ಬೆಂಗಳೂರಲ್ಲಿ ಲೈಸೆನ್ಸ್ ಪಡೆದ ವಿರಾಟ್ ಕೊಹ್ಲಿ ಸಾಕು ನಾಯಿಗಳು!
ಬೆಂಗಳೂರು, ಏಪ್ರಿಲ್ 23:ಸಾಕುನಾಯಿಗಳಿಗೆ ಪರವಾನಗಿ ಒದಗಿಸಲು ಕಬ್ಬನ್ ಉದ್ಯಾನದಲ್ಲಿ ವಿಶೇಷ ಅಭಿಯಾನ ನಡೆಸಲಾಯಿತು.
ಕಳೆದ ವರ್ಷ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದತ್ತು ಪಡೆದಿದ್ದ 15 ನಾಯಿಗಳಿಗೆ ಪರವಾನಗಿ ನೀಡಲಾಯಿತು. ಕಬ್ಬನ್ ಪಾರ್ಕ್ ಕ್ಯಾನಿನ್ಸ್ ಸಹಯೋಗದಲ್ಲಿ ಬಿಬಿಎಂಪಿ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ 100ಕ್ಕೂ ಅಧಿಕ ಶ್ವಾನಗಳಿಗೆ ಪರವಾನಗಿ ಒದಗಿಸಲಾಯಿತು.
ಭಾನುವಾರ ನಡೆದ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. 3ನೇ ಬಾರಿ ಈ ಅಭಿಯಾನ ನಡೆಸಲಾಗುತ್ತಿದ್ದು, 2016ರಲ್ಲಿ ಅಭಿಯಾನದಲ್ಲಿ 200, 2017ರಲ್ಲಿ 550 ನಾಯಿಗಳು ಪರವಾನಗಿ ಪಡೆದಿದ್ದವು. ಕಾರ್ಯಕ್ರಮದಲ್ಲಿ ಶ್ವಾನಗಳ ಆರೋಗ್ಯ ತಪಾಸಣೆ ನಡೆಸಲಾಯಿತು.

ಪ್ರಾಣಿಗಳ ಕ್ಷೇಮಾಭಿವೃದ್ಧಿ ಮಂಡಳಿ ಆದೇಶದಂತೆ ಪರವಾನಗಿ ಪಡೆಯುವುದು ಕಡ್ಡಾಯ, ದೆಹಲಿ, ಹೈದರಾಬಾದ್, ಚೆನ್ನೈ ನಗರಗಳಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದೆ. ಇತ್ತೀಚೆಗೆ ಹೈದರಾಬಾದ್ ನಲ್ಲಿ ಪರವಾನಗಿ ಪಡೆಯದ ನಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂಥದ್ದೇ ಕಾನೂನು ಬೆಂಗಳೂರಿಗರಿಗೂ ಅನ್ವಯಿಸುವುದರಿಂದ ನಿಯಮಗಳನ್ನು ಪಾಲಿಸುವಂತೆ ಸಿಪಿಸಿ ಮನವಿ ಮಾಡಿದೆ.












Click it and Unblock the Notifications