Breaking: ಕನ್ನಡದ ಹಾಸ್ಯ ಕಲಾವಿದ ಮೋಹನ್ ಇನ್ನಿಲ್ಲ - ಮಧು ಮಗ ಖ್ಯಾತಿಯ ಮೋಹನ್
ಬೆಂಗಳೂರು, ಮೇ7 : ಕನ್ನಡ ಸಿನಿಮಾದ ಹಾಸ್ಯ ಕಲಾವಿದ ಮೋಹನ್ ಇನ್ನಿಲ್ಲ. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಮೋಹನ್ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
Recommended Video
ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ಕಲಾವಿದ ಮೋಹನ್ ಜುನೇಜ ವಿಧಿವಶ | Oneindia Kannada
ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾಗಿದ್ದ ಮೋಹನ್ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಕನ್ನಡ ಸಿನಿಮಾ ರಂಗದಲ್ಲಿ ಮಧು ಮಗ ಎಂದೇ ಖ್ಯಾತಿಯನ್ನು ಪಡೆದಿದ್ದ ಹಾಸ್ಯ ಕಲಾವಿದರಾಗಿದ್ದರು. ಕನ್ನಡದ ಚೆಲ್ಲಾಟ , ಕೆಜಿಎಫ್ ಸೇರಿದಂತೆ ಹಲುವು ಸಿನಿಮಾ ಮತ್ತು ಕಿರುತೆರೆಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಕಲಾವಿದರಾಗಿದ್ದರು.

ಕನ್ನಡ ಸಿನಿಮಾದಲ್ಲಿ ಅತಿಹೆಚ್ಚು ಕುಡುಕನ ಪಾತ್ರಗಳನ್ನು ನಿಭಾಯಿಸಿದ ಕೀರ್ತಿ ಮೋಹನ್ ರವರಿಗೆ ಸಲ್ಲುತ್ತದೆ. ಮೋಹನ್ ಅನಾರೋಗ್ಯದ ಕಾರಣದಿಂದಾಗಿ ಸಪ್ತಗಿರಿ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೋಹನ್ ಸಾವನ್ನಪ್ಪಿದ್ದಾರೆ.












Click it and Unblock the Notifications