ವಾಯುಪಡೆ ವಿಮಾನಗಳ ಮೇಲೆ ಏರ್‌ಪೋರ್ಟ್‌ ರಾಡಾರ್ ಕಣ್ಗಾವಲು

ಬೆಂಗಳೂರು, ಡಿಸೆಂಬರ್ 18: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ವಾಯುಪಡೆ ವಿಮಾನಗಳ ಮೇಲೆ ರಾಡಾರ್ ಕಣ್ಗಾವಲಿರಿಸಲಿದೆ.

ಈ ಕುರಿತಂತೆ ಅದು ಕೆಐಎಬಿ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದಾಗಿ ಇನ್ನುಮುಂದೆ ಯಲಹಂಕದಲ್ಲಿರುವ ಭಾರತೀಯ ವಾಯುಪಡೆ ರಾಡಾರ್‌ಗಳ ಜೊತೆಗೆ ಕೆಂಪೇಗೌಡ ವಿಮಾನ ನಿಲ್ದಾಣ ಮೂಲಕವೂ ವಾಯುಪಡೆ ವಿಮಾನಗಳ ಸಂಚಾರದ ಮೇಲೆ ನಿಗಾ ಇಡಲಾಗುವುದು.

ಯಲಹಂಕ ವಾಯುನೆಲೆಯಲ್ಲಿ ತರಬೇತಿ ವಿಮಾನಗಳು ಹಾರಾಡುತ್ತಿರುವಾಗ , ಏರ್‌ಪೋರ್ಟ್‌ಗೆ ನಾಗರಿಕ ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ಎರಡಕ್ಕೂ ಪ್ರತ್ಯೇಕ ರಾಡಾರ್‌ಗಳಿದ್ದರೂ, ಎರಡೂ ರಾಡಾರ್‌ಗಳ ನಡುವೆ ಸಂಯೋಜನೆ ಇಲ್ಲದಿರುವುದರಿಂದ ಏಕ ಕಾಲಕ್ಕೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ.

KIA To Integrate Military And Civil Radars

ಎರಡೂ ರೆಡಾರ್‌ಗಳನ್ನು ಸಂಯೋಜಿಸುವುದರಿಂದ ಉಭಯ ಇಲ್ದಾಣಗಳಿಂದ ಹಾರಾಡುವ ಮಾಹಿತಿ ಎರಡೂ ಕಡೆ ಸಿಗಲಿದ್ದು, ಸುಗಮ ಕಾರ್ಯಾಚರಣೆ ಸಾಧ್ಯವಾಗಲಿದೆ.

ಮಿಲಿಟರಿ ಮತ್ತು ನಾಗರಿಕ ವಿಮಾನ ಸೇವೆಯನ್ನು ಹೀಗೆ ಸಂಯೋಜನೆಗೊಳಿಸಿ ಬಳಸುತ್ತಿರುವುದು ಭಾರತದಲ್ಲಿ ಇದೇ ಮೊದಲು. ಯಲಹಂಕ ವಾಯುನೆಲೆ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಪರಸ್ಪರ ಸಮೀಪದಲ್ಲೇ ಇರುವ ಕಾರಣ, ವಿಮಾನಗಳ ಸಂಚಾರದ ಮೇಲೆ ಅತ್ಯಂತ ಕರಾರುವಾಕ್ ನಿಯಂತ್ರಣ ಹೊಂದಿರುವುದು ಅಗತ್ಯವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+