂಪೂರ್ಣ ಲಾಭ ಅವಿರತ ಪ್ರತಿಷ್ಠಾನದ ಮೂಲಕ ಗಡಿನಾಡ ಕನ್ನಡ ಮಕ್ಕಳ ಶಿಕ್ಷಣಕ್ಕೆ ಮೀಸಲು.

ತೇಜಸ್ವಿ ಹುಟ್ಟುಹಬ್ಬ ವಿಶಿಷ್ಟ ಕಾರ್ಯಕ್ರಮ

ತೇಜಸ್ವಿ ಹುಟ್ಟುಹಬ್ಬ ವಿಶಿಷ್ಟ ಕಾರ್ಯಕ್ರಮ

ಬನ್ನಿ, ತೇಜಸ್ವಿಯವರ, ಸಾಹಿತ್ಯ, ವಿಚಾರ, ವಿಜ್ಞಾನ, ಚಾರಣ, ಬೇಟೆ, ಫಿಶಿಂಗ್ ಹಾಗೂ ಇತರೆ ಆಸಕ್ತಿಕರ ವಿಷಯಗಳ ಆಪ್ತ ಮಾತು-ಕತೆಯ ಜೊತೆಗೆ, ಅವರ ಪ್ರಮುಖ ಹವ್ಯಾಸವಾಗಿದ್ದ 'ಬರ್ಡ್ ಫೋಟೋಗ್ರಫಿ' ಬಗ್ಗೆ ಒಂದು ವಿಶಿಷ್ಟ ಕಾರ್ಯಕ್ರಮದ ಜೊತೆ ಆ ದಿನ ಸಂಜೆ ಕಳೆಯೋಣ ಸೆಪ್ಟೆಂಬರ್ 7 ತೇಜಸ್ವಿ ಹೆಜ್ಜೆ ಗುರುತು

4.30 ಕ್ಕೆ ತೇಜಸ್ವಿ ನಾನು ಕಂಡಂತೆ - ಡಾ.ಪುಟ್ಟಸ್ವಾಮಿ. ಕೆ ಬರಹಗಾರರು
5.00 ಕ್ಕೆ ತೇಜಸ್ವಿ -ಕನ್ನಡಪರ ರಾಜಕೀಯ ಚಿಂತನೆ - ವಸಂತ ಶೆಟ್ಟಿ
5.30 : ತೇಜಸ್ವಿ ಮತ್ತು ವೈಚಾರಿಕ ಚಿಂತನೆ - ಡಾ.ಕೆ.ವೈ.ನಾರಾಯಣ ಸ್ವಾಮಿ
6.00: ಪಕ್ಷಿನೋಟ (ಪಕ್ಷಿಗಳ ಛಾಯಚಿತ್ರ ಪ್ರದರ್ಶನ)

ಸ್ಠಳ : ಆರ್.ವಿ. ಟೀಚರ್ಸ್ ಕಾಲೇಜು ಜಯನಗರ ಬೆಂಗಳೂರು

ತೇಜಸ್ವಿ ಸಾಹಿತ್ಯ - ಕಾಲುದಾರಿಯ ನೋಟ

ತೇಜಸ್ವಿ ಸಾಹಿತ್ಯ - ಕಾಲುದಾರಿಯ ನೋಟ

ಈ ಶಿಬಿರದ ಮೂಲ ಉದ್ದೇಶ ವಿದ್ಯಾರ್ಥಿಗಳಿಗೆ ಮತ್ತು ಜನ ಸಾಮಾನ್ಯರಿಗೆ
1) ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸುವುದು.
2) ವೈಚಾರಿಕತೆ ಹಾಗೂ ವೈಚಾರಿಕ ಸಾಹಿತ್ಯ ಪ್ರಕಾರದ ಬಗ್ಗೆ ಪರಿಚಯಿಸುವುದು
3) ತೇಜಸ್ವಿಯವರ ಬರಹಗಳ, ವೈಚಾರಿಕ ದೃಷ್ಟಿಯ ಆಳವಾದ ಅಧ್ಯಯನದೆಡೆಗೆ ಸಾಗಲು ಸಿದ್ದಗೊಳಿಸುವುದು

ಶಿಬಿರದ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಭಾಗವಹಿಸುವ ಪ್ರತಿಯೊಬ್ಬ ಶಿಬಿರಾರ್ಥಿಗೂ ತನ್ನ ಅಭಿಪ್ರಾಯ ಮಂಡಿಸಲು ಅವಕಾಶ ಕಲ್ಪಿಸಬೇಕಾಗಿರುವುದರಿಂದ ಈ ಸಾಹಿತ್ಯ ಶಿಬಿರ ಕೇವಲ 50 ಜನ ಶಿಬಿರಾರ್ಥಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆಸಕ್ತರು ಕೂಡಲೇ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಕೋರುತ್ತೇವೆ.

ಶಿಬಿರದ ಮುಖ್ಯ ನಿರ್ವಾಹಕರು:
ಡಾ. ಕೆ.ವೈ.ನಾರಾಯಣ ಸ್ವಾಮಿ, ನಾಟಕಕಾರರು

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ:
ಡಾ. ಮಲ್ಲಿಕಾರ್ಜುನ ಮೇಟಿ, ಭಾಷಾ ತಜ್ಞರು, ಶಿವಮೊಗ್ಗ
ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ, ಸಹಜ ಕೃಷಿ ಮತ್ತು ಸಂಸ್ಕೃತಿ ಚಿಂತಕರು
ಎನ್. ಸಂಧ್ಯಾರಾಣಿ, ಉಪ ಸಂಪಾದಕಿ, ಅವಧಿ ಅಂತರ್ಜಾಲ ಪತ್ರಿಕೆ

ಶಿಬಿರದ ದಿನಾಂಕ:
14 ಸೆಪ್ಟೆಂಬರ್ 2014, ಭಾನುವಾರ
ಸ್ಥಳ: ಸರ್ಕಾರಿ ವಿಜ್ಞಾನ ಕಾಲೇಜು, ಕೆ.ಆರ್.ಸರ್ಕಲ್ ಬಳಿ, ನೃಪತುಂಗ ರಸ್ತೆ, ಬೆಂಗಳೂರು

English summary
Come join the children on the 07 September, from the border areas of Karnataka in launching Kelikatheya and you can also witness the glorious story telling heritage of Karnataka with glimpses of Kamsaale, Neelagara padagaLu and Hari Kathe later in the evening one can witness KP Tejaswi's Birthday in Unique way organised by Aviratha Trust
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X