ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಿಧ ಪಕ್ಷಗಳ ಟಿಕೆಟ್ ವಂಚಿತರು, ವಲಸಿಗರಿಗೆ ಸದ್ಯ ಜೆಡಿಎಸ್ ಸ್ವರ್ಗ!

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಚುನಾವಣೆ ಘೋಷಣೆಗೂ ಮುನ್ನ ಹಾಗೂ ಅದರ ನಂತರದ ಅವಧಿಯಲ್ಲಿ ಜೆಡಿಎಸ್ ನ ಸಾಕಷ್ಟು ಹಾಲಿ ಶಾಸಕರುಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಸೆಳೆದುಕೊಂಡು ಗೌಡರ ಕುಟುಂಬಕ್ಕೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಆದರೆ ಟಿಕೆಟ್ ಘೋಷಣೆಯ ನಂತರದ ದಿನಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನ ಟಿಕೆಟ್ ವಂಚಿತರಿಗೆ ಗಾಳ ಹಾಕುವ ಮೂಲಕ ಗೌಡರು ಎರಡೂ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಆ ಮೂಲಕ ಟಿಕೆಟ್ ವಂಚಿತರೂ ಹಾಗೂ ವಲಸಿಗರಿಗೆ ಜೆಡಿಎಸ್ ಸ್ವರ್ಗವಾಗುತ್ತಿದೆ. ಅದರಲ್ಲೂ ರಾಜಧಾನಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನ ಟಿಕೆಟ್ ವಂಚಿತ ಮುಖಂಡರಿಗೆ ಜೆಡಿಎಸ್ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿದೆ.

ಬಿಜೆಪಿ ತೊರೆದು ಜೆಡಿಎಸ್ ಸೇರಿದ ನಟಿ ಅಮೂಲ್ಯ ಮಾವ ಬಿಜೆಪಿ ತೊರೆದು ಜೆಡಿಎಸ್ ಸೇರಿದ ನಟಿ ಅಮೂಲ್ಯ ಮಾವ

ಚಿಕ್ಕಪೇಟೆಯಯಲ್ಲಿ ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರು ಆಗಿದ್ದ ಹೇಮಚಂದ್ರ ಸಾಗರ್ ಅವರನ್ನು ಸಾಗರ್ ಅವರನ್ನು ಆಹ್ವಾನಿಸಿದೆ ಅಲ್ಲಿ ಗರುಡಾಚಾರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಹೇಮಚಂದ್ರ ಸಾಗರ್ ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಇಂದು ಅಥವಾ ನಾಳೆ ಹೇಮಚಂದ್ರ ಸಾಗರ್ ಅವರಿಗೆ ಜಕೆಡಿಎಸ್ ಟಿಕೆಟ್ ಘೋಷಿಸುವ ಸಾಧ್ಯತೆ ನಿಚ್ಚಳವಾಗಿದೆ. ಇನ್ನು ಪುಲಕೇಶಿನಗರದಲ್ಲಿ ಮಾಜಿ ಶಾಸಕ ಪ್ರಸನ್ನ ಕುಮಾರ್ ಕಾಂಗ್ರೆಸ್ ನಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಈಗಾಗಲೇ ದೇವೇಗೌಡರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆಯನ್ನು ನಡೆಸಿರುವ ಪ್ರಸನ್ನ ಕುಮಾರ್ ಶೀಘ್ರಸಲ್ಲೇ ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಅವರಿಗೂ ಕೂಡ ಪುಕೇಶಿನಗರದಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಚಾಮರಾಜಪೇಟೆಯಲ್ಲಿ ದೇವೇಗೌಡರಿಗೆ ಭರ್ಜರಿ ಶಾಕ್ ನೀಡಿದ್ದ ಮಾಜಿ ಶಿಷ್ಯ ಜಮೀರ್ ಅಹಮದ್ ಗೆ ಕಾಂಗ್ರೆಸ್ ವಲಯದ ಪ್ರಭಾವಿ ಕಾರ್ಪೊರೇಟರ್ ಅಕ್ರಂ ಪಾಷಾ ಜೆಡಿಎಸ್ ಗೆ ಮುಂದಿನ ಅಭ್ಯರ್ಥಿಯೆಂದು ಈಗಾಗಲೇ ಘೋಷಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಅತೃಪ್ತ ಬಿಜೆಪಿ ನಾಯಕರಿಗೆ ಜೆಡಿಎಸ್ ಗಾಳದಕ್ಷಿಣ ಕನ್ನಡ ಜಿಲ್ಲೆಯ ಅತೃಪ್ತ ಬಿಜೆಪಿ ನಾಯಕರಿಗೆ ಜೆಡಿಎಸ್ ಗಾಳ

ಕಾಂಗ್ರೆಸ್ ಜೆಡಿಎಸ್ ಗೆ ನೀಡಿದ್ದ ಪೆಟ್ಟನ್ನು ಅವರದೇ ಪಾಳಯದ ಮೂಲಕ ಪ್ರತಿ ತಂತ್ರವನ್ನು ರೂಪಿಸಲು ದೇವೇಗೌಡರು ಯಶಸ್ವಿಯಾಗಿದ್ದಾರೆ.

ಇನ್ನು ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ಹಾಗೂ ನಟಿ ಅಮೂಲ್ಯ ಅವರ ಮಾವ ಜಿ.ಎಸ್. ರಾಮಚಂದ್ರ ಅವರನ್ನು ಜೆಡಿಎಸ್ ತನ್ನತ್ತ ಸೆಳೆದುಕೊಂಡಿದೆ. ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರಾಮಚಂದ್ರ ಅವರು ನಿರ್ಧರಿಸಿದ್ದರು.

ಇದಕ್ಕಾಗಿ ನಟ ಗಣೇಶ್, ಪತ್ನಿ ಶಿಲ್ಪಾ ಗಣೇಶ್ ಇತರರ ಮೂಲಕ ಬಿಜೆಪಿಯ ಮೇಲೆ ಒತ್ತಡ ಹೇರಲು ಮುಂದಾಗಿದ್ದರು. ಯಡಿಯೂರಪ್ಪ ಅವರು ಕೂಡ ಇದಕ್ಕೆ ಬೆಂಬಲವಾಗಿದ್ದರು ಎಂದು ಹೇಳಲಾಗುತ್ತಿದೆ.

ತೆನೆ ಹೊತ್ತ ಮಹಿಳೆಯಾದರು ನಟಿ ಅಮೂಲ್ಯತೆನೆ ಹೊತ್ತ ಮಹಿಳೆಯಾದರು ನಟಿ ಅಮೂಲ್ಯ

ಆದರೆ ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಮುನಿರಾಜು ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದ ಹಿನ್ನೆಲೆಯಲ್ಲಿ ಬಂಡಾಯ ಎದ್ದಿದ್ದಂತಹ ರಾಮಚಂದ್ರ ಅವರು ಜೆಡಿಎಸ್ ಸೇರಿದ್ದಾರೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ರಾಜರಾಜೇಶ್ವರಿ ನಗರದಲ್ಲಿ ಈಗ ರಾಮಚಂದ್ರ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ನಿಚ್ಚಳವಾಗಿದೆ.

ಇದು ಕೇವಲ ರಾಜಧಾನಿಗೆ ಸೀಮಿತವಾಗಿದೆ ರಾಜ್ಯದ ವಿವಿಧ ಡೆಯೂ ಜೆಡಿಎಸ್ ಟಿಕೆಟ್ ಹಂಚಿಕೆ ಕತೆ ಇದೇ ಆಗುವ ಸಾಧ್ಯತೆ ಇದೆ ಇನ್ನೆರೆಡು ದಿನಗಳಲ್ಲಿ ಈ ಕುರಿತು ಇನ್ನೂ ಸ್ಪಷ್ಟ ಚಿತ್ರಣ ದೊರೆಯಲಿದೆ.

ರಾಮಚಂದ್ರ ಜೆಡಿಎಸ್ ಸೇರ್ಪಡೆ

ರಾಮಚಂದ್ರ ಜೆಡಿಎಸ್ ಸೇರ್ಪಡೆ

ರಾಜರಾಜೇಶ್ವರಿ ನಗರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ಜಿ.ಎಚ್.ರಾಮಚಂದ್ರ ಅವರು ಇಂದು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಎರಡು ದಶಕದಿಂದಲೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ರಾಮಚಂದ್ರ ಅವರು ಜೆಡಿಎಸ್ ಸೆರ್ಪಡೆಗೊಂಡಿದ್ದು, ರಾಜರಾಜೇಶ್ವರಿನಗರದಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿದೆ.

ಚಿತ್ರ ನಟಿ ಅಮೂಲ್ಯ ಅವರ ಮಾವನವರಾಗಿರುವ ಜಿ.ಎಚ್.ರಾಮಚಂದ್ರ ಅವರು ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಹಾಗೂ ಈ ಬಾರಿ ರಾಜರಾಜೇಶ್ವರಿ ನಗರದಿಂದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಸಹ ಆಗಿದ್ದರು. ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನಿರಾಕರಿಸಲಾಗಿರುವ ಕಾರಣ, ರಾಮಚಂದ್ರ ಅವರಿಗೇ ಜೆಡಿಎಸ್ ಸಿಗುವ ಸಾಧ್ಯತೆ ಇದೆ.

ಪಿ. ರಮೇಶ್ ಕಾಂಗ್ರೆಸ್ ನಿಂದ ಜೆಡಿಎಸ್ ಗೆ

ಪಿ. ರಮೇಶ್ ಕಾಂಗ್ರೆಸ್ ನಿಂದ ಜೆಡಿಎಸ್ ಗೆ

ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದ ಪಿ.ರಮೇಶ್‌ ಜೆಡಿಎಸ್ ಗೆ ಸೇರಿದ್ದು, ಆ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಬಿಜೆಪಿ ಬಂಡಾಯ ನಾಯಕ ಹೇಮಚಂದ್ರ ಸಾಗರ್‌ ಅವರು ಚಿಕ್ಕಪೇಟೆ ಕ್ಷೇತ್ರದಿಂದ ಅಖಾಡಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.

ಬಿಜೆಪಿ, ಕಾಂಗ್ರೆಸ್‌ ಭಿನ್ನಮತೀಯರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ, ಬೇರೆ ಪಕ್ಷಗಳ ಪ್ರಭಾವಿಗಳು ಜೆಡಿಎಸ್ ಸೇರ್ಪಡೆಯಾಗುತ್ತಿರುವುದು ಸಂತೋಷ ವಿಷಯವಾಗಿದೆ. ದಿನೇ ದಿನೇ ಪಕ್ಷವು ಬಲಿಷ್ಠವಾಗುತ್ತಿದೆ. ಜನರ ಆರ್ಶೀವಾದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಿಗುತ್ತಿದೆ. ಯಾವಾಗಲೂ ದೈವದಲ್ಲಿ ನಂಬಿಕೆ ಇಟ್ಟಿದ್ದು, ಬರಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಪ್ರಜ್ವಲ್ ರೇವಣ್ಣ ಅವರ ಹೆಸರು ಕೂಡ ರಾಜರಾಜೇಶ್ವರಿ ನಗರದಲ್ಲಿ ತೇಲಾಡುತ್ತಿತ್ತು. ಇನ್ನು ಸಿವಿ ರಾಮನ್ ನಗರ ಕಾಂಗ್ರೆಸ್ ವಲಯದಲ್ಲಿ ಬಹು ಚರ್ಚೆಗೆ ಈಡಾಗಿದ್ದಂತಹ ವಿಧಾನಸಭಾ ಕ್ಷೇತ್ರವಾಗಿದೆ. ಸಿವಿ ರಾಮನ್ ನಗರದಲ್ಲಿ ಲೋಕೋಪಯೋಗಿ ಸಚಿವ ಮಹದೇವಪ್ಪ ಸ್ಪರ್ಧಿಸುತ್ತಾರೆ ಎಂದು ಮೊದಲು ಸುದ್ದಿ ಹಬ್ಬಿತ್ತು.

ಬಳಿಕ ಮಹದೇವಪ್ಪ ಅವರ ಮಗ ಸುನೀಲ್ ಬೋಸ್ ಗೂ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಇವರಿಬ್ಬರಿಗೂ ಟಿಕೆಟ್ ನೀಡದೆ ನಾರಾಯಣ ಸ್ವಾಮಿಗೆ ಟಿಕೆಟ್ ನೀಡಿದೆ. ಇದೆಎಲ್ಲದರಿಂದ ಬೇಸತ್ತಿರುವ ಪಿ. ರಮೇಶ್ ಜೆಡಿಎಸ್ ನತ್ತ ವಾಲಿದ್ದಾರೆ. ಈಗಾಗಲೇ ಜೆಡಿಎಸ್ ನಲ್ಲಿರುವವರಿಗೆ ಖಾತರಿ ಭರವಸೆ ದೊರೆತಿದ್ದು, ಕಾಂಗ್ರೆಸ್ ನಲ್ಲಿರುವವರಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.

ಹೇಮಚಂದ್ರ ಅವರನ್ನು ಬರಮಾಡಿಕೊಂಡ ಜೆಡಿಎಸ್

ಹೇಮಚಂದ್ರ ಅವರನ್ನು ಬರಮಾಡಿಕೊಂಡ ಜೆಡಿಎಸ್

ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಪಕ್ಷ ತೊರೆದಿದ್ದ ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕ ಹೇಮಚಂದ್ರ ಸಾಗರ್ ಅವರು ಇಂದು ಜೆಡಿಸ್ ಗೆ ಸೇರ್ಪಡೆಯಾಗಿದ್ದಾರೆ. ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರ ಸಮ್ಮುಖದಲ್ಲಿ ಹೇಮಚಂದ್ರ ಸಾಗರ್ ಅವರು ಜೆಡಿಎಸ್ ಸೇರಿದ್ದಾರೆ.

ಚಿಕ್ಕಪೇಟೆ ಕ್ಷೇತ್ರದಿಂದ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ 2018ರ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಹೇಮಚಂದ್ರ ಸಾಗರ್ ಅವರು ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕರಾಗಿದ್ದು, 2013ರ ಚುನಾವಣೆಯಲ್ಲಿ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿರಲಿಲ್ಲ. ಹಾಗಾಗಿ 2018ರ ಚುನಾವಣೆಗೆ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು.

ಆದರೆ ಕೊನೆ ಗಳಿಗೆಯಲ್ಲಿ ಬಿಜೆಪಿ ಉದಯ್ ಗರುಡಾಚಾರ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರಿಂದ, ಹೇಮಚಂದ್ರ ಸಾಗರ್ ಅವರು ಬೇಸರಗೊಂಡು ಕಳೆದ ವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಗುಡ್ ಬೈ ಹೇಳಿದ್ದರು.

ಕಾಂಗ್ರೆಸ್ ತೊರೆಯಲು ಪ್ರಸನ್ನ ಕುಮಾರ್ ಚಿಂತನೆ

ಕಾಂಗ್ರೆಸ್ ತೊರೆಯಲು ಪ್ರಸನ್ನ ಕುಮಾರ್ ಚಿಂತನೆ

ಇನ್ನು ಪುಲಕೇಶಿನಗರದಲ್ಲಿ ಮಾಜಿ ಶಾಸಕ ಪ್ರಸನ್ನ ಕುಮಾರ್ ಕಾಂಗ್ರೆಸ್ ನಿಂದ ದೂರ ಸರಿಯಲು ನಿರ್ಧರಿಸಿದ್ದಾರೆ. ಈಗಾಗಲೇ ದೇವೇಗೌಡರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆಯನ್ನು ನಡೆಸಿರುವ ಪ್ರಸನ್ನ ಕುಮಾರ್ ಶೀಘ್ರಸಲ್ಲೇ ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.

English summary
Those missed a ticket in BJP and congress are joining JDS. JDS becoming sweethome for rebels in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X