ಜಯದೇವ ಮೇಲ್ಸೇತುವೆ ತೆರವು ಕಾರ್ಯ ಆರಂಭ ಯಾವಾಗ?
ಬೆಂಗಳೂರು, ಜುಲೈ 16: ಜಯದೇವ ಮೇಲ್ಸೇತುವೆ ತೆರವು ಕಾರ್ಯವನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.
ಈ ಸೋಮವಾರದಿಂದಲೇ ತೆರವು ಕಾರ್ಯ ಆರಂಭವಾಗಬೇಕಿತ್ತು ಆದರೆ ಅದನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಜುಲೈ 15ರಿಂದ ಬನ್ನೇರುಘಟ್ಟ ರಸ್ತೆಯಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ಫ್ಲೈಓರ್ ಲೂಪ್ ನಿರ್ಮಾಣಮಾಡಲಿರುವ ಕಾರಣ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಸುವುದಾಗಿ ತಿಳಿಸಲಾಗಿತ್ತು.
ಈ ಲೂಪ್ ಬನ್ನೇರುಘಟ್ಟ ರಸ್ತೆಯಿಂದ ಸೆಂಟ್ರಲ್ ಸಿಲ್ಕ್‌ಬೋರ್ಡ್ ಜಂಕ್ಷನ್‌ಗೆ ಸಂಪರ್ಕಿಸುತ್ತದೆ. ಗುರುವಾರದಿಂದ ಈ ಮಾರ್ಗದಲ್ಲಿ ಸಂಚಾರವನ್ನು ನಿಷೇಧಿಸಲಾಗುತ್ತಿದ್ದು ಮುಂದಿನ ಸೋಮವಾರದಿಂದ ಕಾಮಗಾರಿ ಆರಂಭವಾಗಲಿದೆ.

ನಮ್ಮ ಮೆಟ್ರೋ ರೀಚ್ 5(ಆರ್‌ವಿ ರಸ್ತೆಯಿಂದ ಮೊಬ್ಬಸಂದ್ರ) ರೀಚ್ 6 ಲೈನ್(ಗೊಟ್ಟಿಗೆರೆಯಿಂದ ನಾಗವಾರ) ಕಾಮಗಾರಿಯಿಂದ ಬಿಟಿಎಂ ಲೇಔಟ್, ಜಯನಗರ, ಬನ್ನೇರುಘಟ್ಟ ರಸ್ತೆಯ ನಿವಾಸಿಗಳಿಗೆ ಅಡಚಣೆ ಉಂಟಾಗಲಿದೆ.
ಬಿಎಂಆರ್‌ಸಿಎಲ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಬದಲಿ ಮಾರ್ಗ ಈಗಾಗಲೇ ಸಂಚಾರ ಪೊಲೀಸರು ಗುರುತಿಸಿದ್ದಾರೆ. 2017ರಲ್ಲೇ ಅನುಮತಿ ನೀಡಿದಂತೆ ಮೊದಲು ಬಿಎಂಆರ್‌ಸಿಎಲ್ ಮೇಲ್ಸೇತುವೆಯನ್ನು ತೆರವುಗೊಳಿಸುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈ ಮೇಲ್ಸೇತುವೆಯ ನಿರ್ಮಾಣಕ್ಕೆ 21 ಕೋಟಿ ರೂ ವೆಚ್ಚ ಮಾಡಿತ್ತು.
ಮೈಕೋ ಲೇಔಟ್‌ನಲ್ಲಿ ಟ್ರಾಫಿಕ್ ಪೊಲೀಸರೂ ಈಗಾಗಲೇ ಗುರಪ್ಪನಪಾಳ್ಯಕ್ಕೆ ತೆರಳುವವರು ಸರ್ವೀಸ್ ರಸ್ತೆ ಮೂಲಕ ತೆರಳಲು ಸೂಚಿಸಿದ್ದಾರೆ. ಒಟ್ಟು ಎರಡು ಹಂತಗಳಲ್ಲಿ ಜಯದೇವ ಮೇಲ್ಸೇತುವೆ ತೆರವು ಕಾರ್ಯ ನಡೆಸಲಾಗುತ್ತದೆ.
ಜುಲೈ ಮೂರನೇ ವಾರದಲ್ಲಿ ಬನ್ನೇರುಘಟ್ಟದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ತಲುಪುವ ಕಡೆಗಿನ ಫ್ಲೈಓವರ್‌ನ್ನು ಮೊದಲು ತೆರವುಗೊಳಿಸಲಾಗುತ್ತದೆ. ಬಳಿಕ ಮುಖ್ಯ ಮೇಲ್ಸೇತುವೆ ಭಾಗವನ್ನು ನಂತರದ ದಿನದಲ್ಲಿ ತೆರವುಗೊಳಿಸಲಾಗುತ್ತದೆ. 12 ವರ್ಷಗಳ ಹಳೆಯ ಸೇತುವೆಯನ್ನು ತೆರವುಗೊಳಿಸಲು ಎರಡರಿಂದ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದರು.
-
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Karnataka Weather: ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ 39 ಡಿಗ್ರಿ ದಾಟಿದ ತಾಪಮಾನ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications