ಪ್ರವಾಸ ಮುಗಿಸಿ ಬಂದ ಕುಮಾರಸ್ವಾಮಿಗೆ ಬಿಜೆಪಿ ಸ್ವಾಗತ ನೀಡಿದ್ದು ಹೀಗೆ

Recommended Video

      ಫಾರಿನ್ ಟೂರ್ ನಿಂದ ವಾಪಸಾದ ಕುಮಾರಸ್ವಾಮಿಗೆ ಬಿಜೆಪಿಯಿಂದ ಸ್ವಾಗತ | Oneindia Kannada

      ಬೆಂಗಳೂರು, ಜನವರಿ 3: ಐದು ದಿನಗಳ ವಿದೇಶ ಪ್ರವಾಸ ಮುಗಿಸಿ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಮಗ ನಿಖಿಲ್ ಜೊತೆ ಗುರುವಾರ ಬೆಂಗಳೂರಿಗೆ ಮರಳಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ರಾಜ್ಯ ಬಿಜೆಪಿ ವ್ಯಂಗ್ಯದ 'ಸ್ವಾಗತ' ನೀಡಿದೆ.

      ಕುಟುಂಬದೊಂದಿಗೆ ಪ್ರವಾಸ ಕೈಗೊಂಡಿದ್ದ ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಸರ್ಕಾರ ಮತ್ತು ರಾಜ್ಯ ರಾಜಕೀಯದಲ್ಲಿ ಅನೇಕ ಘಟನೆಗಳು ನಡೆದಿವೆ. ಅವುಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ, ಕುಮಾರಸ್ವಾಮಿ ಅವರಿಗೆ ಭರ್ಜರಿ ಸ್ವಾಗತದ ಬಾಣಗಳನ್ನು ತೂರಿದೆ.

      karnataka bjp welcomes hd kumaraswamy after he arrived from foriegn tour

      ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೇ ನಿಮಗೆ ಸ್ವಾಗತ. ನಿಮ್ಮ ಹೊಸ ವರ್ಷದ ಸಂತೋಷಕೂಟ ಭರ್ಜರಿಯಾಗಿತ್ತು ಎಂದು ಭಾವಿಸುತ್ತೇವೆ ಎಂಬುದಾಗಿ ಬಿಜೆಪಿ ಟ್ವೀಟ್ ಮಾಡಿದೆ.

      ನಿಮ್ಮ ಹೊಸ ವರ್ಷದ ಸಂಭ್ರಮಾಚರಣೆ ಮತ್ತು ಪ್ರವಾಸ ಮುಗಿದಿದ್ದರೆ ನೀವು ಮುಗಿಸಬೇಕಿರುವ ಕೆಲವು ಕೆಲಸಗಳ ಪಟ್ಟಿ ಇಲ್ಲಿದೆ.
      -ರೈತರ ಸಾಲಮನ್ನಾ
      - ಉಕ್ಕಿನ ಸೇತುವೆ ವಿವಾದ
      - ಬರ ಪರಿಹಾರ
      - ಮತ್ತು ಕೊನೆಯದಾಗಿ ಸ್ವಲ್ಪವಾದರೂ ಆಡಳಿತ ನಡೆಸುವುದು ಎಂದು ಬಿಜೆಪಿ ಲೇವಡಿ ಮಾಡಿದೆ.

      ವಿದೇಶಕ್ಕೆ ತೆರಳಿದ್ದ ಕುಮಾರಸ್ವಾಮಿ ಅವರು ಗುರುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ದುಬೈನಿಂದ ಬೆಂಗಳೂರಿಗೆ ಮರಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+