ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ಸೇವೆಗಳಿಗೆ App ಅಭಿವೃದ್ಧಿ ಕಷ್ಟ ಎಂದ ಕರ್ನಾಟಕ ಸರ್ಕಾರ

|
Google Oneindia Kannada News

ಬೆಂಗಳೂರು, ನವೆಂಬರ್‌ 16: ಸರ್ಕಾರದಿಂದ ಆಟೋ ಸೇವೆಗಳಿಗೆ ಆ್ಯಪ್ ಅಭಿವೃದ್ಧಿಪಡಿಸುವುದು ಕಷ್ಟ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಸಾರ್ವಜನಿಕರು ಸರ್ಕಾರವೇ ರೈಡ್‌ ಹೇಲಿಂಗ್‌ ಅಪ್ಲಿಕೇಶನ್‌ ಆರಂಭಿಸಿ ಆಟೋ ಸೇವೆಗಳಿಗೆ ಕನಿಷ್ಠ ದರ ನಿಗದಿಪಡಿಸಲು ನಡೆದ ಎಲ್ಲಾ ವಲಯಗಳ ಸಂಚಾರ ಪೊಲೀಸರು, ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ನಡೆದ ಸಭೆಯಲ್ಲಿ ಆ್ಯಪ್ ಆಧಾರಿತ ಆಟೋಗಳಿಗೆ ದರ ನಿಗದಿ ಮಾಡುವುದು ಹೇಗೆ ಎಂಬ ನಿರ್ಧಾರಕ್ಕೆ ಸಭೆ ನಡೆಸಲಾಯಿತು.

Ola Play : ನವೆಂಬರ್ 15 ರಿಂದ ಓಲಾ ಪ್ಲೇ ಮುಚ್ಚುವುದಾಗಿ ಘೋಷಿಸಿದ ಕಂಪೆನಿOla Play : ನವೆಂಬರ್ 15 ರಿಂದ ಓಲಾ ಪ್ಲೇ ಮುಚ್ಚುವುದಾಗಿ ಘೋಷಿಸಿದ ಕಂಪೆನಿ

ಸಾರಿಗೆ ಇಲಾಖೆ ಆಯುಕ್ತ ಎನ್‌. ಸಿದ್ದರಾಮಪ್ಪ ಮಾತನಾಡಿ, ''ಓಲಾ ಉಬರ್‌ನಂತೆ ರೈಡ್‌ ಹೇಲಿಂಗ್‌ ಆ್ಯಪ್ ಅಭಿವೃದ್ಧಿಪಡಿಸುವುದು ಸರ್ಕಾರಕ್ಕೆ ಈಗ ಸಾಧ್ಯವಿಲ್ಲ. ನಾವು ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡಿ ಆ್ಯಪ್ ಅಭಿವೃದ್ಧಿಪಡಿಸಲು ಸದ್ಯ ಸಾಧ್ಯವಿಲ್ಲ. ಎಲ್ಲ ಅಗ್ರಿಗೇಟರ್‌ಗಳ ಸಮಸ್ಯೆಯನ್ನು ಆಲಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನ್ಯಾಯ ಒದಗಿಸುತ್ತೇವೆ'' ಎಂದು ಹೇಳಿದರು.

ಮತ್ತೋರ್ವ ಸಾರಿಗೆ ಇಲಾಖೆ ಅಧಿಕಾರಿ ಮಾತನಾಡಿ, ''ಓಲಾ, ಉಬರ್ ಮತ್ತು ಇತರೆ ಆ್ಯಪ್ ಸೇವೆಗಳನ್ನು ಸರ್ಕಾರ ಪರಿಚಯ ಮಾಡಿರಲಿಲ್ಲ. ಇಂದು ನಾವು ಉದಾರೀಕರಣದ ಜಗತ್ತಿನಲ್ಲಿದ್ದೇವೆ. ಪ್ರತಿಯೊಬ್ಬರು ಕೂಡ ಯಾವುದೇ ಉದ್ಯಮ ವ್ಯವಹಾರ ನಡೆಸಲು ಇಲ್ಲಿ ಅವಕಾಶಗಳಿವೆ. ಆರಂಭದಲ್ಲಿ ಮನೆ ಬಾಗಿಲಿಗೆ ಬಂದು ಕರೆದುಕೊಂಡು ಹೋಗುತ್ತಿದ್ದರಿಂದ ಈ ಆ್ಯಪ್ ಸೇವೆಗಳನ್ನು ಸಾರ್ವಜನಿಕರು ಸ್ವಾಗತಿಸಿದರು. ಆದರೆ ಈಗ ಆಕ್ರೋಶ ವ್ಯಕ್ತವಾಗುತ್ತಿದೆ'' ಎಂದರು.

ಓಲಾ, ಉಬರ್ ಆಟೋ ಬಿಕ್ಕಟ್ಟು: ಸದ್ಯಕ್ಕೆ ಬಗೆಹರಿಯುವುದು ಡೌಟು!ಓಲಾ, ಉಬರ್ ಆಟೋ ಬಿಕ್ಕಟ್ಟು: ಸದ್ಯಕ್ಕೆ ಬಗೆಹರಿಯುವುದು ಡೌಟು!

ಆದರೆ ಈ ಅಗ್ರಿಗೇಟರ್‌ ಆಧಾರಿತ ಆಟೋ ಸೇವೆಗಳ ದರಗಳು 100 ರೂಪಾಯಿ ತಲುಪಿದಾಗ ಆಕ್ರೋಶ ಶುರುವಾಗಿದೆ. ಕರ್ನಾಟಕ ಹೈಕೋರ್ಟ್‌ ನಿರ್ದೇಶನದಂತೆ ನಾವು ಸಭೆಗಳನ್ನು ಕರೆದಿದ್ದೇವೆ. ಆಟೋ ಡ್ರೈವರ್‌ ಯುನಿಯನ್‌ನವರು, ರೈಡ್‌ ಹೇಲಿಂಗ್‌ ಕಂಪೆನಿಗಳ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಕೆಲವು ವಿಷಯ ತಜ್ಞರ ಅಭಿಪ್ರಾಯಗಳನ್ನು ತೆಗೆದುಕೊಂಡಿದ್ದೇವೆ. ಬಳಿಕ ನಾವು ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.

 ಆಟೋ ಚಾಲಕರ ವಿರುದ್ಧ ಕ್ರಮಕ್ಕೆ ಆಗ್ರಹ

ಆಟೋ ಚಾಲಕರ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಗಳವಾರ ನಡೆದ ಸಭೆಯಲ್ಲಿ ಸರ್ಕಾರದಿಂದಲೇ ರೈಡ್‌ ಹೇಲಿಂಗ್ ಅಪ್ಲಿಕೇಶನ್‌ ಆರಂಭಿಸುವಂತೆ ಸಭೆಯಲ್ಲಿದ್ದ ತಜ್ಞರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಒತ್ತಾಯಿಸಿದರು. ಅಲ್ಲದೆ ಕೆಲವು ನಾಗರಿಕರು ನಿಯಮಗಳನ್ನು ಪಾಲಿಸದ ಆಟೋ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರೆ ಸಾರಿಗೆ ಇಲಾಖೆ ಹಂಚಿಕೆಯ ಮೊಬಿಲಿಟಿ ಮಾದರಿಯನ್ನು ಪರಿಚಯಿಸುವಂತೆ ಮನವಿ ಮಾಡಿದರು.

 ಹೆಚ್ಚಿನ ದರ ಅನುಮತಿಸಿದ್ದಕ್ಕೆ ತರಾಟೆ

ಹೆಚ್ಚಿನ ದರ ಅನುಮತಿಸಿದ್ದಕ್ಕೆ ತರಾಟೆ

ಹೆಚ್ಚಿನ ಸಾರ್ವಜನಿಕರು ಓಲಾ ಹಾಗೂ ಉಬರ್‌ನ ಸರ್ಜ್‌ ಪ್ರೈಸಿಂಗ್‌ ವ್ಯವಸ್ಥೆಯನ್ನು ಇದು ಹಗಲು ದರೋಡೆಯಾಗಿದೆ ಎಂದು ತೀವ್ರವಾಗಿ ವಿರೋಧಿಸಿದರು. ಅಲ್ಲದೆ ಅಪ್ಲಿಕೇಶನ್‌ ಆಧಾರಿತ ಆಟೋ ಸೇವೆಗಳನ್ನು ಕಾನೂನುಬಾಹಿರವಾಗಿ ಹಾಗೂ ಆಧಾರರಹಿತವಾಗಿ ಕಾರ್ಯನಿರ್ವಹಿಸಲು ಹಾಗೂ ಹೆಚ್ಚಿನ ಶುಲ್ಕ ವಿಧಿಸಲು ಅನುಮತಿಸಿದ್ದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

 ಜನರ ಸುಲಿಗೆಯಾಗದೇ ಬೇರೇನೂ ಆಗಲ್ಲ

ಜನರ ಸುಲಿಗೆಯಾಗದೇ ಬೇರೇನೂ ಆಗಲ್ಲ

ಟೆಕ್ಕಿಯೊಬ್ಬರು ಓಲಾ ಮತ್ತು ಉಬರ್‌ಗೆ ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡುವುದು ಸರಿ. ಆದರೆ ಸಾರಿಗೆ ಇಲಾಖೆ ಪ್ರಾಧಿಕಾರದ ನಿಯಮಗಳು ಎಷ್ಟರ ಮಟ್ಟಿಗೆ ತಮ್ಮ ಆಟೋ ದರವನ್ನು ಹೆಚ್ಚಳಕ್ಕೆ ಅವಕಾಶ ನೀಡುತ್ತವೆ. ಇಂತಹ ಅಪ್ಲಿಕೇಶನ್‌ಗಳಿಂದ ಬೆಲೆ ಏರಿಕೆಯಾಗಿ ಜನರ ಸುಲಿಗೆಯಾಗದೇ ಬೇರೇನೂ ಆಗುತ್ತದೆ. ಹಾಗಾಗಿ ಸರ್ಕಾರವೇ ಸ್ವಂತ ಅಪ್ಲಿಕೇಶನ್‌ ಅನ್ನು ಆರಂಭಿಸುವುದು ಒಳ್ಳೆಯ ಪರಿಹಾರವಾಗಿದೆ ಎಂದರು.

 ಕೇಂದ್ರ ಮೋಟಾರು ವಾಹನ ಮಾರ್ಗಸೂಚಿ ಅಳವಡಿಕೆಗೆ ಸೂಚನೆ

ಕೇಂದ್ರ ಮೋಟಾರು ವಾಹನ ಮಾರ್ಗಸೂಚಿ ಅಳವಡಿಕೆಗೆ ಸೂಚನೆ

ವಿಷಯ ತಜ್ಞರಾದ ಸತ್ಯ ಅರಿಕುತಾರಂ ಮಾತನಾಡಿ, ಸಾರಿಗೆ ಇಲಾಖೆಗೆ ತಾವು ಅಳವಡಿಸಿಕೊಳ್ಳಬಹುದಾದ ಸಲಹೆಗಳನ್ನು ನೀಡಿದರು. ಅವರು ಕೇಂದ್ರ ಮೋಟಾರು ವಾಹನ ಮಾರ್ಗಸೂಚಿ 2020 ಅನ್ನು ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದರು. ತಮ್ಮ ಸಲಹೆಯಲ್ಲಿ ಅವರು ಮಾರ್ಗಸೂಚಿಯಂತೆ ಸಾರಿಗೆ ಇಲಾಖೆ ಆ್ಯಪ್‌ಗಳ ಮೂಲಕ ಬುಕ್‌ ಮಾಡಿದ ರೈಡ್‌ಗಳಲ್ಲಿ ಕನಿಷ್ಠ ಪ್ರಯಾಣ ದೂರವನ್ನು 3 ಕಿಮೀಗೆ ನಿಗದಿಪಡಿಸಬೇಕು. ಅಂದರೆ ಸರ್ಕಾರ ನಿಗದಿಪಡಿಸಿದ ಪ್ರಸ್ತುತ ದರಗಳ ಆಧಾರದ ಮೇಲೆ ಅಪ್ಲಿಕೇಶನ್‌ಗಳಲ್ಲಿ ಬುಕ್‌ ಮಾಡಿದ ರೈಡ್‌ಗಳಿಗೆ 45 ರೂಪಾಯಿ ಮೂಲ ಕನಿಷ್ಠ ದರ ನಿಗದಿಗೆ ಸೂಚಿಸಿದರು.

English summary
The Transport Department said that it is difficult to develop an app for auto services by the Karnataka government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X