ಬೆಂಗಳೂರಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ನಿಗೂಢ ಸಾವು
ಬೆಂಗಳೂರು, ಜನವರಿ 24: ಬೆಂಗಳೂರಲ್ಲಿ ಪತ್ರಿಕೋದ್ಯಮ ವಿದ್ಯಾಥಿಯೋಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಕೆ ನಾರಾಯಣಪುರ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ. ಸೋಫಿಯಾ ಮೃತ ವಿದ್ಯಾರ್ಥಿನಿ, ಅವರು ಮುಂಬೈ ಮೂಲದವರಾಗಿದ್ದು, ನಗರದ ಖಾಸಗಿ ಕಾಲೇಜಿನಲ್ಲಿ 4ನೇ ಸೆಮಿಸ್ಟರ್ ಓದುತ್ತಿದ್ದರು. ಸೋಫಿಯಾ ಶವ ಹಾಸ್ಟೆಲ್‌ನ ಕೋಣೆಯ ಬೆಡ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ.
ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 74(ಅಸಹಜ ಸಾವು) ಅಡಿ ಪ್ರಕರಣ ದಾಖಲಾಗಿದೆ.ಅನುಮಾನಾಸ್ಪದವಾಗಿ ಸೋಫಿಯಾ ಮೃತಪಟ್ಟ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ಸೋಫಿಯಾ ಬೆಳಗ್ಗೆ ಸಹಪಾಠಿಗಳ ಜೊತೆ ಮಾತಾಡಿದ್ದಾಳೆ. ಈ ನೀವು ಕಾಲೇಜಿಗೆ ಹೋಗಿ ನಾನು ಬರುವುದಿಲ್ಲ ಎಂದು ತಿಳಿಸಿದ್ದಾಳೆ. ಬಳಿಕ ಸಂಜೆ ಸಹಪಾಠಿಗಳು ಹಾಸ್ಟೆಲ್ ವಾಪಸ್ ಬಂದಾಗ ಸೋಫಿಯಾ ಶವವಾಗಿ ಪತ್ತೆಯಾಗಿದ್ದಾಳೆ.

ಕಳೆದ ಎರಡು ವರ್ಷದಿಂದ ಸೋಫಿಯಾ ಬೆಂಗಳೂರಿನಲ್ಲಿ ನೆಲೆಸಿದ್ದಳು. ಪೊಲೀಸರು ಮುಂಬೈಯಿಂದ ಸೋಫಿಯಾ ಪೋಷಕರ ಆಗಮನಕ್ಕಾಗಿ ಈಗ ಕಾಯುತ್ತಿದ್ದಾರೆ. ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ಸೋಫಿಯಾ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ ತನಿಖೆ ನಡೆಯುತ್ತಿದೆ.












Click it and Unblock the Notifications