ಕೆಂಪೇಗೌಡ ಏರ್‌ಪೋರ್ಟ್ ನಿರ್ಮಿಸಿದ ಹೊಸ ದಾಖಲೆ ಏನು?
ಬೆಂಗಳೂರು, ಜನವರಿ 9: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ದಾಖಲೆ ನಿರ್ಮಿಸಿದೆ. ಒಂದೇ ದಿನದಲ್ಲಿ ವಿಮಾನಗಳಲ್ಲಿ 1,02,906 ಮಂದಿ ಪ್ರಯಾಣಿಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ವಿಮಾನ ನಿಲ್ದಾಣ ಆರಂಭಗೊಂಡು 11 ವರ್ಷಗಳು ಕಳೆದಿದ್ದು ಮೊದಲ ಬಾರಿಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಒಂದೇ ದಿನ ಪ್ರಯಾಣ ಮಾಡಿದ್ದಾರೆ.
2018ರ ಜೂನ್ 30ರಂದು ಒಂದೇ ದಿನದಲ್ಲಿ 98,869 ಪ್ರಯಾಣಿಕರು ಹಾರಾಟ ನಡೆಸಿದ್ದು ದಾಖಲೆಯಾಗಿತ್ತು.ಬಹೊಸ ವರ್ಷದಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರ್ಗದಲ್ಲಿ ಹೊಸ ವಿಮಾನಗಳ ಹಾರಾಟ ಪ್ರಾರಂಭಿಸಲಾಗಿದೆ. ದೇಶದ ಐಟಿ ಹಬ್ ಆಗಿರುವ ಕಾರಣ ಕೋಲ್ಕತ್ತ, ಹೈದ್ರಾಬಾದ್, ಅಮೃತ್‌ಸರ್ ಮುಂತಾದ ನಗರಗಳಿಂದ ಯುರೋಪ್ ಸೇರಿದಂತೆ ಇನ್ನಿತರೆ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳನ್ನು ಕೆಐಎ ಮಾರ್ಗವಾಗಿ ಕಳುಹಿಸಲಾಗುತ್ತದೆ.

ಪ್ರಯಾಣಿಕರ ನಿರ್ವಹಣೆಯಲ್ಲಿ ದೇಶದ ಮೂರನೇ ಅತಿ ದೊಡ್ಡ ನಿಲ್ದಾಣವಾಗಿರುವ ಕೆಐಎ ಇದೀಗ ನವದೆಹಲಿ, ಮುಂಬೈ ನಿಲ್ದಾಣಗಳ ಸಾಲಿಗೆ ಸೇರಿದೆ. ದೆಹಲಿ ಮತ್ತು ಮುಂಐ ವಿಮಾನ ನಿಲ್ದಾಣಗಳು ಮಾತ್ರ ಪ್ರತಿನಿತ್ಯ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಣೆ ಮಾಡುತ್ತದೆ.
ಚೆನ್ನೈ ವಿಮಾನ ನಿಲ್ದಾಣ ಮೂಲಸೌಕರ್ಯಗಳ ಸಮಸ್ಯೆ ಎದುರಿಸುತ್ತಿದ್ದು, ನಿರ್ವಹಣೆ ಸಾಮರ್ಥ್ಯ ವನ್ನು ಮೀರಿದೆ. ಮತ್ತೊಂದೆಡೆ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಕೆಐಎ ಒದಗಿಸುತ್ತಿದೆ.












Click it and Unblock the Notifications