ನಿಮ್ಮ ಮನೆ ಸೇಫ್ ಆಗಿರಬೇಕಾ: ಈ ಸಿಂಪಲ್ ಟಿಪ್ಸ್ ಅನುಸರಿಸಿ ಸಾಕು
ನೀವು ಮನೆಯಲ್ಲಿ ಇಲ್ಲದೆ ಇದ್ದಾಗ, ಇಲ್ಲವೇ ಪ್ರವಾಸ ಮಾಡುವಾಗ ಕಳ್ಳತನ ಆಗುವ ಅಪಾಯಗಳು ಇರುತ್ತವೆ. ಪ್ರವಾಸಿ ಮಾಡಿ ವಾಪಸ್ ಬಂದು ನೋಡಿದರೆ, ಮನೆಯಲ್ಲಿದ್ದ ಕಾಸು ಹಾಗೂ ಚಿನ್ನಾಭರಣ ಕಳುವಾಗಿರುವುದು ನೋಡಿ ಮನೆಯವರು ಆಘಾತಕ್ಕೆ ಒಳಗಾಗ್ತಾರೆ. ಇನ್ನು ಮನೆಗಳಲ್ಲಿ ಕಳ್ಳತನ ಆಗಬಾರದು ನೀವು ಸೇಫ್ ಆಗಿರಬೇಕು ಅಂದರೆ, ಇಲ್ಲೊಂದಷ್ಟು ಸರಳ ಸೂತ್ರಗಳಿವೆ ಇದನ್ನು ಅನುಸರಿಸಿದರೆ ಸಾಕು ನಾವು ನಿಮ್ಮ ಮನೆಯಲ್ಲಿನ ದುಬಾರಿ ವಸ್ತುಗಳನ್ನು ಸೇಫ್ ಆಗಿ ಇಟ್ಟುಕೊಳ್ಳಬಹುದು ಅದೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಲ್ಲಿ ಇತ್ತೀಚಿನ ದಿನಗಳಲ್ಲಿ ಮನೆಗಳ್ಳತನ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ನೀವು ಈ ಸಿಂಪಲ್ ಟಿಪ್ಸ್‌ಗಳನ್ನು ಅನುಸರಿಸಿ. ಅಪರೂಪಕ್ಕೆಂದು ಪ್ರವಾಸಕ್ಕೆ ಹೋಗಿ ಬಂದು ನೋಡುವುದರ ಒಳಗೆ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳು ಕಳ್ಳತನ ಆಗುವುದಿದೆ. ಯಾಕಾದರೂ ಹೊರಗೆ ಹೋದ್ವೋ ಎನ್ನುವಂತ ಪರಿಸ್ಥಿತಿ ಬರಬಾರದು ಎಂದಿದ್ದರೆ. ನೀವು ಈ ಸರಳ ಸೂತ್ರಗಳನ್ನು ಅನುಸರಿಸಿ.

ಚಿತ್ರಗಳನ್ನು ಆಗಲೇ ಅಪ್ಲೋಡ್ ಮಾಡ್ಬೇಡಿ: ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದ ಮೇಲೆ ಸೋಷಿಯಲ್ ಮೀಡಿಯಾದಿಂದಲೂ ಕಳ್ಳರು ಟಿಪ್ಸ್ ತಗೋತಾರೆ. ನೀವು ಎಲ್ಲಿಯಾದರೂ ಪ್ರವಾಸ ಹೋಗುವುದಿದ್ದರೆ ಪ್ರವಾಸ ಹೋಗುವುದಕ್ಕಿಂತ ಮುಂಚೆ ಅಪ್ಪಿತಪ್ಪಿಯೂ ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ಬೇಡಿ. ಅಲ್ಲದೇ ನೀವು ಪ್ರವಾಸದಲ್ಲಿ ಇರುವಾಗಲೂ ಆ ಪೋಟೋಗಳನ್ನು ಅಥವಾ ವಿವರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ.
ಇದರಿಂದ ನೀವು ಪ್ರವಾಸದಲ್ಲಿ ಇದ್ದೀರಿ ಎನ್ನುವುದು ಸುಲಭವಾಗಿ ಕಳ್ಳರಿಗೆ ತಿಳಿಯಲಿದೆ. ಅದೇ ದಿನ ಸೋಷಿಯಲ್ ಮೀಡಿಯಾದಲ್ಲಿ ಪೋಟೋಗಳನ್ನು ಅಪ್ಲೋಡ್ ಮಾಡಲೇಬೇಡಿ. ನೀವು ಅಂದೇ ಪೋಟೋ ಹಾಕುವುದರಿಂದ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲ ಎನ್ನುವ ಮಾಹಿತಿ ತಿಳಿಯಲಿದೆ.
* ಮನೆಯಲ್ಲಿ ಆಭರಣ ಬೇಡ: ಮನೆಯಲ್ಲಿ ಚಿನ್ನದ ಆಭರಣಗಳನ್ನು ಇರಿಸಿಕೊಳ್ಳುವುದು ಯವಾಗಲೂ ಸವಾಲೇ. ಅಗತ್ಯ ಅಥವಾ ನಿತ್ಯವೂ ಬಳಸುವ ಚಿನ್ನಾಭರಣಗಳನ್ನು ಹೊರತುಪಡಿಸಿ, ಇನ್ನುಳಿದ ಚಿನ್ನಾಭರಣ ಹಾಗೂ ಹಣವನ್ನು ಬ್ಯಾಂಕ್‌ಗಳಲ್ಲಿ. ಇಲ್ಲವೇ ಬ್ಯಾಂಕ್ ಲಾಕರ್‌ನಲ್ಲಿ ಇರಿಸಿ. ಇದರಿಂದ ನಿಮ್ಮ ಅಮೂಲ್ಯ ಆಭರಣ ಕಳುವಾಗುವುದು ತಪ್ಪುತ್ತದೆ.
ಸಿಸಿಟಿವಿ ಕ್ಯಾಮೆರಾ ಇರಲಿ: ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಿ. ಇಲ್ಲವೇ ಎರಡು ಮೂರು ಮನೆಗಾದರೂ ಒಂದು ಸಿಸಿಟಿವಿ ಕ್ಯಾಮೆರಾ ಇರಲಿ. ಈ ರೀತಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಮೊಬೈಲ್ ಪೋನ್‌ನಲ್ಲಿ ನೋಡುವಂತಹ ಸೆಟ್ಟಿಂಗ್ ಮಾಡಿಕೊಳ್ಳಿ. ಇದರಿಂದ ನೀವು ಹೊರಗೆ ಹೋದಾಗಲೂ ನಿಮ್ಮ ಮನೆಯಲ್ಲಿ ಏನಾಗುತ್ತಿದೆ ಅಂತ ತಿಳಿಯಲಿದೆ.
* ಇಂಟರ್‌ಲಾಕ್‌ಗಳನ್ನು ಬಳಸಿ: ಸಾಧ್ಯವಾದಷ್ಟು ಮನೆಗಳ ಲಾಕ್‌ಗಳು ಇಂಟರ್‌ಲಾಕ್ ಸಿಸ್ಟಂನಲ್ಲಿ ಇರಲಿ. ಇಂಟರ್‌ಲಾಕ್ ಎಂದರೆ ಮನೆಗಳಿಗೆ ಬೀಗದ ಬದಲು, ಬಾಗಿಲಿನಲ್ಲಿ ಇರುವ ಲಾಕ್. ಇದರಿಂದ ಮನೆಯಲ್ಲಿ ಯಾರು ಇಲ್ಲ ಎನ್ನುವುದು ಕಳ್ಳರಿಗೆ ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಅದೇ ಬೀಗ ಹಾಕಿದ್ದರೆ, ಮನೆಯಲ್ಲಿ ಯಾರು ಇಲ್ಲ ಎನ್ನುವುದು ನೋಡಿದರೆ ತಿಳಿಯುತ್ತದೆ.
ಅಲರಾಮ್ ಸಿಸ್ಟಂ ಇರಲಿ: ಇತ್ತೀಚಿನ ದಿನಗಳಲ್ಲಿ ಹೊಸ ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸಿರುವ Burglar Alarm ಗಳನ್ನು ಮನೆಗಳಿಗೆ ಅಳವಡಿಸಿಕೊಂಡು ಮೊಬೈಲ್‌ಗಳಿಗೆ ಅಲರ್ಟ್ ಸಂದೇಶ ಬರುವಂತಹ ಸುರಕ್ಷಿತ ಕ್ರಮಗಳನ್ನು ಸಹ ನೀವು ಅನುಸರಿಸಬಹುದು. ಇದು ಕಡಿಮೆ ಬೆಲೆಯಿಂದಲೂ ಪ್ರಾರಂಭವಾಗುತ್ತದೆ. ಈ ಸಿಸ್ಟಂಗಳನ್ನು ನೀವು ನಿಮ್ಮ ಬೈಕ್ ಹಾಗೂ ಕಾರುಗಳಿಗೂ ಬಳಸಬಹುದಾಗಿದೆ.
ಲೈಟ್ ಆನ್ ಇರಲಿ: ಬಹುತೇಕರು ಮನೆಯಿಂದ ಹೊರಗೆ ಹೋಗುವಾಗ ಮಾಡುವ ತಪ್ಪು ಇದು. ನೀವು ಮನೆಯಲ್ಲಿ ಇಲ್ಲದಿದ್ದರೆ ಅಥವಾ ಮನೆಯವರೆಲ್ಲ ಸೇರಿ ಎಲ್ಲಿಯಾದರೂ ಹೊರಗೆ ಹೋಗುವುದಿದ್ದರೂ ಲೈಟ್ ಆನ್ ಮಾಡಿರಿ. ಈ ರೀತಿ ಲೈಟ್ ಆನ್ ಎಲ್ಲ ಸಮಯದಲ್ಲೂ ಇರಲಿ. ಒಂದೊಮ್ಮೆ ನಿಮ್ಮ ಮನೆಯಲ್ಲಿ ಇಂಟರ್‌ಲಾಕ್ ಅಳವಡಿಸಿದ್ದರೂ ಸಹ ಮನೆಯಿಂದ ಹೊರಗಿರುವಾಗ ಮನೆಯ ಮುಂದೆ 24 ಗಂಟೆಯೂ ಲೈಟ್ ಆನ್ ಆಗಿಯೇ ಇರಲಿ. ಇದರಿಂದ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲ ಎನ್ನುವುದು ಸಾಮಾನ್ಯವಾಗಿ ತಿಳಿಯಲ್ಲ.












Click it and Unblock the Notifications