ಸಕತ್ ಕಿಕ್ ಕೊಡುವ ರೌಡಿ ಶೀಟರ್ 'ಅಲಿಯಾಸ್' ಗಳು
ಆ ಕಾಲದಲ್ಲಿ ಇದ್ದ ಕೊತ್ವಾಲ್ ರಾಮಚಂದ್ರ, ಡೆಡ್ಲಿ ಸೋಮ, ಜೇಡರಹಳ್ಳಿ ಕೃಷ್ಣಪ್ಪ, 'ಬೆಕ್ಕಿನ ಕಣ್ಣು' ರಾಜೇಂದ್ರ,ಬೂಟ್ ಹೌಸ್ ಕುಮಾರ ಹೆಸರಿನ ಪಟ್ಟಿಗೆ ಇನ್ನಷ್ಟು ಅಲಿಯಾಸ್ ನೇಮ್ಸ್ ಇಲ್ಲಿದೆ
ಬೆಂಗಳೂರು, ಜೂ.17: ಬೆಂಗಳೂರಿನ ರೌಡಿಗಳ ಹೆಸರು ಕೇಳುವುದಕ್ಕೆ ಸಕತ್ ಮಜಾ ಇರುತ್ತೆ. ಆಗಾಗ ರೌಡಿ ಶೀಟರ್ ಗಳನ್ನು ರೌಂಡಪ್ ಮಾಡಿ ಪೊಲೀಸರು ಒಬ್ಬೊಬ್ಬರ ಹೆಸರನ್ನು ಹಿಡಿದು ಕೂಗಿ ಕರೆದಾಗ ಅಲ್ಲಿದ್ದು ಕೇಳಿಸಿಕೊಳ್ಳಬೇಕು. ಕಡ್ಡಿಪುಡಿ ಸಿನಿಮಾದ ದೃಶ್ಯ ನೆನಪಿಸಿಕೊಳ್ಳಿ,
ಆನಂದ್ ಅಲಿಯಾಸ್ ಕಡ್ಡಿಪುಡಿ, ಜಿಂಕೆ, ರೆಕ್ಕೆ, ಔಷಧಿ..ಈ ರೀತಿ ಹೆಸರುಗಳು ಏಕೆ ಇಟ್ಟು ಕೊಳ್ಳುತ್ತಾರೆ ಎಂಬುದಕ್ಕೂ ಒಂದೊಂದು ದೃಷ್ಟಾಂತವಿರುತ್ತದೆ. 'ತೊಟ್ಟಿಕ್ಕುತ್ತಲೇ ಇದೆ ನೆತ್ತರು' ಪುಸ್ತಕದ ಪಾತ್ರ ಈಗ ದುನಿಯಾ ಸೂರಿ ನಿರ್ದೇಶನದಲ್ಲಿ 'ಸೈಲಂಟ್' ಸುನೀಲನಾಗಿ ಬೆಳ್ಳಿ ತೆರೆಗೆ ಬರುತ್ತಿದೆ. [ಮಂಜುನಾಥ ಅಲಿಯಾಸ್ ಪಾರಿವಾಳ ಮಂಜ]
ಕುಖ್ಯಾತ ರೌಡಿ ಲೋಕೇಶ ಅಲಿಯಾಸ್ ಮುಲಾಮನನ್ನು ಇತ್ತೀಚೆಗೆ ಗೂಂಡಾ ಕಾಯ್ದೆ ಅನ್ವಯ ಬೆಂಗಳೂರಿನ ಪೊಲೀಸರು ಬಂಧಿಸಿದ ಸುದ್ದಿ ನೀವು ಓದಿರಬಹುದು. ರೌಡಿಗಳ ಜೀವನ ಆಧಾರಿತ ಸಿನಿಮಾಗಳು ಬಂದಾಗ ಮಾತ್ರ ಸಾಮಾಜಿಕ ಜಾಲ ತಾಣಗಳಲ್ಲಿ ರೌಡಿಗಳ ಹೆಸರಿನ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚಿನ ಚರ್ಚೆ ನಡೆಯುತ್ತದೆ.
ಈ ಮುಂಚೆ ಇಮೇಲ್ ಗಳಲ್ಲಿ ಓಡಾಡಿಕೊಂಡಿದ್ದ ರೌಡಿಗಳ ಹೆಸರುಗಳು ಈಗ ಫೇಸ್ ಬುಕ್ ನಲ್ಲೂ ಕಾಣಿಸಿಕೊಂಡಿವೆ. ಹೀಗೆ ಯಾರಿಂದಲೋ ಫಾರ್ವರ್ಡ್ ಆದ ಒಂದಿಷ್ಟು ರೌಡಿಗಳ ಅಲಿಯಾಸ್ ನಾಮಗಳ ಅಸಮಗ್ರಹ ಸಂಗ್ರಹ ಇಲ್ಲಿದೆ ಓದಿ ಆನಂದಿಸಿ.. ಹೆಸರಿನ ಅರ್ಥ, ಹಿನ್ನಲೆ, ಕಥೆಗಳು ಗೊತ್ತಿದ್ದರೆ ನಮ್ಮ ಜೊತೆ ಹಂಚಿಕೊಳ್ಳಿ
ಆ ಕಾಲದಲ್ಲಿ ಇದ್ದ ಕೊತ್ವಾಲ್ ರಾಮಚಂದ್ರ, ಡೆಡ್ಲಿ ಸೋಮ, ಜೇಡರಹಳ್ಳಿ ಕೃಷ್ಣಪ್ಪ, 'ಬೆಕ್ಕಿನ ಕಣ್ಣು' ರಾಜೇಂದ್ರ, ಬೂಟ್ ಹೌಸ್ ಕುಮಾರ ಹೆಸರಿನ ಪಟ್ಟಿಗೆ ಇನ್ನಷ್ಟು ಅಲಿಯಾಸ್ ನೇಮ್ಸ್ ಇಲ್ಲಿದೆ:

* ಕವಳ ಅಲಿಯಾಸ್ ವಿಜಯಕುಮಾರ್
* ಶ್ರೀನಿವಾಸ್ ಅಲಿಯಾಸ್ ಬಾಲ
* ಕುಟ್ಟಿ ಅಲಿಯಾಸ್ ತಿರುಕುಮಾರನ್
* ಗೇಟ್ ಗಣೇಶ
* 'ಸ್ಪಾಟ್' ನಾಗ
* 'ಸೈಟ್' ಗೋಪಿ
* 'ಹಫ್ತಾ' ಅಜ್ಮಲ್
* 'ಹೆಬ್ಬೆಟ್ಟು' ಮಂಜ
* 'ಎಣ್ಣೆ' ಸೀನ
* ಮಂಜುನಾಥ ಅಲಿಯಾಸ್ ಪಾರಿವಾಳ ಮಂಜ
* 'ಆಯಿಲ್' ಸೀನ ಅಥವಾ 'ವ್ಹಿಸ್ಕಿ' ಸೀನ.
* 'ಬಾಂಬ್' ನಾಗ
* 'ಸೀಮೆಎಣ್ಣೆ' ರಾಮಪ್ಪ ಅಲಿಯಾಸ್ ಕೆರೋಸಿನ್ ಆಯಿಲ್ ರಾಮಪ್ಪ
* 'ಇಸ್ತ್ರಿಗಾಡಿ' ವೆಂಕ ಅಥವಾ ಐರನಿಂಗ್ ವೆಹಿಕಲ್ ವೆಂಕ
* 'ಮಚ್ಚೆ' ಬಾಬು
* 'ಟಿಂಕರ್' ಇಸ್ಮಾಯಿಲ್
* 'ಮಾಂಸದಂಗಡಿ' ರಾಜ, ಬುಚ್ಚರ್ ರಾಜ
* 'ಮೊಸರು' ರಂಗ
* 'ಕೊರಂಗು' ಕೃಷ್ಣ
* 'ಕೋತಿ' ಮಂಜ
* 'ಜೆಲ್ಲಿ' ವೆಂಕಟೇಶ್
* 'ಪರೋಡಿ' ಬಾಬು
* 'ಆಸಿಡ್' ರಾಜ
* 'ಕೋಳಿ' ಫಯಾಜ್
* 'ಬುಲೆಟ್' ಬಸವ
* 'ಬ್ಲೇಡ್' ಭಾಸ್ಕರ್
* 'ಕಡ್ಡಿ' ಕುಮಾರ
* 'ಚಡ್ಡಿ' ಚಂದ್ರ.
* 'ಮಚ್ಚ' ಅಲಿಯಾಸ್ ಮಂಜು ಕಾಮಾಕ್ಷಿಪಾಳ್ಯ
*'ಲಕ್ಕಿ' ಅಲಿಯಾಸ್ ಲಕ್ಷ್ಮಣ್
* 'ರಾಜ' ಆಲಿಯಾಸ್ ಕ್ಯಾಪ್ಟನ್ ರಾಜ
*'ಜಗ್ಗಿ' ಅಲಿಯಾಸ್ ಬ್ರೇಕ್ ಜಗ್ಗಿ
* 'ಚಕ್ರೆ' ಅಲಿಯಾಸ್ ಚಕ್ರವರ್ತಿ
* 'ಜಗ್ಗ' ಮಾರೇನಹಳ್ಳಿ
* 'ಪಾಯ್ಸನ್' ರಾಮ
* (ಒನ್ ಇಂಡಿಯಾ ಸುದ್ದಿ)












Click it and Unblock the Notifications