ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಗಿರೀಶ್ ಕಾರ್ನಾಡ್ ಸಂಭ್ರಮ
ಬೆಂಗಳೂರು, ಡಿಸೆಂಬರ್ 05 : ಜ್ಞಾನಪೀಠ ಪುರಸ್ಕೃತ, ಖ್ಯಾತ ನಿರ್ದೇಶಕ ನಾಟಕಕಾರರು ಆಗಿರುವ ಗಿರೀಶ್ ಕಾರ್ನಾಡ್ ಅವರ ಚಿತ್ರಗಳನ್ನು ವೀಕ್ಷಿಸಲು ಸುಚಿತ್ರ ಫಿಲ್ಮ್ ಸೊಸೈಟಿಯವರು ನಗರದ ಜನತೆಗೆ ಅವಕಾಶ ಕಲ್ಪಿಸಿದೆ. ಮಂಗಳವಾರ(ಡಿ.5)ರಿಂದ ಆಯೋಜಿಸಿದ್ದು ಡಿ.10 ರವರೆಗೆ ನಡೆಯಲಿದೆ.
ಸುಚಿತ್ರ ಫಿಲ್ಮ್ ಸೊಸೈಟಿ ಕಾರ್ನಾಡ್ ಎ-ಸೆಲೆಬ್ರೇಷನ್ ಎನ್ನುವ ಶೀರ್ಷಿಕೆಯೊಂದಿಗೆ ಆಯೋಜಿಸಿದ್ದು ಪ್ರತಿ ದಿನ ಸಂಜೆ 6 ಗಂಟೆಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಪಿಸಿಪಿಎ ಸಭಾಂಗಣದಲ್ಲಿ ಚಿತ್ರ ಪ್ರಸಾರವಾಗಲಿದೆ.

ಕೊನೆಯ ದಿನವಾದ ಡಿ.10 ರಂದು ಗಿರೀಶ್ ಕಾರ್ನಾಡ್ ಅವರೊಂದಿಗೆ ಅವರ ಇಷ್ಟು ವರ್ಷದವರೆಗಿನ ಪಯಣದ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ. ನಂತರ ಬಿ.ವಿ. ಕಾರಂತ್ ಅವರ ಗಿರೀಶ್ ಕಾರ್ನಾಡ್ ಅಭಿನಯಿಸಿರುವ 1972 ರಲ್ಲಿ ತೆರೆಕಂಡಂತಹ 'ವಂಶವೃಕ್ಷ' ಕನ್ನಡ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ಏನು-ಗಿರೀಶ್ ಕಾರ್ನಾಡ್ ಅವರೊಂದಿಗೆ ಸಂಭ್ರಮ
ಎಲ್ಲಿ-ಸುಚಿತ್ರ ಫಿಲ್ಮ್ ಸೊಸೈಟಿ-#36, 9 ನೇ ಮುಖ್ಯರಸ್ತೆ, ಬಿ.ವಿ. ಕಾರಂತ್ ರಸ್ತೆ, ಬನಶಂಕರಿ ಎರಡನೇ ಹಂತ ಬೆಂಗಳೂರು
ಯಾವಾಗ-ಡಿಸೆಂಬರ್ 05 ರಿಂದ 10 ಸಂಜೆ 6 ಗಂಟೆಗೆ












Click it and Unblock the Notifications