ಬಿಜೆಪಿಗೆ ರಾಜಕೀಯ ಸಂಸ್ಕೃತಿ ಪಾಠ ಮಾಡಿದ ಖರ್ಗೆ
Recommended Video

ಬೆಂಗಳೂರು, ಸೆಪ್ಟೆಂಬರ್ 22: ಬಿಜೆಪಿಯವರು ಕೇಂದ್ರದಲ್ಲಿ ತಮ್ಮ ಅಧಿಕಾರವಿದೆ ಎಂದು ರಾಜ್ಯದ ಜನರನ್ನು ಹೆದರಿಸುತ್ತಿದ್ದಾರೆ, ಇದು ಬಿಜೆಪಿಯ ಡಿಕ್ಟೇಟರ್ ಶಿಪ್ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 47 ವರ್ಷಗಳಿಂದ ನೋಡುತ್ತಲೇ ಬಂದಿದ್ದೇನೆ, ಎಲ್ಲರಿಗೂ ಒಂದೊಂದು ಸ್ಥಾನವನ್ನು ಪಕ್ಷ ನೀಡಲಿದೆ, ಯಾರಿಗೆ ಯಾವ ಸ್ಥಾನ ನೀಡಬೇಕು, ಕಾರ್ಯಕರ್ತರಿಗೆ ಯಾವ ಸ್ಥಾನಮಾನ ನೀಡಬೇಕು ಎನ್ನುವುದು ಸರ್ಕಾರಕ್ಕೆ ಗೊತ್ತಿದೆ.
ಆದರೆ ಪಕ್ಷದಲ್ಲಿ ಒಡಕು ಮೂಡಿಸುವುದು ಭಿನ್ನಾಭಿಪ್ರಾಯ ಉಂಟುಮಾಡುವುದು ಬಿಜೆಪಿಯ ಕೆಲಸ ಬಿಜೆಪಿಯು ರಾಜಕೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು. ಹಿಂದೆ ಕೂಡ ಗೋವಾದಲ್ಲಿಟ್ಟು ಸರ್ಕಾರ ರಚಿಸಿದ್ದರು. ಇದೀಗ ಮೆಜಾರಿಟಿ ಸರ್ಕಾರ ಅಧಿಕಾರದಲ್ಲಿದೆ ಅದನ್ನು ಅಸ್ಥಿರಗೊಳಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಸಿಎಂ ದಂಗೆ ಹೇಳಿಕೆಗೆ ಈಗಾಗಲೇ ಕ್ಲಾರಿಫಿಕೇಷನ್ ನೀಡಿದ್ದಾರೆ, ನಾನು ಆ ಭಾವನೆಯಲ್ಲಿ ಹೇಳಿಲ್ಲ ಎಂದು ಸಿಎಂ ಅವರೇ ಹೇಳಿದ್ದಾರೆ ಆದರೂ ರಾಜ್ಯಪಾಲರಿಗೆ ದೂರು ಕೊಡ್ತಾರೆ, ಕೇಂದ್ರಕ್ಕೂ ದೂರು ಕೊಡುತ್ತಾರೆ ಇದು ಅವರ ಕೆಲಸ ಕೇಂದ್ರದಲ್ಲಿ ತಮ್ಮ ಸರ್ಕಾರವಿದ್ದರೆ ಏನು ಬೇಕಾದರೂ ಮಾಡಬಹುದು ಎಂದು ಕೊಂಡಿದ್ದಾರೆ ಬಿಜೆಪಿಯವರು ಎಂದು ಕಿಡಿಕಾರಿದರು.












Click it and Unblock the Notifications