• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಹ್! ಎನಿಸಿ ಅದ್ಭುತ ಅನುಭವ ಕಟ್ಟಿಕೊಟ್ಟ ರಾಜಭವನದ ಸುತ್ತಾಟ

|

ಬೆಂಗಳೂರಿನಲ್ಲಿರುವ ರಾಜಭವನದ ಒಳಗೆ ನೋಡಿದ್ದೀರಾ? ಟೀವಿ ಚಾನಲ್ ಗಳಲ್ಲಿ ನೋಡಿರಬಹುದು. ಪ್ರಮಾಣ ವಚನ ಸ್ವೀಕಾರ ಸಮಾರಂಭ ಸೇರಿದ ಹಾಗೆ ಆಯ್ದ ಕೆಲವೇ ಕಾರ್ಯಕ್ರಮದಲ್ಲಿ ಅಲ್ಲಿನ ಬ್ಯಾಂಕ್ವೆಟ್ ಹಾಲ್ ಅಥವಾ ಗಾಜಿನ ಮನೆಯನ್ನು ನೋಡಿರಬಹುದು. ಆದರೆ ಈಗ ನೀವೇ ಈ ಅದ್ಭುತವಾದ ಸ್ಥಳವನ್ನು ನೋಡಿ, ಕುತೂಹಲದ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.

ವಿ.ಎಸ್.ರಮಾದೇವಿ ರಾಜ್ಯಪಾಲರಾಗಿದ್ದಾಗ, ಹದಿನಾರು ವರ್ಷಗಳ ನಂತರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಗಾಜಿನ ಮನೆ, ಗುಲಾಬಿ ತೋಟ ಸೇರಿದಂತೆ ಕೆಲವು ಮುಖ್ಯ ಸ್ಥಳಗಳನ್ನು ನೋಡಬಹುದು. ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರುವ ರಾಜಭವನ, ಸೆಪ್ಟೆಂಬರ್ ಆರನೇ ತಾರೀಕಿನವರೆಗೆ ನೋಡಲು ಸಿಗುತ್ತದೆ. ಆ ನಂತರ ಹೇಗೋ- ಇನ್ಯಾವಾಗಲೋ ಗೊತ್ತಿಲ್ಲ.

ರಾಜಭವನ ನೋಡಲೊಂದು ಜನಸಾಮಾನ್ಯರಿಗೆ ಸುವರ್ಣಾವಕಾಶ

ಇಂಥ ಸನ್ನಿವೇಶದಲ್ಲಿ ರಾಜಭವನಕ್ಕೆ ಹೋಗಿಬಂದ ಅನುಭವ ಹೇಗಿರುತ್ತದೆ ಎಂಬುದನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ ಇದು. ವಾರಾಂತ್ಯಗಳಲ್ಲಿ ಸ್ವಲ್ಪ ಹೆಚ್ಚಿಗೇ ಜನರಿರಬಹುದು. ಆದರೆ ಉಳಿದ ದಿನಗಳಲ್ಲಿ ತೀರಾ ಗಾಬರಿ ಆಗುವಷ್ಟು ಸಂಖ್ಯೆ ಹೆಚ್ಚಿರುವುದಿಲ್ಲ. ಆದರೆ ಒಮ್ಮೆ ಕಡ್ಡಾಯವಾಗಿ ನೋಡಿ ಬಂದರೆ ಸೊಗಸಾದ ಅನುಭವ ನಿಮ್ಮ ಪಾಲಿನದಾದೀತು.

ಮುಂಚಿತವಾಗಿ ಆನ್ ಲೈನ್ ನಲ್ಲಿ ನೋಂದಣಿ

ಮುಂಚಿತವಾಗಿ ಆನ್ ಲೈನ್ ನಲ್ಲಿ ನೋಂದಣಿ

ರಾಜಭವನಕ್ಕೆ ಸಾರ್ವಜನಿಕರಿಗೆ ಪ್ರವೇಶ ಇರುವುದು ಸಂಜೆ 4ರಿಂದ ರಾತ್ರಿ 7 ಗಂಟೆ ತನಕ ಮಾತ್ರ. ಆನ್ ಲೈನ್ ನಲ್ಲಿ ಮುಂಚೆಯೇ ನೋಂದಣಿ ಮಾಡಿ, ಅಲ್ಲಿ ತಿಳಿಸಿರುವ ಯಾವುದಾದರೂ ದಾಖಲಾತಿಯನ್ನು ಜತೆಯಲ್ಲಿ ತೆಗೆದುಕೊಂಡು ಹೋಗುವುದು ಒಳ್ಳೆಯದು. ಸ್ವಂತ ವಾಹನದಲ್ಲಿ ಹೋಗುವವರಿಗೆ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ದೂರದಲ್ಲಿ- ಸುರಕ್ಷಿತವಾದ ಸ್ಥಳದಲ್ಲಿ ನಿಲ್ಲಿಸಿ, ಇಲ್ಲಿಗೆ ನಡೆದು ಬನ್ನಿ. ಮೊಬೈಲ್ ಸ್ವಿಚ್ಛ್ ಆಫ್ ಮಾಡುವುದು ಕಡ್ಡಾಯ. ರಾಜಭವನದ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಹೋಗಬೇಡಿ. ಹಾಗೆ ಮಾಡಬೇಡಿ ಅಂತ ಬೇಕಾದಷ್ಟು ಸಲ ಹೇಳುತ್ತಲೇ ಇರುತ್ತಾರೆ. ಮತ್ತೂ ಹಾಗೇ ಮಾಡಿ ಸಿಟ್ಟು ಬರಿಸುವುದು ಒಳ್ಳೆಯದಲ್ಲ. ಆನ್ ಲೈನ್ ನಲ್ಲಿ ನೋಂದಣಿ ಮಾಡಿದ್ದರೆ ಅದರ ಮಾಹಿತಿ ನೀಡಿ, ಫೋಟೋ ತೆಗೆಸಿಕೊಂಡು, ಅಲ್ಲಿ ನೀಡುವ ಅನುಮತಿ ಪತ್ರ ಪಡೆದು ಒಳಹೋಗಬೇಕು.

ವಾದ್ಯ ಸಂಗೀತ ಕಛೇರಿ ಮೂಲಕ ಸ್ವಾಗತ

ವಾದ್ಯ ಸಂಗೀತ ಕಛೇರಿ ಮೂಲಕ ಸ್ವಾಗತ

ಅಲ್ಲಿ ಗಾಜಿನ ಮನೆಯಲ್ಲಿ ಸೊಗಸಾದ ವಾದ್ಯ ಸಂಗೀತ ಕಛೇರಿ ಕೇಳುತ್ತದೆ. ಮೈಸೂರಿನಿಂದ ಬಂದಿರುವ ತಂಡ ಇದು. ಸಾರ್ವಜನಿಕರಿಗೆ ಪ್ರವೇಶ ನೀಡಿರುವ ಇಂಥ ವೇಳೆಯಲ್ಲಿ ಸ್ವಾಗತ ಮಾಡಲು ಹೀಗೊಂದು ವ್ಯವಸ್ಥೆ ಮಾಡಲಾಗಿದೆ. ಅಲ್ಲೇ ಕಾಫಿ, ಟೀ, ಬಾದಾಮಿ ಹಾಲು ಪೈಕಿ ಒಂದನ್ನು ಹಾಗೂ ಬಿಸ್ಕತ್ ಗಳನ್ನು ನೀಡಲಾಗುತ್ತದೆ. ಸ್ವಲ್ಪ ಸಮಯ ವಾದ್ಯ ಸಂಗೀತ ಕೇಳುವುದರೊಳಗೆ ಗೈಡ್ ವೊಬ್ಬರು ಬಂದು ಮೂವತ್ತು-ನಲವತ್ತು ಮಂದಿಯ ತಂಡವನ್ನು ಕರೆದೊಯ್ಯುತ್ತಾರೆ. ನಮ್ಮನ್ನು ಕರೆದೊಯ್ದ ಗೈಡ್ ಹೆಸರು ಭರತ್. ಪ್ರವಾಸೋದ್ಯಮ ಇಲಾಖೆಯಿಂದ ಏಳು ಮಂದಿಯನ್ನು ತಾತ್ಕಾಲಿಕ ಗೈಡ್ ಗಳನ್ನಾಗಿ ನೇಮಿಸಲಾಗಿದೆ. ಅದರಲ್ಲಿ ಐವರು ಯುವಕರು. ಇಬ್ಬರು ಯುವತಿಯರಿದ್ದಾರೆ. ರಾಜಭವನದೊಳಗೆ ಭೂದೇವಿ ದೇವಸ್ಥಾನವೊಂದಿದೆ. ಅಲ್ಲಿಂದ ಗೈಡ್ ಮಾಹಿತಿ ನೀಡುತ್ತಾ ಮುಂದೆ ಸಾಗಿದರು. ಸ್ಫುಟವಾದ ಕನ್ನಡ, ಬೇಕೆಂದವರಿಗೆ ಮತ್ತೊಮ್ಮೆ ಇಂಗ್ಲಿಷಿನಲ್ಲಿ ವಿವರಣೆ ನೀಡುತ್ತಾ ಸಾಗಿದರು. ಅಲ್ಲಿರುವ ಅಪರೂಪದ ಮರಗಳು, ಸಸ್ಯಗಳ ಬಗ್ಗೆ ವಿವರಣೆ ನೀಡಿದರು.

ತೆರೆದಿದೆ ರಾಜಭವನ, ಓ.. ಬಾ ಅತಿಥಿ!

ಹದಿನೇಳು ಎಕರೆ ವ್ಯಾಪ್ತಿಯಲ್ಲಿದೆ ರಾಜಭವನ

ಹದಿನೇಳು ಎಕರೆ ವ್ಯಾಪ್ತಿಯಲ್ಲಿದೆ ರಾಜಭವನ

ರಾಜಭವನ ಹದಿನೇಳು ಎಕರೆ ವ್ಯಾಪ್ತಿಯಲ್ಲಿದೆ. ಅದರಲ್ಲಿ ಹದಿನಾರು ಎಕರೆ ಉದ್ಯಾನ ಇದ್ದರೆ, ಒಂದು ಎಕರೆಯಷ್ಟು ವ್ಯಾಪ್ತಿಯಲ್ಲಿ ರಾಜ್ಯಪಾಲರ ಗೃಹ ಕಚೇರಿಯೂ ಸೇರಿದ ಹಾಗೆ ಇತರ ಆಡಳಿತಾತ್ಮಕ ಕಟ್ಟಡಗಳಿವೆ. ಇದರ ನಿರ್ಮಾತೃ ಲಾರ್ಡ್ ಕಬ್ಬನ್. ಮೊದಲಿಗೆ ಇದು ತೊಂಬತ್ತೆರಡು ಎಕರೆ ಇತ್ತಂತೆ. ಕ್ರಮೇಣ ಹದಿನೇಳು ಎಕರೆ ಆಗಿದೆ. 1840ರಲ್ಲಿ ನಿರ್ಮಿಸಲಾದ ಈ ಕಟ್ಟಡ ಬ್ರಿಟಿಷರ ಅಭಿರುಚಿಗೆ ತಕ್ಕಂತೆ ಕಟ್ಟಲಾಗಿದೆ. ಬೋನ್ಸಾಯ್ ಉದ್ಯಾನ, ಕಾರಂಜಿ, ಗುಲಾಬಿ ಉದ್ಯಾನ... ಇವೆಲ್ಲದರ ಜತೆಗೆ ಆಯುರ್ವೇದ ಸಸ್ಯಗಳ ಉದ್ಯಾನವು ಸಹ ಇದ್ದು, ಆ ಪೈಕಿ ಕೆಲವಷ್ಟು ಭಾಗ ಮಾತ್ರ ಸಾರ್ವಜನಿಕರಿಗೆ ತೋರಿಸಲಾಗುತ್ತಿದೆ ಎಂದು ನಮ್ಮ ಗೈಡ್ ಭರತ್ ವಿವರಣೆ ನೀಡಿದರು.

ಫೋಟೋ ತೆಗೆದು, ಮೇಲ್ ಐಡಿಗೆ ಕಳಿಸುತ್ತಾರೆ

ಫೋಟೋ ತೆಗೆದು, ಮೇಲ್ ಐಡಿಗೆ ಕಳಿಸುತ್ತಾರೆ

ಗುಲಾಬಿ ತೋಟ ನೋಡಿ ಮುಂದೆ ಸಾಗುತ್ತಿದ್ದಂತೆ ಭವ್ಯವಾದ ರಾಜಭವನ ಕಂಡಿತು. ಅಲ್ಲಿ ಕ್ಯಾಮೆರಾಮನ್ ನಿಂತಿದ್ದರು. ಹತ್ತು ಮಂದಿ ತಂಡವೊಂದರ ಫೋಟೋ ತೆಗೆದು, ಅದರ ಸಂಖ್ಯೆ ಹೇಳಿ, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಬರೆಯುವಂತೆ ತಿಳಿಸುತ್ತಾರೆ. ರಾಜಭವನಕ್ಕೆ ಭೇಟಿ ನೀಡಿದ ನೆನಪಿಗೆ ಸಾರ್ವಜನಿಕರಿಗೆ ಫೋಟೋ ತಲುಪಿಸಲು ಇಂಥದ್ದೊಂದು ವ್ಯವಸ್ಥೆ ಮಾಡಲಾಗಿದೆ. ರಾಜಭವನದ ಮೀಟಿಂಗ್ ಹಾಲ್, ಬ್ಯಾಂಕ್ವೆಟ್ ಹಾಲ್, ಗಣ್ಯರಿಗೆ ಆತಿಥ್ಯ ನೀಡುವ ಸ್ಥಳ ತೋರಿಸುತ್ತಾರೆ. ಗಣ್ಯರು ಬಂದಾಗ ಉಳಿದುಕೊಳ್ಳಲು ಇಲ್ಲಿ ಹತ್ತೊಂಬತ್ತು ಕೋಣೆಗಳಿವೆ. ಅವುಗಳಿಗೆ ಪರ್ವತ ಹಾಗೂ ನದಿಗಳ ಹೆಸರಿಡಲಾಗಿದೆ. ಅಲ್ಲಿಗೆ ಹಾಗೂ ರಾಜ್ಯಪಾಲರ ಗೃಹಕಚೇರಿಗೆ ಪ್ರವೇಶ ಇರುವುದಿಲ್ಲ. ಆದರೆ ಸದ್ಯಕ್ಕೆ ಸಾರ್ವಜನಿಕರಿಗೆ ಪ್ರವೇಶ ನೀಡಿರುವ ಸ್ಥಳಗಳನ್ನು ಮತ್ತೆ ನೋಡಲು ಸಾಧ್ಯವಾ ಅನ್ನೋದು ಖಂಡಿತಾ ಅನುಮಾನ.

ಅದ್ಭುತ ಕಲಾಕೃತಿಗಳು, ಮರೆಯಲಾಗದಂಥ ಅನುಭವ

ಅದ್ಭುತ ಕಲಾಕೃತಿಗಳು, ಮರೆಯಲಾಗದಂಥ ಅನುಭವ

ಬ್ರಿಟಿಷರ ಕಾಲದ ಕಟ್ಟಡದೊಳಗೆ ಇರುವ ಅತ್ಯಮೂಲ್ಯ ಶಿಲ್ಪಗಳು, ತಂಜಾವೂರ್ ಕಲಾಕೃತಿಗಳು, ಬ್ರಿಟಿಷರ ಕಾಲದ ಚಿತ್ರಗಳು, ರಾಜ್ಯಪಾಲರಿಗಾಗಿಯೇ ಮೀಸಲಾದ ಕುರ್ಚಿ...ಅಬ್ಬಾ ನೋಡುತ್ತಾ ಹೋದಂತೆ ಇಡೀ ಕಟ್ಟಡದ ಸೌಂದರ್ಯ, ಅದನ್ನು ಹಾಗೇ ಕಾಪಾಡಿಕೊಂಡು ಬರುತ್ತಿರುವ ಬಗ್ಗೆ ಹೆಮ್ಮೆ ಎನಿಸುತ್ತದೆ. ಎಲ್ಲ ನೋಡಿ ಬಂದ ನಂತರ ಕೆಲ ನಿಮಿಷದ ವಿಡಿಯೋ ಪ್ರದರ್ಶಿಸಲಾಗುತ್ತದೆ. ಅದರಲ್ಲಿ ರಾಜ್ಯಪಾಲರು ಆತ್ಮೀಯವಾಗಿ ಮಾತನಾಡಿದ್ದಾರೆ. ಅದಕ್ಕೂ ಮುನ್ನ ರಾಜಭವನದ ಸೌಂದರ್ಯವನ್ನು ತೆರೆದಿಡುವ ವಿಡಿಯೋ ಪ್ರದರ್ಶನ ಇದೆ. ಅಲ್ಲಿಗೆ ರಾಜಭವನದ ಭೇಟಿ ಮುಕ್ತಾಯವಾಗುತ್ತದೆ. ಅಲ್ಲಿಂದ ಹೊರಗೆ ಬರುವಾಗ ಹೆಮ್ಮೆ-ಸಂತೋಷ ಜತೆಯಾಗಿರುತ್ತದೆ. ಇಂಟರ್ ನೆಟ್ ಮೂಲಕ ನೋಂದಣಿ ಮಾಡಿಸಬಹುದು: ಒಮ್ಮೆ ಪರಿಶೀಲಿಸಿಕೊಳ್ಳಿ. ಹಾಗಾಗದೇ ಇದ್ದಲ್ಲಿ ಅಧಿಕೃತ ದಾಖಲೆಗಳನ್ನು ತೆಗೆದುಕೊಂಡು ನೇರವಾಗಿ ರಾಜಭವನಕ್ಕೇ ಸಂಜೆ ನಾಲ್ಕರಿಂದ ರಾತ್ರಿ ಏಳು ಗಂಟೆ ಮಧ್ಯೆ ಹೋಗಿ. ಮಕ್ಕಳನ್ನು ಕರೆದುಕೊಂಡು ಹೋದರೆ ಅವರು ಹೆಚ್ಚು ಖುಷಿ ಪಡುತ್ತಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After 16 years Karnataka Rajbhavan open for public. This is the rarest opportunity. Here is an experience of Rajbhavan visit. It may help you to for next visit.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more