ಬೆಂಗಳೂರಿನಲ್ಲಿ ಶನಿವಾರ ಉದ್ಯೋಗ ಮೇಳ
ಬೆಂಗಳೂರು, ಫೆ.13 : ಬೆಂಗಳೂರು ತಾಂತ್ರಿಕ ವಿದ್ಯಾಲಯ ನಿರುದ್ಯೋಗಿ ಯುವಕರಿಗೆ ಫೆ.14ರಂದು ಉದ್ಯೋಗ ಮೇಳವನ್ನು ಆಯೋಜಿಸಿದೆ. ಸರ್ಜಾಪುರದಲ್ಲಿರುವ ಬಿಟಿಐ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಉದ್ಯೋಗ ಮೇಳ ಬೆಳಗ್ಗೆ 8.30ರಿಂದ ಮಧ್ಯಾಹ್ನ 2.30ರವರೆಗೆ ನಡೆಯಲಿದ್ದು, 25 ರಿಂದ 30 ಕಂಪೆನಿಗಳು ಭಾಗವಹಿಸಲಿವೆ. ಆಸಕ್ತ ಯುವಕರು ಮೇಳದಲ್ಲಿ ಭಾಗವಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉದ್ಯೋಗ ಮೇಳದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬಿಟಿಐ ಕಾಲೇಜು, ಕೊಡತಿ ಗೇಟ್, ಸರ್ಜಾಪುರ ರಸ್ತೆಗೆ ಭೇಟಿ ನೀಡಬಹುದು ಅಥವಾ 9916208215 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. [ಕೊಪ್ಪಳ : ಅಪರ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಸಲ್ಲಿಸಿ]
ಕ್ಷೇಮಪಾಲಕರ ಹುದ್ದೆಗೆ ಸಂದರ್ಶನ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬೆಂಗಳೂರಿನ ವಿದ್ಯಾನಗರದಲ್ಲಿರುವ ಕ್ರೀಡಾ ವಸತಿ ಶಾಲೆ ಹಾಗೂ ಶ್ರೀ ಕಂಠೀರವ ಕ್ರೀಡಾಂಗಣದ ಸಂಕೀರ್ಣದಲ್ಲಿರುವ ಹಿರಿಯರ ಕ್ರೀಡಾ ವಸತಿ ನಿಲಯಕ್ಕೆ ಸಂಚಿತ ಗೌರವ ಧನದ ಆಧಾರದ ಮೇಲೆ ಕ್ಷೇಮಪಾಲಕರನ್ನು 179 ದಿನಗಳ ಅವಧಿಗೆ ನೇಮಿಸಿಕೊಳ್ಳಲಿದ್ದು ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದೆ.
ಪದವೀಧರರು, ನಿವೃತ್ತ ಸೈನಿಕರು, ನಿವೃತ್ತ ಕ್ಷೇಮಪಾಲಕರಿಗೆ ಆದ್ಯತೆ ನೀಡಲಾಗುತ್ತದೆ. ಎಲ್ಲಾ ಭತ್ಯೆಗಳೂ ಸೇರಿ ರೂ 12,000 ಗಳ ವೇತನ ನೀಡಲಾಗುತ್ತದೆ. ಫೆಬ್ರವರಿ 23 ರಂದು ಮಧ್ಯಾಹ್ನ 3-00 ಗಂಟೆಗೆ ಸಂದರ್ಶನ ನಡೆಯಲಿದೆ.
ಸಂದರ್ಶನ ನಡೆಯುವ ವಿಳಾಸ : ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೃಪತುಂಗಾ ರಸ್ತೆ, ಬೆಂಗಳೂರು - 560001 ಅರ್ಜಿಯೊಂದಿಗೆ ಹಾಜರಾಗಲು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.












Click it and Unblock the Notifications