ಜ್ಯುವೆಲರಿ ಅಂಗಡಿಯಲ್ಲಿ ಕಳವು ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರು ನವೆಂಬರ್,20: ಆಭರಣ ಖರೀದಿಸುವ ಸೋಗಿನಲ್ಲಿ ಜುವೆಲರಿ ಅಂಗಡಿಗೆ ಬಂದಿರುವ ಚೋರ ಜೋಡಿ ಟ್ರಯಲ್ ನೋಡುವ ನೆಪದಲ್ಲಿ 40 ಗ್ರಾಂ ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗಿರುವ ಘಟನೆ ನಗರದ ಮುರುಗೇಶಪಾಳ್ಯದಲ್ಲಿ ನಡೆದಿದೆ. ಎಟಿಎಂಗೆ ಹೋಗಿ ಬರುವುದಾಗಿ ನಾಟಕವಾಡಿ ಚಿನ್ನದ ಸರ ಎಗರಿಸಿರುವ ಚೋರ ಜೋಡಿಯ ನಾಟಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿನ್ನದ ಸರ ಖರೀದಿಸುವ ಸೋಗಿನಲ್ಲಿ ಯುವಕ ಹಾಗೂ ಯುವತಿ ಮುರುಗೇಶಪಾಳ್ಯದ ಚಿನ್ನದ ಅಂಗಡಿಗೆ ಭೇಟಿ ನೀಡಿದ್ದಾರೆ. ಚಿನ್ನದ ಸರಗಳನ್ನು ನೋಡುವುದಾಗಿ ಪಡೆದುಕೊಂಡ ಯುವತಿ ಎರಡು ಸರಗಳನ್ನು ಕೊರಳಿಗೆ ಹಾಕಿಕೊಂಡು ಆಯ್ಕೆ ಮಾಡಿಕೊಂಡಿದ್ದಾಳೆ. ವ್ಯಾಪಾರ ಕುದುರಿಸಿದ ಯುವಕ ಹಣ ಕಡಿಮೆಯಿದ್ದು ಎಟಿಎಂಗೆ ಹೋಗಿ ಬರುವುದಾಗಿ ಹೇಳಿ ಬೈಕ್ ಸ್ಟಾರ್ಟ್ ಮಾಡಿದ್ದಾನೆ.

ಇನ್ನೊಂದು ಸರ ತೋರಿಸಿ ಎಂದು ಅಂಗಡಿ ಮಾಲೀಕನ ಗಮನ ಬೇರಡೆ ಸೆಳೆದು ಎರಡು ಸರ ಜತೆ ಜೋಡಿ ಬೈಕ್ ನಲ್ಲಿ ಪರಾರಿಯಾಗಿದೆ. ಚೋರ ಜೋಡಿ ಎರಡು ಚಿನ್ನದ ಸರ ಪಡೆದು ಪರಾರಿಯಾಗಿದ್ದಾರೆ. ಸರ ಕಳೆದುಕೊಂಡ ಚಿನ್ನದ ಅಂಗಡಿ ಮಾಲೀಕ ಜೀವನ ಭೀಮಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿಟಿವಿ ದೃಶ್ಯ ಆಧರಿಸಿ ರಮೇಶ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿತ ಮಹಿಳೆಗಾಗಿ ಶೋಧ ನಡೆಸುತ್ತಿದ್ದಾರೆ.












Click it and Unblock the Notifications