ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹ್ಯಾಂಡ್ ಲಗೇಜ್ ಇರುವವರಿಗೆ ಎಕ್ಸ್‌ಪ್ರೆಸ್‌ ಲೇನ್

ಬೆಂಗಳೂರು, ಏ.17: ನಗರದ ಪ್ರತಿಷ್ಠಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹ್ಯಾಂಡ್ ಲಗೇಜ್ ಇರುವವರಿಗೆ ಎಕ್ಸ್‌ಪ್ರೆಸ್ ಲೇನ್ ವ್ಯವಸ್ಥೆಯನ್ನು ಮಾಡಲಾಗಿದೆ.

ಪ್ರಿಂಟೆಡ್ ಬೋರ್ಡಿಂಗ್ ಪಾಸ್‌ನೊಂದಿಗೆ ಕೇವಲ ಹ್ಯಾಂಡ್ ಬ್ಯಾಗೇಜ್ ಹೊಂದಿರುವವರು ಪ್ರವೇಶ ದ್ವಾರದ 5ರ ಮೂಲಕ ಶೀಘ್ರದಲ್ಲೇ ನಿಲ್ದಾಣದೊಳಗೆ ಪ್ರವೇಶ ಪಡೆಯಲಿದ್ದಾರೆ.

ಪ್ರತಿನಿತ್ಯ ಸರಾಸರಿ 55 ಸಾವಿರ ಜನ ಪ್ರಯಾಣಿಸುವ ಕೆಐಎನಲ್ಲಿ ಹ್ಯಾಂಡ್ ಲಗೇಜ್‌ನೊಂದಿಗೆ ಪ್ರಯಾಣ ಮಾಡುವವರ ಪ್ರಮಾನ ಶೇ.23ರಷ್ಟಿದೆ. ಇದು ಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ.

KIa passengers got express baggage lane

ಈ ಕಾರಣದಿಂದ ಪ್ರಯಾಣಿಕರು ಅನಗತ್ಯವಾಗಿ ತಪಾಸಣೆ ಸಾಲಿನಲ್ಲಿ ನಿಲ್ಲುವ ಪ್ರಮೇಯವನ್ನು ನೂತನ ಗೇಟ್ ತಪ್ಪಿಸಲಿದೆ. ಹೊಸ ಗೇಟ್ ಆರಂಭದಿಂದ ಶೀಘ್ರದಲ್ಲೇ ಭದ್ರತಾ ತಪಾಸಣೆ ಮುಗಿಯುವ ಕಾರಣ ಸರತಿ ಸಾಲು ಕಡಿತಗೊಳ್ಳಲಿದ್ದು, ನಿಲ್ದಾಣದ ಒಟ್ಟಾರೆ ಕ್ಷಮತೆಯಲ್ಲಿ ಸುಧಾರಣೆ ಕಾಣಲಿದೆ.

ಟ್ರಾಲಿಯೊಂದಿಗೆ ಮತ್ತು ವ್ಹೀಲ್‌ಚೇರ್‌ನಲ್ಲಿ ಬರುವ ಪ್ರಯಾಣಿಕರಿಗೆ ಈ ಪ್ರವೇಶ ದ್ವಾರದ ಮೂಲಕ ಪ್ರವೇಶವಿರುವುದಿಲ್ಲ ಎಂದು ಕೆಐಎ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಲಗೇಜ್ ಹೊಂದಿರುವವರ ಜೊತೆ ಹ್ಯಾಂಡ್ ಬ್ಯಾಗ್ ಹೊಂದಿರುವವರು ಸರತಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+