KL Rahul: ಭಾಷೆ ವಿಚಾರದಲ್ಲಿ ಭಾರತೀಯರ ಮನಸ್ಸು ಗೆದ್ದ ಕನ್ನಡಿಗ ಕೆ.ಎಲ್ ರಾಹುಲ್ !

KL Rahul: ಕನ್ನಡಿಗ ಮತ್ತು ಕ್ರಿಕೆಟರ್ ಕೆ.ಎಲ್ ರಾಹುಲ್ ಅವರು ಎರಡು ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿ ಇದ್ದಾರೆ. ಒಂದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಕ್ಕಾಗಿ ಮತ್ತೊಂದು ಭಾಷಾ ವಿಚಾರಕ್ಕಾಗಿ. ಹೌದು ಕೆ.ಎಲ್ ರಾಹುಲ್ ಅವರ ಭಾಷಾ ಪ್ರೌಢಿಮೆಯಿಂದ ಬೆಂಗಳೂರಿನ ಹೆಸರು ಮತ್ತೆ ಚರ್ಚೆಯಾಗುವಂತೆ ಮಾಡಿದ್ದಾರೆ. ಇದರೊಂದಿಗೆ ದ್ವಿಭಾಷಾ ನೀತಿ ಮತ್ತು ಹಿಂದಿ ಹೇರಿಕೆ ಅಂತ ಹಲವು ವಿಚಾರಗಳು ಚರ್ಚೆಯಾಗುತ್ತಿವೆ. ಇದೆಲ್ಲದ್ದಕ್ಕಿಂತಲೂ ಹೆಚ್ಚಾಗಿ ಭಾಷೆಯ ವಿಚಾರದಲ್ಲಿ ಕೆ.ಎಲ್ ರಾಹುಲ್ ಅವರು ಎಲ್ಲರ ಮನಸ್ಸು ಗೆದ್ದಿದ್ದು. ಸೂಪರ್ ಎನಿಸಿಕೊಳ್ಳುತ್ತಿದ್ದಾರೆ. ಯಾವ ಕಾರಣಕ್ಕೆ ರಾಹುಲ್ ಅವರು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿದ್ದಾರೆ ಎನ್ನುವುದರ ವಿವರ ಇಲ್ಲಿದೆ.

ಭಾರತದ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿ ಇದ್ದಾರೆ. ಇದಕ್ಕೆ ಕಾರಣ ಅವರು ಪಂಚ ಭಾಷೆಗಳಲ್ಲಿ ಮಾತನಾಡುತ್ತಿರುವುದು. ರಾಹುಲ್ ಅವರು ತುಳು, ಕನ್ನಡ, ತಮಿಳು, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತನಾಡ ಬಲ್ಲರು. ಅವರು ಕ್ರಿಕೆಟಿಗರೊಂದಿಗೆ ಒಂದೊಂದು ಭಾಷೆಯಲ್ಲಿ ಮಾತನಾಡಿರುವುದು ವೈರಲ್ ಆಗುತ್ತಿದೆ. ಈ ಹಿಂದೆ ಪಂದ್ಯವೊಂದರಲ್ಲಿ ಫೀಲ್ಡಿಂಗ್ ಮಾಡುವಾಗ ಕೆ.ಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರು ಕನ್ನಡದಲ್ಲಿ ಮಾತನಾಡಿದ್ದು ಭಾರೀ ವೈರಲ್ ಆಗಿತ್ತು. ಇದೀಗ ಇಂಗ್ಲೆಂಡ್ vs ಭಾರತದ ಟೆಸ್ಟ್‌ ಪಂದ್ಯದಲ್ಲಿ ಕ್ರಿಕೆಟಿಗ ಸಾಯಿ ಸುದರ್ಶನ್ ಅವರೊಂದಿಗೆ ತಮಿಳಿನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.

Kannadigas KL Rahul won the hearts of Indians by speaking in 5 languages

ಈ ವಿಡಿಯೋಗೆ ರಿಯಾಕ್ಟ್‌ ಮಾಡಿರುವ ನೆಟ್ಟಿಗರು, ಕೆ.ಎಲ್. ರಾಹುಲ್ ಅವರು ಕರುಣ್ ನಾಯರ್ ಜೊತೆ ಕನ್ನಡದಲ್ಲಿ ಮಾತನಾಡುತ್ತಿದ್ದರು. ತಮಿಳಿನಲ್ಲಿ ಸಾಯಿ ಸುದರ್ಶನ್ ಅವರೊಂದಿಗೆ ಮತ್ತು ಹಿಂದಿಯಲ್ಲಿ ರಿಷಭ್ ಪಂತ್ ಜೊತೆ ಮಾತನಾಡುತ್ತಿದ್ದರು. ಅವರು ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬಹುಮುಖ ಪ್ರತಿಭೆ ಎಂದು ಹೇಳುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ಸಹ ರಾಹುಲ್‌ ಅವರ ಬಹುಮುಖ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ರಾಹುಲ್ ಬೆಂಗಳೂರು ಹುಡುಗ ಅವರು ಬೆಂಗಳೂರಿನಲ್ಲಿ ಬೆಳೆದಿದ್ದಾರೆ. ಬೆಂಗಳೂರಿನಲ್ಲಿ ಇರುವ ಬಹುತೇಕರಿಗೆ ಎರಡರಿಂದ ಮೂರು ಭಾಷೆ ಬರುತ್ತದೆ ಅಂತ ನೆಟ್ಟಿಗರು ಹೇಳಿದ್ದಾರೆ.

ಉಳಿದ ಕ್ರೀಡಾಪಟುಗಳಿಗಿಂತ ಭಿನ್ನ: ಕೆ.ಎಲ್ ರಾಹುಲ್ ಅವರು ಉಳಿದ ಕ್ರೀಡಾಪಟುಗಳಿಗಿಂತ ಭಿನ್ನ. ಎಲ್ಲಾ ಭಾಷೆಗಳನ್ನು ಗೌರವಿಸುತ್ತಾರೆ. ಹಲವು ಭಾಷೆಗಳಲ್ಲಿ ಮಾತನಾಡುತ್ತಾರೆ. ಇದೇ ರಾಹುಲ್ ಹಾಗೂ ಇನ್ನುಳಿದ ಕ್ರಿಕೆಟಿಗರಿಗೆ ಇರುವ ವ್ಯತ್ಯಾಸ ಎಂದು ಹಲವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ದ್ವಿಭಾಷಾ ನೀತಿ ಹಾಗೂ ಭಾಷಾ ಹೇರಿಕೆಯ ವಿಚಾರವೂ ಚರ್ಚೆಯಾಗಿದೆ. ಒಬ್ಬ ವ್ಯಕ್ತಿ ಹೇಗೆ ಹಲವು ಭಾಷೆಗಳನ್ನು ಕಲಿಯಬಹುದು ಎನ್ನುವುದಕ್ಕೆ ಕೆ.ಎಲ್ ರಾಹುಲ್ ನಿದರ್ಶನ ಅಂತ ಕೆಲವರು ಹೇಳಿದ್ದಾರೆ.

ಕೆಲವರಿಂದ ಟೀಕೆ: ಇನ್ನು ಕೆಲವರು ಈ ವಿಡಿಯೋಗೆ ಟೀಕೆಯನ್ನೂ ಮಾಡಿದ್ದಾರೆ. ಕನ್ನಡಿಗರು ನಾವು ಎಲ್ಲರ ಭಾಷೆಯನ್ನೂ ಮಾತನಾಡುತ್ತೇವೆ. ಇದೇ ಕಾರಣಕ್ಕೆ ಹಲವರು ಕನ್ನಡ ಕಲಿಯುತ್ತಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+