Bengaluru Property: ಬೆಂಗಳೂರಲ್ಲಿ ಮನೆ, ಜಾಗ & ಆಸ್ತಿ ಖರೀದಿ ಮಾಡುವಾಗ ಈ 6 ಅಂಶ ತಪ್ಪದೇ ಗಮನಿಸಿ
ಬೆಂಗಳೂರಿನ ಯಾವುದೇ ಭಾಗದಲ್ಲಾದರೂ ಆಸ್ತಿ ಖರೀದಿ ಅಥವಾ ಜಾಗ ತೆಗೆದುಕೊಳ್ಳಬೇಕೆಂದರೆ ನೀವು ತಪ್ಪದೆ ಈ ವಿಷಯಗಳನ್ನು ಗಮನಿಸಿ. ಆಸ್ತಿ, ಮನೆ ಖರೀದಿ ಮಾಡಬೇಕು ಎನ್ನುವುದು ಹಲವರ ಕನಸು. ಆದರೆ, ಹಲವು ವರ್ಷಗಳಿಂದ ಕೂಡಿಟ್ಟ ಕನಸು ಸಹಕಾರ ಆಗುವ ಹಂತದಲ್ಲೇ ಕೆಲವೊಮ್ಮೆ ಎಡವಟ್ಟುಗಳು ಆಗುವುದು ಇದೆ. ಇದರಿಂದ ಜನ ಅವರ ಕೂಡಿಟ್ಟ ಕೋಟ್ಯಾಂತರ ರೂಪಾಯಿಯನ್ನು ಕಳೆದುಕೊಳ್ಳುವುದು ಇದೆ. ಈ ತಪ್ಪುಗಳನ್ನು ನೀವು ಮಾಡಬೇಡಿ. ಆಸ್ತಿ ಅಥವಾ ಮನೆ ಖರೀದಿ ಮಾಡುವಾಗ ಈ ಅಂಶಗಳನ್ನು ತಪ್ಪದೇ ಪಾಲಿಸಿ. ಆಸ್ತಿ ಮಾಡುವಾಗ ಯಾವೆಲ್ಲ ವಿಷಯಗಳನ್ನು ಗಮನಿಸಬೇಕು ಹಾಗೂ ಯಾವ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನಲ್ಲಿ ಆಸ್ತಿ ಮಾಡುವಾಗ ನೀವು ಸ್ವಲ್ಪ ಎಡವಿದರೂ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುವುದು ಕಟ್ಟಿಟ್ಟ ಬುತ್ತಿ. ಹೀಗಾಗಿ, ಬೆಂಗಳೂರಿನಲ್ಲಿ ಅಥವಾ ಯಾವುದೇ ಭಾಗದಲ್ಲಿ ಆಸ್ತಿ ಖರೀದಿ ಅಥವಾ ಮನೆ ತೆಗೆದುಕೊಳ್ಳುವ ಮುಂಚೆ ಈ ವಿಷಯಗಳನ್ನು ತಪ್ಪದೆ ಪಾಲಿಸಿ. ಆಸ್ತಿ ಮಾಡುವಾಗ ನೀವು ಮೊದಲು ಮಾಡಬೇಕಾದ ಕೆಲಸ ಎಂದರೆ, ಆಸ್ತಿ ಖರೀದಿ ಮಾಡುವಾಗ ಯಾವುದೇ ಕಾರಣಕ್ಕೂ ಅವಸರಪಡೆಬೇಡಿ. ಸಮಯ ತೆಗೆದುಕೊಂಡು ನಿರ್ಧಾರ ಮಾಡಿ. ಆಸ್ತಿ ಖರೀದಿ ಮಾಡುವಾಗ ಬುದ್ಧಿವಂತಿಕೆ ಹಾಗೂ ತಾಳ್ಮೆ ಅತ್ಯಂತ ಮುಖ್ಯವಾಗಿದೆ. ಈ ವಿಷಯಗಳನ್ನು ಮರೆಯಬೇಡಿ. ಈ ರೀತಿಯ ಹಲವು ಪ್ರಮುಖ ವಿಷಯಗಳನ್ನು ರೂಪಾಯಿ ರಾಜ ಎನ್ನುವ ಖಾತೆಯಿಂದ ಎಕ್ಸ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ದಾಖಲೆಗಳ ಪರಿಶೀಲನೆ
ಆಸ್ತಿ ಖರೀದಿ ಮಾಡುವ ತಪ್ಪದೇ ಲಾಯರ್ ಭೇಟಿ ಮಾಡಿ, ಆಸ್ತಿ ಖರೀದಿ ಪ್ರಕ್ರಿಯೆಯಲ್ಲಿ ಲಾಯರ್ ನಿಮ್ಮೊಂದಿಗೆ ಇರಲಿ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ತಪ್ಪದೇ ಪರಿಶೀಲನೆ ಮಾಡಿ, ಆಸ್ತಿ ದಾಖಲೆಗಳಲ್ಲಿ ಯಾವುದೇ ಲೋಪ ಇಲ್ಲ ಎನ್ನುವುದನ್ನು ನೋಡಿಕೊಳ್ಳಿ.
ಬೇರೆ ಬೇರೆ ಸಮಯದಲ್ಲಿ ಪರಿಶೀಲನೆ ಮಾಡಿ
ಆಸ್ತಿ ಅಥವಾ ಮನೆ ಖರೀದಿ ಮಾಡುವ ಸಂದರ್ಭದಲ್ಲಿ ನೀವು ಖರೀದಿ ಮಾಡಬೇಕು ಅಂತ ಅಂದುಕೊಂಡಿರುವ ಜಾಗಕ್ಕೆ ಬೇರೆ ಬೇರೆ ಸಮಯದಲ್ಲಿ ಭೇಟಿ ನೀಡಿ ಅಂದರೆ, ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಭೇಟಿ ನೀಡಿ. ಇದರಿಂದ ನೀವು ಆಸ್ತಿ ಖರೀದಿ ಮಾಡಬೇಕು ಎಂದುಕೊಂಡಿರುವ ಜಾಗದಲ್ಲಿ ಬೆಳಕು ಹಾಗೂ ಶಬ್ದ ಬೇರೆ ಬೇರೆ ಸಂದರ್ಭದಲ್ಲಿ ಯಾವ ರೀತಿ ಇರುತ್ತದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಲ್ಲದೆ ಮನೆ ಅಥವಾ ಆಸ್ತಿ ಖರೀದಿ ಮಾಡಬೇಕು ಎಂದುಕೊಂಡಿರುವ ಪ್ರದೇಶ ಯಾವ ರೀತಿ ಇದೆ ಅಂತಲೂ ಗೊತ್ತಾಗುತ್ತೆ.
ಎರಡನೇ ಅಭಿಪ್ರಾಯ ಇರಲಿ
ಇನ್ನು ನೀವೊಬ್ಬರೇ ನೋಡಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಿಮ್ಮ ಸ್ನೇಹಿತರು, ವಿಶ್ವಾಸಿಗಳು ಇಲ್ಲವೇ ಒಳ್ಳೆಯ ಐಡಿಯಾ ಇರುವವರಿಗೆ ಒಮ್ಮೆ ನಿಮ್ಮ ಜಾಗ ಅಥವಾ ಖರೀದಿಸಬೇಕು ಎಂದುಕೊಂಡಿರುವ ಮನೆಯ ಜಾಗವನ್ನು ತೋರಿಸಿ.
ಅಧಿಕೃತ ಜಾಗ ಮಾತ್ರ ಖರೀದಿ ಮಾಡಿ
ಬಿಡಿಎ, ಕೆಎಚ್‌ಬಿ, ಬಿಐಎಪಿಪಿಎ ಅಥವಾ ಟಿಎಂಸಿ ಅಥವಾ ಬಿಎಂಆರ್‌ಡಿಎನಿಂದ ಅನುಮೋದಿತವಾಗಿರು ಲೇಔಟ್‌ಗಳಲ್ಲಿ ಮಾತ್ರ ಜಾಗ ಖರೀದಿ ಮಾಡಿ. ಬಿ ಖಾತಾ ಪ್ಲಾಟ್‌ಗಳು ಅಥವಾ ಹಸಿರು ಪಟ್ಟಿಯಲ್ಲಿರುವ ಪ್ರದೇಶಗಳಲ್ಲಿ ತಪ್ಪಿಸಿ. ಇದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಹುದು.
ಅಗತ್ಯ ಸೌಲಭ್ಯ
ಮನೆ ಖರೀದಿ ಮಾಡುವ ಜಾಗದಲ್ಲಿ ಸಮೀಪದಲ್ಲೇ ಆಸ್ಪತ್ರೆ, ಸ್ಕೂಲ್, ಮಾರುಕಟ್ಟೆ ಹಾಗೂ ಸಮೂಹ ಸಾರಿಗೆ ವ್ಯವಸ್ಥೆ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಆದರೆ, ಶಾಂತ ವಾತಾವರಣವೂ ಇರುವಂತೆ ನೋಡಿಕೊಳ್ಳಿ. ಇದರೊಂದಿಗೆ ಗಾಡಿಗಳು ಸರಾಗವಾಗಿ ಹೋಗುವ ರಸ್ತೆ, ಪಾರ್ಕಿಂಗ್ ವ್ಯವಸ್ಥೆಗಳನ್ನು ಸಹ ಗಮನಿಸಿ. ನೀರು ಸರಬರಾಜು, ಅಂರ್ಜಲ ಮಟ್ಟ ಹಾಗೂ ಸುತ್ತಮುತ್ತಲಿನ ಜನ ಯಾವ ರೀತಿ ಇದ್ದಾರೆ ಎನ್ನುವ ಅಂಶಗಳನ್ನು ಗಮನಿಸಿ.
ಮುಂದುವರಿದು ಸೆಟ್‌ಬ್ಯಾಕ್ ಜಾಗ ಹಾಗೂ ತಗ್ಗು ಪ್ರದೇಶದಲ್ಲಿ ಇದೆಯೇ ಅಥವಾ ಸಮೀಪದಲ್ಲಿ ರಾಜಕಾಲುವೆ ಇದೆಯೇ ಎನ್ನುವ ಅಂಶಗಳನ್ನೂ ಸಹ ಪರಿಶೀಲನೆ ಮಾಡಿ. ತಿರುವು ಹೊಂದಿರುವ ರಸ್ತೆಗಳಲ್ಲಿ ಜಾಗ ಖರೀದಿ ಮಾಡುವುದನ್ನು ಸಾಧ್ಯವಾದಷ್ಟು ತಡೆಯಿರಿ.












Click it and Unblock the Notifications