ಐಎಎಸ್ ಅಧಿಕಾರಿ ಶಿಖಾ ಮತ್ತೆ ಬಿಎಂಟಿಸಿ ಎಂಡಿಯಾಗಿ ಮರುನೇಮಕ

ಬೆಂಗಳೂರು, ಜುಲೈ 3: ರಾಜ್ಯ ಸರ್ಕಾರದಿಂದ ಎರಡು ದಿನಗಳ ಹಿಂದಷ್ಟೇ 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಬೆಂಗಳೂರಿನ ಬಿಎಂಟಿಸಿ ಎಂಡಿಯಾಗಿದ್ದ ಸಿ. ಶಿಖಾ ಕೂಡ ಎತ್ತಂಗಡಿ ಮಾಡಲಾಗಿತ್ತು.

ಇದೀಗ ಐಎಎಸ್ ಅಧಿಕಾರಿ ಸಿ. ಶಿಖಾ ಅವರನ್ನು ವಾಣಿಜ್ಯ ತೆರಿಗೆ ಆಯುಕ್ತೆ ಹುದ್ದೆಯಿಂದ ಮತ್ತೆ ಬಿಎಂಟಿಸಿ ಎಂಡಿಯಾಗಿ ಮರುನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಆದೇಶ ಹೊರಡಿಸಿದ್ದು, ಕರ್ನಾಟಕ ಕೆಡರ್ 2004ರ ಬ್ಯಾಚ್ ಐಎಎಸ್ ಅಧಿಕಾರಿ ಶಿಖಾ ಸಿ ಅವರನ್ನು ಕಮರ್ಷಿಯಲ್ ಟ್ಯಾಕ್ ಕಮೀಷನರ್ ಹುದ್ದೆಯಿಂದ ಕೂಡಲೇ ಜಾರಿಗೆ ಬರುವಂತೆ ಬಿಎಂಟಿಸಿಯ ಎಂಡಿಯಾಗಿ ನೇಮಕ ಮಾಡಿದ್ದಾರೆ.

Karnataka Govt Ordered To Reappoint IAS Officer Shikha As BMTC MD

ಇದೇ ವೇಳೆ ಮತ್ತೊಬ್ಬ ಐಎಎಸ್ ಅಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರನ್ನು ಕೊಪ್ಪಳ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಿ, ಕೊಪ್ಪಳ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ.

Recommended Video

      ಸಿದ್ದರಾಮಯ್ಯ ಮುಂದೆ ನಡೀಲಿಲ್ಲ ಡಿಕೆಶಿ ಆಟ | Karnataka Congress Inside Politics | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+